More

    ಯುವ ಮತದಾರರ ಮೇಲೆ ಕಣ್ಣು..!!


    ಸಂತೋಷ ದೇಶಪಾಂಡೆ ಬಾಗಲಕೋಟೆ:
    ಹೋಳಿ ಹುಣ್ಣಿಮ ಬಣ್ಣದಾಟದ ರಂಗು ಪೂರ್ಣಗೊಳ್ಳುತ್ತಿದ್ದಂತೆ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಚುನಾವಣೆ ರಂಗು ದಿನೇ ದಿನೇ ಹೆಚ್ಚು ರಂಗು ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ಈ ಸಾರಿ ಯುವ ಮತದಾರರ ಮೇಲೆ ರಾಜಕೀಯ ಪಕ್ಷಗಳ ಕಣ್ಣು ಬಿದ್ದಿದೆ.!!

    ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ೧೭,೮೧,೩೯೫ ಮತದಾರರಿದ್ದಾರೆ. ಅದರಲ್ಲಿ ಲೋಕಸಭಾ ಚುನಾವಣೆಯಲ್ಲಿ ೪೪,೭೦೭ ಮತದಾರರು ಮೊದಲ ಬಾರಿಗೆ ತಮ್ಮ ಮತದ ಹಕ್ಕು ಚಲಾಯಿಸಲಿದ್ದಾರೆ. ಇವರೆಲ್ಲರೂ ೧೮ ರಿಂದ ೧೯ ವರ್ಷದೊಳಗಿನವರಾಗಿದ್ದಾರೆ. ಹೀಗಾಗಿ ಇವರನ್ನು ತಮ್ಮತ್ತ ಸೆಳೆಯಲು ಕಾರ್ಯತಂತ್ರಗಳು ಆರಂಭಗೊಂಡಿವೆ.

    ಮತದಾರರ ಪಟ್ಟಿ ಸೇರ್ಪಡೆ ಆರಂಭಗೊಳ್ಳುತ್ತಿದ್ದಂತೆ ಆಯಾ ಬೂತಮಟ್ಟದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ನೋಂದಣಿ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ದುಂಬಾಲು ಬಿದ್ದಿದ್ದರು. ಮತದಾರರ ಯಾದಿಪಟ್ಟಿಯಲ್ಲಿ ಅಂತಿಮ ಹಂತಕ್ಕೆ ತಲುಪಿದ ಬಳಿಕ ಫಲಿತಾಂಶ ದಿಕ್ಕು ಬದಲಿಸುವ ಶಕ್ತಿ ಹೊಂದಿರುವ ಯುವ ಮತದಾರರಿಗೆ ತಮ್ಮ ಪಕ್ಷ, ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿ ಸೆಳೆಯಲು ಪ್ರಯತ್ನ ಜೋರಾಗಿ ನಡೆಯುತ್ತಿದೆ.

    ಜಿಲ್ಲಾಡಳಿತದಿಂದ ವಿಶೇಷ ಅಭಿಯಾನ
    ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತವು ವಿಶೇಷ ಅಭಿಯಾನ ನಡೆಸುವ ಮೂಲಕ ಮನೆ, ಮನೆಗೆ ತೆರಳಿ ಯುವ ಮತದಾರರ ಹೆಸರು ನೋಂದಾಯಿಸಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮತಗಟ್ಟೆ ಅಽಕಾರಿಗಳ ತಂಡವು ೧೮ ವರ್ಷ ಪೂರ್ಣಗೊಳಿಸಿರುವ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮನೆ, ಕಾಲೇಜು ಸೇರಿದಂತೆ ಎಲ್ಲೆಡೆ ಅಭಿಯಾನ ನಡೆಸಿತ್ತು. ಇದರ ಫಲವಾಗಿ ಅತೀ ಹೆಚ್ಚು ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ೬,೦೫೮, ಅತೀ ಕಡಿಮೆ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ೪,೫೩೯ ಯುವ ಮತದಾರರು ಹೊಸದಾಗಿ ಮತದಾನ ಹಕ್ಕು ಪಡೆದುಕೊಂಡಿದ್ದಾರೆ.

    ಹೊಸದಾಗಿ ಸೇರ್ಪಡೆಗೊಂಡ ಯುವಕರು ಉತ್ಸಾಹದಿಂದ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅವರ ಸಂಖ್ಯೆ ೫ ರಿಂದ ೬ ಸಾವಿರ ಮತದಾರರು ನೋಂದಣಿಯಾಗಿರುವುದು ಗಮನಾರ್ಹ ಸಂಗತಿ. ಯುವ ಸಮೂಹ ಮತದಾನದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ ಎನ್ನುವ ಕಾರಣಕ್ಕೆ ರಾಜಕೀಯ ಪಕ್ಷಗಳು ಅವರ ಮೇಲೆ ವಿಶೇಷ ಕಾಳಜಿ ಕಾರಣರಾಗಿದ್ದಾರೆ. ಒಟ್ಟಾರೆ ಈ ಸಾರಿ ಫಲಿತಾಂಶದಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts