More

    ರಂಗಭೂಮಿ ಕಲೆ ಉಳಿಸಲು ಮುಂದಾಗಬೇಕು

    ರಾಮದುರ್ಗ: ಕರಾವಳಿ ಭಾಗದ ಅತ್ಯಂತ ಪ್ರಭಾವಿ ರಂಗಭೂಮಿ ಕಲೆಯಾದ ಯಕ್ಷಗಾನ, ಬಯಲಾಟದಂಥ ಕಲೆಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಮದುರ್ಗದ ಜನತೆಗೆ ರಂಗಭೂಮಿ ಕಲೆಯನ್ನು ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಾಪಂ ಇಒ ಪ್ರವೀಣಕುಮಾರ ಸಾಲಿ ಹೇಳಿದರು.

    ಪಟ್ಟಣದ ತಿರುಮಲ ಸಭಾಭವನದಲ್ಲಿ ತಿರುಮಲ ಸಮೂಹ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಜನತೆ ಟಿವಿ ಮಾಧ್ಯಮಗಳತ್ತ ಒಲವು ತೋರಿಸುತ್ತಿರುವುದರಿಂದ ರಂಗಭೂಮಿ ಕಲೆಗಳು ನಸಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಪಾರಿಜಾತ, ದೊಡ್ಡಾಟ, ಸಂಗ್ಯಾ ಬಾಳ್ಯಾ ಮುಂತಾದ ರಂಗಭೂಮಿ ಕಲೆಗಳು ಪೋಷಣೆ ಇಲ್ಲದೆ ಅವನತಿಯ ಹಾದಿ ಹಿಡಿದಿವೆ. ಯಕ್ಷಗಾನ ನಿರ್ದಿಷ್ಟ ಕಲಾವಿದರ ಬಳಗವನ್ನು ಹೊಂದಿದ್ದರಿಂದ ಅದು ಇನ್ನೂ ಜೀವಂತಿಕೆ ಉಳಿಸಿಕೊಂಡಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ತಿರುಮಲ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಜಯ ಎನ್. ಶೆಟ್ಟಿ ಮಾತನಾಡಿ, ರಂಗಭೂಮಿ ಪ್ರಭಾವಶಾಲಿ ಮಾಧ್ಯಮ ಕಲೆಯಾಗಿದ್ದು, ಟಿವಿ ಸಿನಿಮಾ ಬಂದಮೇಲೆ ತನ್ನ ಮಹತ್ವ ಕಳೆದುಕೊಳ್ಳುತ್ತಿದೆೆ. ರಂಗಭೂಮಿ ಕಲೆಯನ್ನು ನಂಬಿದ ಕಲಾವಿದರು ಸಂಕಷ್ಟದಲ್ಲಿದ್ದಾರೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಯುವ ಧುರೀಣ ಅನಿಕೇತ ಪಟ್ಟಣ, ಯಕ್ಷಗಾನ ಮಂಡಳಿಯ ಮುಖ್ಯಸ್ಥ ರಾಘವೇಂದ್ರ ಮಯ್ಯ ಹಾಲಾಡಿ ಇತರರು ಇದ್ದರು. ಹಾಲಾಡಿಯ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ನೂತನ ಪ್ರಸಂಗ ಯಕ್ಷಗಾನ ಪ್ರದರ್ಶನ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts