More

    ಯಾದಗಿರಿ-ನಂದೆಪಲ್ಲಿ ಸಂಪರ್ಕ ಕಡಿತ


    ಯಾದಗಿರಿ: ನಿರಂತರ ಮಳೆ ಹಾಗೂ ಅಕ್ರಮ ಮರಳು ತುಂಬಿದ ಲಾರಿಗಳ ಸಂಚಾರದಿಂದ ಗುರುಮಠಕಲ್ ಗಡಿ ಭಾಗದಲ್ಲಿನ ಅಜಲಾಪುರ ಗ್ರಾಮದ ಹಳ್ಳದ ಸೇತುವೆ ಶುಕ್ರವಾರ ಕುಸಿದಿದೆ.

    ಇದರಿಂದ ಅಜಲಾಪುರ, ಈಡ್ಲೂರ, ಚಲ್ಹೇರಿ, ಜೈಗ್ರಾಮ, ಕರಣಗಿ, ನಂದೇಪಲ್ಲಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಜಿಲ್ಲಾಕೇಂದ್ರಕ್ಕೂ ಸಂಪರ್ಕವಿಲ್ಲದಂತಾಗಿದೆ. ಸೇತುವೆ ಕುಸಿದ ಕಾರಣ ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದನ್ನು ದಾಟಲು ಗ್ರಾಮಸ್ಥರು ಪರದಾಡುವಂತಾಗಿದೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಅಲ್ಲದೆ ಅಜಲಾಪುರದಲ್ಲಿನ ಸಕರ್ಾರಿ ಶಾಲೆಗೆ ಅಕ್ಕಪಕ್ಕದ ಗ್ರಾಮಗಳ ವಿದ್ಯಾಥರ್ಿಗಳು ಬರಲಾಗದೆ ತೊಂದರೆ ಎದುರಿಸುವಂತಾಗಿದೆ.

    ಅಜಲಾಪುರ ತೆಲಂಗಾಣದ ಗಡಿಗೆ ಅಂಟಿಕೊಂಡ ಗ್ರಾಮ. ಅಲ್ಲದೆ ಜಿಲ್ಲಾಕೇಂದ್ರ ಯಾದಗಿರಿ ಹಾಗೂ ತಾಲೂಕುಕೇಂದ್ರ ಗುರುಮಠಕಲ್ ಪಟ್ಟಣಕ್ಕೂ ಅಂತರ ಹೆಚ್ಚಿರುವುದರಿಂದ ಈ ಸುತ್ತಲಿನ ಹಳ್ಳಿಗಳ ಜನತೆ ನಾರಾಯಣಪೇಟ, ಮೆಹಬೂಬನಗರ ಪಟ್ಟಣಕ್ಕೆ ವ್ಯಾಪಾರಕ್ಕಾಗಿ ತೆರಳುತ್ತಾರೆ. ಆದರೆ ಸೇತುವೆ ಕುಸಿದ ಕಾರಣ ರಸ್ತೆ ಬಂದ್ ಆಗಿದ್ದು, ಗ್ರಾಮಸ್ಥರನ್ನು ಪರೇಶಾನ್ ಮಾಡಿದೆ.

    ಚಲ್ಹೇರಿ ಹಳ್ಳದಿಂದ ನಿರಂತರ ಅಕ್ರಮ ಮರಳು ಸಾಗಾಟ ಹೆಚ್ಚಾಗಿದೆ. ಅತ್ತ ತೆಲಂಗಾಣ ಇತ್ತ ಕನರ್ಾಟಕದವರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಇಷ್ಟು ದಿನ ಟ್ರಾಕ್ಟರ್ ಮೂಲಕ ಮರಳು ಸಾಗಾಟ ನಡೆಯುತ್ತಿತ್ತು. ಆದರೆ ಇದೀಗ ಬೃಹತ್ ಗಾತ್ರದ ಟ್ರಕ್ಗಳಲ್ಲಿ ಉಸುಕನ್ನು ತುಂಬಿಸಿಕೊಂಡು ಹೋಗಲಾಗುತ್ತಿದೆ. ಹೆಚ್ಚು ಭಾರ ತಾಳದೆ ರಸ್ತೆಗಳು ಕಿತ್ತಿದ್ದು, ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.

    ಪರಸ್ಥಿತಿ ಹೀಗಿದ್ದರೂ ಸಂಬಂಸಿದ ಅಕಾರಿ ವರ್ಗ ಇತ್ತ ಗಮನ ಹರಿಸಿ ಮರಳು ಮಾಫಿಯಾ ತಡೆಗೆ ಮುಂದಾಗುತ್ತಿಲ್ಲ ಎಂಬ ಆರೋಪ ಈ ಭಾಗದ ಗ್ರಾಮಗಳ ಜನರದ್ದು, ಸಧ್ಯ ಸೇತುವೆ ಕುಸಿದ ಕಾರಣ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಈ ಬಗ್ಗೆ ತಾಲೂಕಾಡಳಿತ ಗಮನ ಹರಿಸಿ, ಪಯರ್ಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts