More

    ಯಳಂದೂರಿನ ಸುತ್ತಮುತ್ತಲಿನ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷೆ : ಸೆರೆಗೆ ಬೋನು ಅಳವಡಿಕೆ

    ಚಾಮರಾಜನಗರ : ಯಳಂದೂರು ತಾಲೂಕಿನ ಕೆಸ್ತೂರು, ಮಲ್ಲಿಗೆಹಳ್ಳಿ, ಬಸವಾಪುರ, ಮದ್ದೂರು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಶನಿವಾರ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.

    ಶನಿವಾರ ಮಲ್ಲಿಗೆಹಳ್ಳಿ ಗ್ರಾಮದ ಸುಬ್ಬಣ್ಣ ಎಂಬುವರ ಜಮೀನಿನ ಬಳಿ ಮನೆಯ ಹತ್ತಿರ ಚಿರತೆ ಪ್ರತ್ಯಕ್ಷವಾಗಿ ಮನೆಯ ನಾಯಿ ಮೇಲೆ ದಾಳಿ ಮಾಡಿದೆ. ಬಳಿಕ ಕೆಸ್ತೂರು ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ದಾಳಿ ಮಾಡಲು ಯತ್ನಿಸಿದೆ. ಜನರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ ಹಿನ್ನೆಲೆಯಲ್ಲಿ ಸೆರೆಗೆ ಬೋನುಗಳನ್ನು ಇರಿಸಲಾಗಿದೆ.


    ಕೊಳ್ಳೇಗಾಲದ ಕಗ್ಗಲಿಗುಂದಿ ಪೋಡಿನಲ್ಲಿ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿದೆ. ಮಧುಮಲೆ ಗುಡ್ಡ ಮತ್ತು ಕರಡಿ ಗುಡ್ಡದ ಕಡೆ ಇದರ ಚಲನವಲನ ಇದೆ. ತಾಲೂಕಿನ ಮದ್ದೂರು, ಕೆಸ್ತೂರು ಮಲ್ಲಿಗೆಹಳ್ಳಿಲ್ಲೂ ಚಿರತೆ ಕಾಣಿಸಿಕೊಂಡಿದೆ. ಚಿರತೆ ಹಿಡಿಯುವ ವರೆಗೂ ಮಕ್ಕಳನ್ನು ಒಂಟಿಯಾಗಿ ಬೀಡಬೇಡಿ, ಜಮೀನಿನಗಳ ಕಡೇ ರೈತರು ಒಬ್ಬರೆ ತೆರಳಬೇಡಿ, ಸಂಜೆ ಸಮಯದಲ್ಲಿ ಅನಗತ್ಯವಾಗಿ ಓಡಾಡಬೇಡಿ ಎಂದು ಬಿಆರ್‌ಟಿ ವಲಯದ ಆರ್‌ಎಫ್ ಲೋಕೇಶ್ ಮೂರ್ತಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts