More

    ಯುವಕರು ಶಿವಶರಣರ ಆದರ್ಶ ಅಳವಡಿಸಿಕೊಳ್ಳಿ

    ಮುಗಳಖೋಡ: ಪ್ರತಿಯೊಬ್ಬರು ಬಸವಾದಿ ಶಿವ ಶರಣರ ಆದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗ ದಲ್ಲಿ ನಡೆಯಬೇಕು ಎಂದು ಆನಂದಪುರಂ ಶಿವಮೊಗ್ಗದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

    ಸಮೀಪದ ಹಂದಿಗುಂದ ಗ್ರಾಮದಲ್ಲಿ ಸಿದ್ದೇಶ್ವರ ಮಠದಲ್ಲಿ ಭಾನುವಾರ ಹಾನಗಲ್ ಕುಮಾರೇಶ್ವರ ಸಾಂಸ್ಕೃತಿಕ ಭವನ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡಿನ ಮಠಗಳು ಬಸವತತ್ವದಡಿ ಅತ್ಯಂತ ಕ್ರಿಯಾಶೀಲತೆಯಿಂದ ನಡೆದುಕೊಂಡು ಕಾಯಕ ಮತ್ತು ದಾಸೋಹ ನಡೆಸುತ್ತಿವೆ. ಡಂಬಳ-ಗದಗ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ 20ನೇ ಶತಮಾನದ ಸಾಮಾಜಿಕ ಧಾರ್ಮಿಕ ನೇತಾರರಾಗಿದ್ದಾರೆ ಎಂದರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ನಾಡಿನ ಮಠ-ಮಾನ್ಯಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಶ್ಲಾಘನೀಯ ಎಂದರು. ಹಾನಗಲ್ ಗುರು ಕುಮಾರೇಶ್ವರ ಸಾಂಸ್ಕತಿಕ ಭವನದ ನಾಮಲಕವನ್ನು ಬಿ.ವೈ.ರಾಘವೇಂದ್ರ ಅನಾವರಣಗೊಳಿಸಿದರು. ಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಸನ್ಮಾನಿಸಿದರು. ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಶೇಗುಣಿಸಿ ವಿರಕ್ತಮಠದ ಮಹಾಂತ ಪ್ರಭು ಸ್ವಾಮೀಜಿ, ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರು, ಕುಡಚಿ ಶಾಸಕ ಪಿ.ರಾಜೀವ್, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಡಾ.ಮಹಾಂತೇಶ ರಾಮಣ್ಣವರ, ಹಂದಿಗುಂದ ಗ್ರಾಪಂ ಅಧ್ಯಕ್ಷ ಶ್ರೀಶೈಲ ಪಾಟೀಲ, ರಾಮನಗೌಡ ಪಾಟೀಲ, ಗಿರಮಲ್ಲಪ್ಪ ಅಂದಾನಿ, ಕಷ್ಣಪ್ಪ ಮಂಟೂರ, ಷಣ್ಮುಖ ತೇರದಾಳ, ಮಹೇಶ ಸಬರದ, ಶ್ರೀಶೈಲ ಬಡಿಗೇರ, ಸುರೇಶ ಹೊಸಪೇಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts