More

    ಯುಟಿಪಿ ಕಚೇರಿ ಎದುರು ರೈತರಿಂದ ಧರಣಿ

    ರಾಣೆಬೆನ್ನೂರ: ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ವಣಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳ ರೈತರಿಗೆ ಪರಿಹಾರ ಬಿಡುಗಡೆಗೆ ಆಗ್ರಹಿಸಿ ನಗರದ ಹೊರವಲಯದಲ್ಲಿರುವ ಯುಟಿಪಿ ಕಚೇರಿ ಎದುರು ವಿವಿಧ ಗ್ರಾಮಗಳ ರೈತರು ಮಂಗಳವಾರ 2ನೇ ದಿನ ದ ಧರಣಿ ನಡೆಸಿದರು.

    ಹೋರಾಟ ಸಮಿತಿ ಅಧ್ಯಕ್ಷ ಎಸ್.ಡಿ. ಹಿರೇಮಠ ಮಾತನಾಡಿ, ಯುಟಿಪಿ ಕಚೇರಿಯವರು 800 ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 52 ಕೋಟಿ ರೂ. ಪರಿಹಾರ ನೀಡಬೇಕು. ಆದರೆ, 10 ವರ್ಷಗಳಿಂದ ಸತಾಯಿಸುತ್ತ ಬಂದಿದ್ದಾರೆ. ಲಾಕ್​ಡೌನ್​ಗೂ ಮುಂಚೆ ನಡೆಸಿದ ಹೋರಾಟದಿಂದ 36 ಪ್ರಕರಣಗಳಿಗೆ ಪರಿಹಾರ ನೀಡಲು ಅನುಮೋದನೆ ಮಾಡಲಾಗಿದೆ. ಆದರೆ, ಹಣ ಮಾತ್ರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎರಡು ತಿಂಗಳ ಹಿಂದೆ ನಡೆದ ಹೋರಾಟದ ಸಮಯದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೇರಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಬಂದು ಭರವಸೆ ನೀಡಿ ಹೋಗಿದ್ದಾರೆ. ಆದರೆ, ಈವರೆಗೂ ಯಾವ ಪರಿಹಾರವೂ ಬಂದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೋಸ ಮಾಡುತ್ತಿದ್ದಾರೆ. ಈ ಬಾರಿ ಪರಿಹಾರ ನೀಡುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದರು.

    ರೈತರಾದ ಜೆ.ಎಸ್. ಮರಕಳ್ಳಿ, ಬಸವನಗೌಡ ಕಮನಾಳ, ರಮೇಶ ಪಂಡ್ರೆ, ಶೇಖಣ್ಣ ಮುತ್ತಲಮನಿ, ಹಾಲನಗೌಡ ಪಾಟೀಲ, ಚಂದ್ರಮ್ಮ ಕೊಪ್ಪದ, ಕಸಬರಪ್ಪ ಹಿರೇಕಬ್ಬಾರ, ಶಿವರಾಜ ಮೈದೂರು, ಜಯಪ್ಪ ಕಾಯಕದ ಹಾಗೂ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts