More

    ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲು ಹುಣ್ಣಿಮೆ ಸಂಭ್ರಮ

    ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಹೊಸ್ತಿಲು ಹುಣ್ಣಿಮೆ ಆಚರಿಸಲಾಯಿತು. ಹೊಸ್ತಿಲು ಹುಣ್ಣಿಮೆ ಹಿನ್ನೆಲೆ ಬುಧವಾರ ಯಲ್ಲಮ್ಮ ದೇವಿಯ ಮಂಗಳಸೂತ್ರ ವಿಸರ್ಜನೋತ್ಸವ ಜರುಗಿತು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಹೋಮಹವನ ನೆರವೇರಿಸಲಾಯಿತು. ಲಕ್ಷಾಂತರ ಭಕ್ತರು ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. ಯಲ್ಲಮ್ಮ ದೇವಿಯ ತವರುಮನೆಯಾದ ಸವದತ್ತಿ ತಾಲೂಕಿನ ಹರಳಕಟ್ಟಿಯಿಂದ ಹಿರಿಯರು ಸೀರೆ, ಕುಪ್ಪಸ, ದಂಡಿನಮಾಲೆ, ಬಳೆಗಳು, ಅರಿಶಿನ ಕುಂಕುಮ ಅರ್ಪಿಸಿದರು. ಹೂಲಿಯ ಹಿರೇಮಠದ ಪಂಡಿತ ಅಜ್ಜಯ್ಯ ಶಾಸಿ ನೇತೃತ್ವದಲ್ಲಿ ವೀರಯ್ಯ ಶಾಸ್ತ್ರಿ, ಮರೆಗುದ್ದಿಯ ಮಹಾಂತೇಶ ಶಾಸ್ತ್ರಿ, ಪಂಡಿತ ಕೆ.ಎಸ್.ಯಡೂರಯ್ಯ, ಪಿ.ರಾಜಶೇಖರಯ್ಯ, ಅಜ್ಜಯ್ಯ ಶಾಸ್ತ್ರಿ, ಶಿಂಧೋಗಿಯ ವೀರೇಶ್ವರ ಶಾಸ್ತ್ರಿ, ಏಕನಗೌಡ ಮುದ್ದನಗೌಡ್ರ, ಮಂಜುನಾಥಗೌಡ ಸಂದಿಮನಿ, ಅಜ್ಜನಗೌಡ ಸಂದಿಮನಿ ಅವರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

    ಕಾರ್ತವೀರಾರ್ಜುನ ಮಹಾರಾಜರು ಜಮದಗ್ನಿ ಮುನಿಯಲ್ಲಿದ್ದ ಕಾಮಧೇನುವನ್ನು ಕೊಡಲೊಪ್ಪದಿದ್ದಾಗ, ಕಾರ್ತವೀರಾರ್ಜುನ ಶ್ರೀರೇಣುಕಾ ಯಲ್ಲಮ್ಮದೇವಿಯ ಪತಿ ಜಮದಗ್ನಿ ಮುನಿಯನ್ನು ಸಂಹರಿಸುತ್ತಾನೆ. ಆಗ ಯಲ್ಲಮ್ಮ ದೇವಿಯು 3 ಘಳಿಗೆ ವಿಧವೆಯಾಗುತ್ತಾಳೆ. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದ ಯಲ್ಲಮ್ಮನ ಗುಡಿಯಲ್ಲಿಯೇ ರುದ್ರ ಘನ ಶಾಂತಿ ಹೋಮವನ್ನು ನೆರವೇರಿಸಲಾಯಿತು.

    ಮಹರಾಷ್ಟ್ರ-ಬೆಳಗಾವಿ ಗಡಿ ವಿವಾದ ಹಿನ್ನೆಲೆಯಲ್ಲಿ ಈ ಬಾರಿಯ ಹೊಸ್ತಿಲು ಹುಣ್ಣಿಮೆ ಆಚರಣೆಯಲ್ಲಿ ಭಕ್ತರ ಸಂಖ್ಯೆಕೊಂಚ ಇಳಿಕೆ ಕಂಡಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ, ಏಕನಾಥ-ಜೋಗಿನಾಥ ಮಠದ ಪೀಠಾಧಿಪತಿ ಪೀರ್ ಯೋಗಿ ಶಿವನಾಥಜೀ ಬಾಬಾ, ಅಧೀಕ್ಷಕ ಅರವಿಂದ ಮಾಳಗೆ, ಈರಣ್ಣ ಚಂದರಗಿ, ಆರ್.ಎಚ್. ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಸದಾನಂದ ಈಟಿ, ಪ್ರಕಾಶ ಪ್ರಭುನವರ, ಮಲ್ಲಯ್ಯ ತೋರಗಲ್ಲಮಠ, ಸಿದ್ದು ಪಾಟೀಲ, ಭೀಮಣ್ಣ ಬಾರ್ಕಿ, ನ್ಯಾಮದೇವ ಹುಲಗನ್ನವರ, ಜಿ.ಬಿ.ತುಪ್ಪದ ಹಾಗೂ ದೇವಸ್ಥಾನ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts