More

    ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡಿ

    ಸಂಬರಗಿ: ಗ್ರಾಮಸ್ಥರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಿದ ಸರ್ಕಾರಿ ಯೋಜನೆ ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಸಂಬರಗಿ ಗ್ರಾಮದಲ್ಲಿ ಅಥಣಿ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿನ ಒತ್ತುವರಿ ಮಾಡಿಕೊಂಡಿರುವ ರಸ್ತೆ ತೆರವುಗೊಳಿಸಿ ಎಂದು ಪಿಡಿಒಗೆ ಸೂಚಿಸಿದರು.

    ಸರ್ಕಾರದ ಆಸ್ತಿ ಕಾಪಾಡುವುದು ನಮ್ಮ ಕರ್ತವ್ಯ. ಅದನ್ನು ಅಧಿಕಾರಿಗಳು ನಿರ್ಲಕ್ಷ್ಯಿಸಬಾರದು. ಸಂಬರಗಿ-ನಾಗನೂರ ಸಂಪರ್ಕ ರಸ್ತೆ ಅತಿಕ್ರಮಣವಾಗಿದ್ದರಿಂದ ಸರ್ವೇ ಮಾಡಿಸಿ ಹದ್ದುಬಸ್ತು ಗುರುತು ಮಾಡಬೇಕು. ಪಶು ಆಸ್ಪತ್ರೆ ಗಲೀಜಾಗಿದ್ದು, ಆವರಣ ಸ್ವಚ್ಛಗೊಳಿಸಿ ಎಂದು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

    ಅಗ್ರಾಣಿ ನದಿ ಸ್ವಚ್ಛಗೊಳಿಸುವ ಸಂಬಂಧ ಉದ್ಯೋಗ ಖಾತ್ರಿ ಯೋಜನೆಯಡಿ 8.05 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈ ಅನುದಾನವನ್ನು ಗ್ರಾಪಂ ಮೂಲಕ ಅನುಷ್ಠಾನಗೊಳಿಸಲಾಗುವುದು. ಖಿಳೇಗಾಂವ ಬಸವೇಶ್ವರ ಯೋಜನೆ ಅನುಷ್ಠಾನಗೊಂಡರೆ ಅಗ್ರಾಣಿ ನದಿ ವರ್ಷವಿಡಿ ತುಂಬಿ ಹರಿಯುತ್ತದೆ ಎಂದರು.

    ಪವಾರ ಲಾಂಡಗೆ ತೋಟದಲ್ಲಿ ಈಗಾಗಲೇ ನಿರ್ಮಿಸಲಾದ ನೀರಿನ ಟ್ಯಾಂಕ್‌ಗೆ ಪೈಪ್‌ಲೈನ್ ಮಾಡಲಾಗಿದೆ. ಆದರೆ, ಟ್ಯಾಂಕ್‌ಗೆ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದ್ದು, ನೀರು ಪೂರೈಸಲು ಕ್ರಮವಹಿಸಿ ಎಂದು ಬಿಜೆಪಿ ಧುರೀಣ ಬಸಗೌಡ ಪಾಟೀಲ ಮನವಿ ಮಾಡಿದರು.

    ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಹಾದೇವ ಕೋರೆ, ತಹಸೀಲ್ದಾರ್ ಸುರೇಶ ಮುಂಜೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾರಿಕಾ ಸಾತಪುತೆ, ತಾಲೂಕು ಪಂಚಾಯಿತಿ ಅಧಿಕಾರಿ ಶೇಖರ ಕರಬಸಪ್ಪಗೋಳ, ಪಂಚಾಯತ್ ರಾಜ್ ಇಲಾಖೆಯ ವೀರಣ್ಣ ವಾಲಿ, ಪ್ರವೀಣ ಪಾಟೀಲ, ದೇವರಾಜ್ ಅರಸ್ ನಿಗಮದ ವೆಂಕಟೇಶ ಕುಲಕರ್ಣಿ, ಹೆಸ್ಕಾಂ ವಿಭಾಗದ ವಿಜಯಕುಮಾರ ಕೋಲಿ, ಧರೆಪ್ಪ ತೇಲಿ, ಅಣ್ಣಪ್ಪ ಮಿಸಾಳ, ಶಿವಾಜಿ ಸಾತಪುತೆ, ಸಂಜೀವಕುಮಾರ ಸದಲಗೆ, ಮುರಳೀಧರ ದೇಶಪಾಂಡೆ, ರಾಮ ಸೊಡ್ಡಿ, ವಿಶ್ವನಾಥ ದೇವಮಾನೆ, ಅಬ್ದುಲ್ ಮುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts