More

    ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಿ

    ಕಾರವಾರ: ಜಿಲ್ಲೆಯಲ್ಲೂ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉತ್ತರ ಕನ್ನಡ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಗಣಪತಿ ಮಾಂಗ್ರೆ, ಮನವಿ ಮಾಡಿದ್ದಾರೆ.

    ಕಳೆದ ಆಗಸ್ಟ್​ನಿಂದ ಪ್ರಕೃತಿ ವಿಕೋಪ, ನಂತರ ಮತ್ಸ್ಯ ಕ್ಷಾಮ, ಈಗ ಕರೊನಾ ಲಾಕ್​ಡೌನ್​ನಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಇದರಿಂದ ಯಾಂತ್ರೀಕೃತ ಮೀನುಗಾರರು ಮಾಡಿದ ಸಾಲ ತುಂಬಲು ಸಾಧ್ಯವಾಗುತ್ತಿಲ್ಲ. ಇನ್ನು ಜೂನ್​ನಲ್ಲಿ ಮತ್ತೆ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಇದರಿಂದ ಮೀನುಗಾರರು ಜೀವನ ನಡೆಸುವುದೇ ಕಷ್ಟವಾಗಲಿದೆ. ದೋಣಿಗಳು ಹರಾಜಾಗುವ ಆತಂಕವಿದೆ. ಇದರಿಂದ ಮೇ ಒಂದು ತಿಂಗಳಿಗಾದರೂ ಮೀನುಗಾರಿಕೆ ನಡೆಸಲು ಅವಕಾಶ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಲಾಕ್​ಡೌನ್ ನಿಯಮಗಳನ್ನು ನಾವೇ ಜವಾಬ್ದಾರಿ ವಹಿಸಿ ನೋಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

    ಇನ್ನು ಲಾಕ್​ಡೌನ್ ಅವಧಿಯಲ್ಲಿ ಮೀನುಗಾರರಿಗೆ ಸಹಾಯಧನದ ಪ್ಯಾಕೇಜ್ ಘೊಷಿಸಬೇಕು. ಸಾಲ ಮನ್ನಾ ಘೊಷಿಸಬೇಕು ಎಂದು ಮನವಿ ಮಾಡಿದ್ದೆವು. ಆದರೆ, ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾಗಿದೆ. ಈ ಸಂಬಂಧ ರಾಜಕೀಯ ಮುಖಂಡರು ನೀಡುತ್ತಿರುವ ಹೇಳಿಕೆಗಳಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ ಎಂದಿದ್ದಾರೆ.

    ಐವರಿಗೆ ಮಾತ್ರ ಅವಕಾಶ ನೀಡಿ:

    ಒಂದು ಬೋಟ್​ನಲ್ಲಿ ಐವರು ಮಾತ್ರ ತೆರಳಿ ಮೀನುಗಾರಿಕೆ ನಡೆಸಲು ಅವಕಾಶ ನೀಡಿ ಎಂದು ಕಾರವಾರ ಟ್ರಾಲರ್ ಬೋಟ್ ಯೂನಿಯನ್, ಹರಿಕಂತ್ರ ಮೀನುಗಾರರ ಸಂಘ, ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

    ಸದ್ಯ ಬೈತಖೋಲ್​ನಲ್ಲಿ 100ಕ್ಕೂ ಅಧಿಕ ದೋಣಿಗಳಿದ್ದು, 25 ದೋಣಿಗಳು ಮಾತ್ರ ಮೀನುಗಾರಿಕೆಗೆ ಇಳಿಯಲಿವೆ. ಕರೊನಾ ಲಾಕ್​ಡೌನ್ ಸಂಪೂರ್ಣ ಮುಗಿದ ಬಳಿಕ ಉಳಿದ ದೋಣಿಗಳು ಸಮುದ್ರಕ್ಕೆ ಇಳಿಯಲಿವೆ. ಕರೊನಾ ಹರಡದಂತೆ ತಡೆಯುವ ಎಲ್ಲ ಕ್ರಮಗಳನ್ನು ಸಂಘಟನೆಗಳೇ ಜವಾಬ್ದಾರಿ ವಹಿಸಿ, ಪಾಲಿಸಲಿವೆ. ಹೀಗಾಗಿ ಮೀನುಗಾರಿಕೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

    ರೂಪಾಲಿ ಸ್ಥಳ ಪರಿಶೀಲನೆ: ಶಾಸಕಿ ರೂಪಾಲಿ ನಾಯ್ಕ ಅವರು ಮಂಗಳವಾರ ಬೈತಖೋಲ ಮೀನುಗಾರಿಕೆ ಬಂದರಿಗೆ ತೆರಳಿ ಪರಿಶೀಲನೆ ನಡೆಸಿದರು.

    ಅಲ್ಲಿನ ಮೀನುಗಾರರು ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಿ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾದರೆ ಎದುರಾಗಬಹುದಾದ ಸಮಸ್ಯೆಗಳು, ಇಲ್ಲಿರುವ ಸೌಲಭ್ಯಗಳು ಮುಂತಾದವುಗಳ ಬಗ್ಗೆ ರ್ಚಚಿಸಿದರು. ಬಿಜೆಪಿ ಮಖಂಡರಾದ ಗಣಪತಿ ಉಳ್ವೇಕರ್,ರಾಜೇಶ ನಾಯ್ಕ, ನಾಗೇಶ ಕುರ್ಡೆಕರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜ್, ಸಹಾಯಕ ನಿರ್ದೇಶಕ ಪ್ರತೀಕ ಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts