More

    ಯೋಗದಿಂದ ಚಂಚಲ ಮನಸ್ಸು ನಿಯಂತ್ರಣ

    ಹುಬ್ಬಳ್ಳಿ: ಯೋಗದಿಂದ ಸದೃಢ ಆರೋಗ್ಯ ಹೊಂದುವುದಲ್ಲದೇ ಚಂಚಲ ಮನಸ್ಸನ್ನೂ ನಿಯಂತ್ರಿಸಲು ಸಾಧ್ಯ ಎಂದು ಶಿರಹಟ್ಟಿ ಸ್ರೀ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಫಕ್ಕಿರ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ಯೋಗ ಸ್ಪರ್ಶ ಪ್ರತಿಷ್ಠಾನ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಿರುವ ‘ಯೋಗ ಸಂಗಮ’ ಯೋಗ ಪ್ರಶಿಕ್ಷಣ ಶಿಬಿರಕ್ಕೆ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಆರೋಗ್ಯವಂತ ಮನುಷ್ಯನಲ್ಲಿ ಮಾತ್ರ ಮನಸ್ಸು ಸ್ಥಿರವಾಗಿರುತ್ತದೆ. ಸಂಸ್ಕಾರಯುತ ಜೀವನದ ಜತೆಗೆ ಹಿತ-ಮಿತ ಆಹಾರ ಸೇವನೆ, ನಿದ್ರೆ, ಹೆಚ್ಚು ನೀರು ಕುಡಿಯುವುದು ಒಳಿತು ಎಂದರು.

    ಸ್ವಾಗತ ಸಮಿತಿ ಸದಸ್ಯ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗ ಬರುವ ಮುನ್ನವೇ ಯೋಗಾಸನಗಳನ್ನು ಮಾಡಬೇಕು ಎಂದರು.

    ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಉದ್ಯಮಿ ರವಿ ಸಂಕೇಶ್ವರ, ಎಸ್​ಪಿವೈಎಸ್​ಎಸ್ ಉಪಾಧ್ಯಕ್ಷ ಡಾ.ಎ.ಎಂ. ಶಿವಕುಮಾರ ಸಂಚಾಲಕಿ ನಾಗವೇಣಿ, ಇತರರು ಇದ್ದರು.

    ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪ, ಪಾಟೀದಾರ ಭವನ, ಹವ್ಯಕ ಭವನ, ವಿಶ್ವನಾಥ ಕಲ್ಯಾಣ ಮಂಟಪ, ವಾಸವಿ ಮಹಲ್, ದೇಶಪಾಂಡೆ ಎಜುಕೇಶನ್ ಟ್ರಸ್ಟ್ ಸಭಾ ಭವನದಲ್ಲಿಯೂ ಆಯೋಜಿಸಿರುವ ‘ಯೋಗ ಸಂಗಮ’ಕ್ಕೆ ಏಕಕಾಲದಲ್ಲಿ ಚಾಲನೆ ನೀಡಲಾಯಿತು.

    ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಯೋಗ ಶಿಕ್ಷಕರು, ಮೂರು ಸಾವಿರಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಹಾಗೂ ಯೋಗಾಸಕ್ತರರು ಮೊದಲ ದಿನದ ಉಚಿತ ಯೋಗ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಆರು ಕೇಂದ್ರದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಯೋಗ ವಿದ್ಯೆ ಅರಿವು ಮೂಡಿಸುವ ಸತ್ಸಂಗ, ಮಾತೃ ಭೋಜನ ಹಾಗೂ ಯೋಗ ನಡಿಗೆ ಕಾರ್ಯಕ್ರಮಗಳನ್ನು ತರಬೇತಿ ವೇಳೆ ನೀಡಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಶಿಬಿರದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಿದ್ದರು.

    ಶಿಬಿರದಲ್ಲಿ ಜರ್ಮನಿ ಮಹಿಳೆ

    ಹುಬ್ಬಳ್ಳಿಯಲ್ಲಿ ನಾಲ್ಕು ದಿನಗಳವರೆಗೆ ನಡೆಯುತ್ತಿರುವ ಉಚಿತ ಯೋಗ ಶಿಬಿರಕ್ಕೆ ಜಮರ್ನಿಯ ಸೋಫಿಯಾ ಆಗಮಿಸಿದ್ದಾರೆ. ಇವರು ಭಾರತದಲ್ಲಿಯೇ ಒಂದು ವರ್ಷದಿಂದ ಇದ್ದು, ಯೋಗಾಸಕ್ತಿ ತೋರಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ದೇಶಪಾಂಡೆ ಎಜುಕೇಶನ್ ಟ್ರಸ್ಟ್​ನಲ್ಲಿ ಉಳಿದುಕೊಂಡಿದ್ದು, ‘ಯೋಗ ಸಂಗಮ’ದಲ್ಲಿ ಸಕ್ರಿಯರಾಗಿದ್ದಾರೆ. ಅಪಘಾನಿಸ್ತಾನ, ಇಸ್ರೇಲ್ ಸೇರಿ ಕೆಲ ರಾಷ್ಟ್ರಗಳಿಂದಲೂ ಯೋಗಾಸಕ್ತರು ಬಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts