More

    ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿ

    ಬೆಳಗಾವಿ: ಮೊಬೈಲ್ ಯುಗದಲ್ಲೂ ಸಾಹಿತ್ಯದ ಅಭಿರುಚಿ ಹೆಚ್ಚಾಗಲು ಕಾದಂಬರಿಗಳು ಹಾಗೂ ಕವನ ಸಂಕಲನಗಳು ಹೆಚ್ಚಾಗಿ ಬಿಡುಗಡೆಗೊಳ್ಳಬೇಕು. ಕನ್ನಡ ಸಾಹಿತ್ಯ ಕ್ಷೇತ್ರ ಉಳಿದು ಬೆಳೆಯಬೇಕಾದರೆ ಯುವ ಸಾಹಿತಿಗಳ ಬರಹ ಓದುವುದರ ಮೂಲಕ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿ ಯಾಸ್ಮೀನ್‌ಬೇಗಂ ವಾಲಿಕಾರ ಹೇಳಿದರು.

    ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಭಾನುವಾರ ಸಾಹಿತಿ ಪ್ರಸಾದ ಕುಲಕರ್ಣಿ (ಸೂರ್ಯಸಖ) ಅವರ ಚೊಚ್ಚಲ ಕಾದಂಬರಿ ‘ಸೂರ್ಯನ ಪರ್ಪಂಚ’ ಮತ್ತು ‘ಪಹರಿ’ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯುವ ಜನಾಂಗ ಪುಸ್ತಕ ಓದುವುದರಿಂದ ವಿಮುಖರಾಗುತ್ತಿರುವಾಗಲೂ ಆಸಕ್ತಿಯಿಂದ ಸಾಹಿತ್ಯ ರಚಿಸುವಲ್ಲಿ ತೊಡಗುವವರಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

    ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸುರೇಶ ಕೋರಕೊಪ್ಪ ಮಾತನಾಡಿ, ಆಸಕ್ತರು ಎಲ್ಲಿಯವರೆಗೆ ಸಾಹಿತ್ಯ ಓದುವರೋ ಅಲ್ಲಿಯವರೆಗೆ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಿರುತ್ತದೆ. ಪ್ರಸಾದ ಕುಲಕರ್ಣಿ ಅವರು ರಚಿಸಿದ ಕಾದಂಬರಿ ಹಾಗೂ ಕವನ ಸಂಕಲನವು ಸಾಹಿತ್ಯ ಅಭಿರುಚಿ ಹೆಚ್ಚಿಸುವ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಅನುಭವ ತೋರಿಸುತ್ತದೆ. ವಿಶಿಷ್ಟ ಕಾದಂಬರಿ ಹಾಗೂ ಅತ್ಯುತ್ತಮ ಸಾಹಿತ್ಯದಲ್ಲಿ ರಚಿಸಿದ ಕವನ ಸಂಕಲನವನ್ನು ಸಾಹಿತ್ಯಾಸಕ್ತರು ತಪ್ಪದೆ ಓದಬೇಕು ಎಂದರು. ನಿವೃತ್ತ ವೈದ್ಯ ಶಂಕರ ದೊಡಮನಿ, ಸಾಹಿತಿಗಳಾದ ಪ್ರಕಾಶ ಅವಲಕ್ಕಿ, ಪೀರಸಾಬ ನದಾಫ್, ಶ್ಯಾಮಲಾ ಪ್ರಕಾಶ, ಉದ್ಯಮಿಗಳಾದ ವಿಜಯ ಮುದಲ್, ವಿಶ್ವೇಶ್ವರ ಮೇಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts