More

    ಯಶಸ್ವಿಯಾಗಿ ನಡೆದ ಉಚಿತ ನೇತ್ರ ತಪಾಸಣೆ

    ಹಾಸನ: ನಗರದ ಶ್ರೀ ಶಂಕರಮಠದಲ್ಲಿ ಮಂಗಳವಾರ ಬೆಳಗಿನಿಂದ ಮಧ್ಯಾಹ್ನದವರೆಗೂ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ನೂರಾರು ಜನರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು.

    ಶಂಕರಮಠದ ಧರ್ಮಾಧಿಕಾರಿ ಎಂ.ಎಸ್. ಶ್ರೀಕಂಠಯ್ಯ ಮಾತನಾಡಿ, ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳು ಸನ್ಯಾಸ ಸ್ವೀಕಾರದ ಸುವರ್ಣ ವರ್ಷದ ಹಿನ್ನೆಲೆಯಲ್ಲಿ ‘ಸುವರ್ಣ ಭಾರತೀ’ ಹೆಸರಿನಲ್ಲಿ ವಿವಿಧ ಸಮಾಜೋಪಯೋಗಿ ಕಾರ್ಯಗಳು ದೇಶಾದ್ಯಂತ ವರ್ಷಪೂರ್ತಿ ಎಲ್ಲಾ ಶಾಖಾಮಠಗಳಲ್ಲಿಯೂ ನಡೆಯುತ್ತಿವೆ. ಹಾಸನದಲ್ಲಿ ಮೊದಲ ಹಂತದಲ್ಲಿ ಈ ನೇತ್ರ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ. ಕಳೆದ ವರ್ಷ ನಡೆಸಿದ್ದ ಇದೇ ರೀತಿಯ ಕಾರ್ಯಕ್ರಮದಲ್ಲಿ 200 ಮಂದಿ ಚಿಕಿತ್ಸೆಗೆ ಒಳಗಾಗಿ 12 ಫಲಾನುಭವಿಗಳು ಉಚಿತ ಶಸ್ತ್ರಚಿಕಿತ್ಸೆಯನ್ನು ಪಡೆದಿದ್ದರು ಎಂದರು.

    ಶಿಬಿರದ ಉಸ್ತುವಾರಿ ವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ, ಹಿರಿಯ ನೇತ್ರ ತಜ್ಞ ಡಾ. ಪಿ.ಎಲ್. ನಟರಾಜ್ ಮಾತನಾಡಿ, ಅನುಭವಿ ನೇತ್ರ ತಜ್ಞರ ತಂಡ ನೇತ್ರಪರೀಕ್ಷೆ ನಡೆಸಿ, ಶಸ್ತ್ರಚಿಕಿತ್ಸೆಗೆ ಅರ್ಹರನ್ನು ಆಯ್ಕೆ ಮಾಡಿ 22ರಂದು ಬೆಂಗಳೂರಿಗೆ ಕಳಿಸಿಕೊಡಲಿದೆ. ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದ್ದವರಿಗೆ ಬೆಂಗಳೂರಿನ ಶ್ರೀ ಶಾರದಾ ಮತ್ತು ದಂತ ಚಿಕಿತ್ಸಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗುವುದು. ಈ ಆಸ್ಪತ್ರೆಯು ಶೃಂಗೇರಿ ಶಂಕರ ಮಠದ ಅಧೀನ ಸಂಸ್ಥೆಯಾಗಿದ್ದು, ಆಯ್ಕೆಯಾದವರಿಗೆ ಚಿಕಿತ್ಸಾ ವೆಚ್ಚ, ಸಾರಿಗೆ ವ್ಯವಸ್ಥೆ, ಊಟೋಪಚಾರ ಎಲ್ಲವೂ ಉಚಿತವಾಗಿರುತ್ತದೆ ಎಂದು ಹೇಳಿದರು.

    ಇದೆ ವೇಳೆ ಶ್ರೀ ಶೃಂಗೇರಿ ಮಠದ ವ್ಯವಸ್ಥಾಪಕ ರಾಧಾಕೃಷ್ಣ, ವೇಣುಗೋಪಾಲ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts