More

    ಯೋಗಕ್ಕಿದೆ ರಾಷ್ಟ್ರಭಕ್ತಿ ಜಾಗೃತಗೊಳಿಸುವ ಶಕ್ತಿ

    ಹುಬ್ಬಳ್ಳಿ: ದೇಹ ಮತ್ತು ಮನಸ್ಸನ್ನು ಆರೋಗ್ಯವಂತಾಗಿಸುವ, ಉತ್ತಮ ವಿಚಾರ ಮೂಡಿಸುವ ಮೂಲಕ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಶಕ್ತಿ ಯೋಗಕ್ಕೆ ಇದೆ. ಯೋಗದಿಂದ ಅಮೂಲ್ಯ ಮಾನವ ಸಂಪತ್ತು ನಿರ್ವಿುಸಬಹುದು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

    ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಯೋಗಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ವಿಆರ್​ಎಲ್ ಲಾಜಿಸ್ಟಿಕ್ಸ್ , ಕನ್ನಡದ ನಂ 1 ಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ 247 ಸುದ್ದಿವಾಹಿನಿ, ಪವರ್ ನ್ಯೂಸ್, ಪತಂಜಲಿ ಯೋಗ ಪೀಠದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಯೋಗ ಶಿಬಿರದಲ್ಲಿ ಭಾನುವಾರ ಬೆಳಗ್ಗೆ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ಯೋಗ ಮಾಡಬೇಕು. ಯೋಗದಿಂದ ಸದೃಢರಾಗಲು ಸಾಧ್ಯ. ಪ್ರಜೆಗಳು ಸದೃಢರಾದರೆ ಆರೋಗ್ಯವಂತ ಭಾರತ ನಿರ್ವಣಗೊಳ್ಳುತ್ತದೆ ಎಂದರು.

    ಯೋಗಾಭ್ಯಾಸ ಕಲೆಯೂ ಹೌದು, ವಿಜ್ಞಾನವೂ ಹೌದು. ಯೋಗಗುರು ಬಾಬಾ ರಾಮದೇವ್ ದೇಶದ ಮೂಲೆ ಮೂಲೆಗಳಿಗೆ ಯೋಗ ತಲುಪಿಸಿದ್ದಾರೆ. ಅವರ ಯೋಗ ಕೌಶಲ, ಪ್ರತಿಭೆಯನ್ನು ಮೆಚ್ಚಿ ಸ್ವತಃ ನಾನೂ ಅವರನ್ನು ಗುರು ಎಂದು ಕರೆಯುತ್ತೇನೆ ಎಂದು ತಿಳಿಸಿದರು. ವಸುಧೈವ ಕುಟುಂಬಕಂ ಕಲ್ಪನೆಯನ್ನು ಜಗತ್ತಿಗೆ ಭಾರತೀಯರು ನೀಡಿದ್ದಾರೆ. ಯುವಕರು ಸ್ವಯಂ ನಿಯಂತ್ರಣ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಬದಲಾದ ಆಹಾರ ಪದ್ಧತಿಯಿಂದ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ. ಸರಳ ಯೋಗಾಭ್ಯಾಸದಿಂದ ದೇಶಕ್ಕೆ ಅವರು ಅಮೂಲ್ಯ ಸಂಪತ್ತಾಗಲು ಸಾಧ್ಯ ಎಂದು ಹೇಳಿದರು. ಹಿಂದು ಧರ್ಮ ಕೇವಲ ಧರ್ಮವಷ್ಟೇ ಅಲ್ಲ, ಶ್ರೇಷ್ಠ ಜೀವನ ಪದ್ಧತಿ. ಆದರೆ ಕೆಲವರಿಗೆ ತಾವು ಹಿಂದುಸ್ತಾನಿಗಳೆಂದು ಹೇಳಿಕೊಳ್ಳಲೂ ಹಿಂಜರಿಕೆ. ಹಿಂದು-ಮುಸ್ಲಿಂ ಎಲ್ಲರೂ ಭಾರತೀಯರು. ಜಾತಿ ಭೇದ ತೊರೆದು ಎಲ್ಲರೂ ಯೋಗ ಮಾಡುವ ಮೂಲಕ ಯೋಗಿಗಳಾಗಬೇಕು ಎಂದು ಸಲಹೆ ನೀಡಿದರು.

    ಇದೇ ಸಂದರ್ಭದಲ್ಲಿ ಬಾಬಾ ರಾಮದೇವ್ ಅವರು ಉಪರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ವಿವಿಧ ಆಸನಗಳನ್ನು ಮಾಡಿ, ಶಿಬಿರಾರ್ಥಿಗಳಿಂದಲೂ ಮಾಡಿಸಿದರು. ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಸಂಸದ ಭಗವಂತ ಖೂಬಾ 4ನೇ ದಿನದ ಯೋಗ ಶಿಬಿರ ಉದ್ಘಾಟಿಸಿದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ಪತಂಜಲಿ ಯೋಗ

    ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮತ್ತಿತರರಿದ್ದರು.

    ಯೋಗ ಮಾಡಿ ಯೋಗಿಗಳಾಗಿ: ಬೆಳಗಿನಜಾವ 5 ಗಂಟೆಗೆ ಯೋಗ ಮುದ್ರೆಗಳ ಮೂಲಕ ಶಿಬಿರ ಪ್ರಾರಂಭಿಸಿದ ಬಾಬಾ ರಾಮದೇವ್, ಜಿಮ್ೆ ಹೋಗಿ ದೇಹ ಸದೃಢಗೊಳಿಸುವ ಬದಲು ಯೋಗಾಭ್ಯಾಸದಿಂದ ದೇಹ ಹಾಗೂ ಮನಸ್ಸನ್ನು ಆರೋಗ್ಯವಾಗಿಡಿ ಎಂದು ಸಲಹೆ ನೀಡಿದರು. ಜಿಮ್ೆ ಹೋಗುವವರು ದೇಹ ಬೆಳೆಸುವ ಉದ್ದೇಶದಿಂದ ಸ್ಟಿರಾಯ್್ಡ ಸೇವಿಸುವುದಿದೆ. ವೃದ್ಧಾಪ್ಯದಲ್ಲಿ ಅದರ ದುಷ್ಪರಿಣಾಮ ಕಾಣಿಸಿಕೊಂಡು, ರೋಗಗಳಿಂದ ಬಳಲುತ್ತಾರೆ. ನಿತ್ಯ ಯೋಗ ಮಾಡುವುದರಿಂದ ದೇಹ ಸದೃಢವಾಗುತ್ತದೆ. ಯೋಗ, ಪ್ರಾಣಾಯಾಮ ಮಾಡುವವರ ಜೀವಿತಾವಧಿಯೂ ದೀರ್ಘವಾಗಿರುತ್ತದೆ ಎಂದು ತಿಳಿಸಿದರು. ಭಾರತದಲ್ಲಿ ಯೋಗ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಸರ್ಕಾರ ಅಧಿಕಾರದಲ್ಲಿದೆ. ಸ್ವತಃ ಪ್ರಧಾನಿಯವರು ಯೋಗ ಮಾಡುತ್ತಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಯೋಗಿಗಳು. ಜನಸಾಮಾನ್ಯರೂ ಯೋಗಿಗಳಾಗಬೇಕೆಂಬುದು ಪ್ರಧಾನಿಯವರ ಆಶಯ ಎಂದರು.

    ಏಕತೆ ಮೂಡಿಸುತ್ತದೆ: ಯೋಗ ಪ್ರಾಚೀನ ಭಾರತ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಏಕತೆ ಕೂಡಿಸುತ್ತದೆ. ಯೋಗ ವ್ಯಾಯಾಮವಷ್ಟೇ ಅಲ್ಲ, ಅದು ಜಗತ್ತು ಮತ್ತು ಪ್ರಕೃತಿಯೊಂದಿಗೆ ಏಕತೆಯ ಪ್ರಜ್ಞೆ ಜೋಡಿಸುತ್ತದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು.

    ವಿವಿಧ ಆಸನ ಮಾಡಿದ ಸಚಿವ, ಸಂಸದ: ಶಿಬಿರಾರ್ಥಿಗಳಿಗೆ ಯೋಗಾಸನದ ಮಾಹಿತಿ ನೀಡುತ್ತಿದ್ದ ಬಾಬಾ ರಾಮದೇವ್, ತಮ್ಮೊಂದಿಗೆ ಯೋಗ ಮಾಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಂಸದ ಭಗವಂತ ಖೂಬಾ ಅವರಿಗೆ ಆಹ್ವಾನ ನೀಡಿದರು. ಬಾಬಾ ರಾಮದೇವ್ ಅವರೊಂದಿಗೆ ಸೂರ್ಯನಮಸ್ಕಾರ, ಭುಜಂಗ ಆಸನ, ದಂಡ ಮತ್ತಿತರ ವ್ಯಾಯಾಮಗಳನ್ನು ಸಚಿವ ಜೋಶಿ ಹಾಗೂ ಸಂಸದ ಖೂಬಾ ಮಾಡಿದರು. ಸುಮಾರು 10 ನಿಮಿಷಗಳವರೆಗೆ ಇಬ್ಬರೂ ಜನಪ್ರತಿನಿಧಿಗಳು ಯೋಗಾಭ್ಯಾಸ ಮಾಡಿದರು.

    ಬಾಬಾ ಹೇಳಿದ ಹೆಲ್ತ್ ಟಿಪ್ಸ್: =ತಲೆಗೆ ಶುದ್ಧವಾದ ಕೊಬ್ಬರಿ ಎಣ್ಣೆ ಹಚ್ಚಿ. ಇಲ್ಲದಿದ್ದರೆ ಹೊಟ್ಟು ಆಗುತ್ತದೆ. =ಕೆಲ ಕೊಬ್ಬರಿ ಎಣ್ಣೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮಿನರಲ್ ಆಯಿಲ್ ಹೆಸರಲ್ಲಿ ಮಿಶ್ರಣ ಮಾಡಲಾಗುತ್ತಿದೆ. =ಚಿಂತೆಯಿಂದಲೂ ತಲೆಯಲ್ಲಿ ಹೊಟ್ಟು ಆಗುತ್ತದೆ. ಇದರಿಂದ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. =ಅಡುಗೆಗೆ ಸದಾ ಒಂದೇ ರೀತಿಯ ಎಣ್ಣೆ ಬಳಸಬೇಡಿ. =ಪ್ರತಿ ಬಾರಿ ಆಹಾರ ಸೇವಿಸಿದ ನಂತರ ಹಲ್ಲು ಉಜ್ಜಿ. =ಬ್ರಷ್​ನಿಂದ ಹಲ್ಲಿನ ಮೇಲೆ-ಕೆಳಗೆ ತಿಕ್ಕಿ. ಅಡ್ಡವಾಗಿ ತಿಕ್ಕಬೇಡಿ. ಬಹಳ ಹೊತ್ತು ಬ್ರಷ್ ಮಾಡಬೇಡಿ. =ಹಲ್ಲು ಜಿಡ್ಡುಗಟ್ಟಿದ್ದರೆ ಉಪ್ಪಿನಿಂದ ತಿಕ್ಕಿ.

    ಕನ್ನಡದಲ್ಲೇ ಮಾತು ಆರಂಭ: ಭಾನುವಾರದಂದು ಹುಬ್ಬಳ್ಳಿಯ ಮೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪರಾಷ್ಟ್ರಪತಿಗಳು ಕನ್ನಡದಲ್ಲೇ ಮಾತು ಆರಂಭಿಸುವ ಮೂಲಕ ನೆರೆದ ಸಹಸ್ರಾರು ಜನರ ಮನಗೆದ್ದರು. ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳ ಹೆಸರು, ಪದನಾಮ ಹೇಳಿ, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಅರ್ಧದಷ್ಟು ಭಾಷಣವನ್ನು ಕನ್ನಡದಲ್ಲೇ ಮಾಡಿದರು. ನಂತರ ಹಿಂದಿ, ಇಂಗ್ಲಿಷ್​ನಲ್ಲಿ ಮುಂದುವರಿಸಿದರು.

    ನಾನು ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ಕೆಲವು ಯೋಗಾಸನ ಕಲಿತಿದ್ದೇನೆ. ನನಗೆ ಈಗ 70 ವರ್ಷ ಸಮೀಪಿಸುತ್ತಿದ್ದರೂ ನಿತ್ಯ ಒಂದು ತಾಸು ಬ್ಯಾಡ್ಮಿಂಟನ್ ಆಟವಾಡಿ, ಯೋಗ ಮಾಡುತ್ತೇನೆ. | ಎಂ. ವೆಂಕಯ್ಯನಾಯು ್ಡಪ ರಾಷ್ಟ್ರಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts