More

    ಯಡೂರಿನ ಶಿವಸಪ್ತಾಹಕ್ಕೆ 118 ವರ್ಷ

    ಮಾಂಜರಿ, ಬೆಳಗಾವಿ: ಯಡೂರಿನಲ್ಲಿ 1904ರಲ್ಲಿ ಪ್ರಾರಂಭವಾದ ವೀರಭದ್ರೇಶ್ವರ ಶಿವಸಪ್ತಾಹಕ್ಕೆ 118 ವರ್ಷ ತುಂಬಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶರವನ್ನವರಾತ್ರಿ ವೀರಭದ್ರೇಶ್ವರ 118ನೇ ಶಿವಸಪ್ತಾಹ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಕಾರ್ಯ ಪ್ರಾರಂಭವಾಗಿ ಅದನ್ನು ಶತಮಾನಗಳ ಕಾಲ ಮುನ್ನಡೆಸುವುದು ಕಷ್ಟಕರವಾದದ್ದು ಎಂದರು.

    ನವರಾತ್ರಿ ಸಂದರ್ಭದಲ್ಲಿ ಎಲ್ಲ ಕಡೆ ದೇವಿ ಉಪಾಸನೆ ಮಾಡಲಾಗುತ್ತದೆ. ಆದರೆ, ಯಡೂರಿನಲ್ಲಿ ಮಾತ್ರ ದೇವಿ ರೂಪದಲ್ಲಿ ಶಿವನ ಉಪಾಸನೆ ಮಾಡಲಾಗುತ್ತದೆ. ವೀರಭದ್ರೇಶ್ವರ, ಕಾಡಸಿದ್ದೇಶ್ವರ, ಬ್ರಹ್ಮ-ವಿಷ್ಣುರು ಲಿಂಗ ರೂಪದಲ್ಲಿ ಇರುವುದರಿಂದ ಯಡೂರಿನಲ್ಲಿ ಎಲ್ಲವನ್ನೂ ಶಿವನ ರೂಪದಲ್ಲಿ ಕಾಣುವ ವಿಶೇಷ ಕ್ಷೇತ್ರವಾಗಿದೆ ಎಂದು ತಿಳಿಸಿದರು.

    ಬೆಂಗಳೂರಿನ ವಿಭೂತಿಪುರ ವೀರ ಸಿಂಹಾಸನ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಷ್ಟ ಕಾಲದಲ್ಲಿ ದೇವರನ್ನು ನೆನೆಯುವ ಬದಲು, ಸದಾಕಾಲ ದೇವರ ನಾಮಸ್ಮರಣೆ ಮಾಡಬೇಕು ಎಂದು ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಶಿರಗುಪ್ಪಿ ಕೆಎಲ್ಇ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ನರವಾಡೆ ದಂಪತಿಯನ್ನು ಸತ್ಕರಿಸಲಾಯಿತು. ಅಂಬಿಕಾ ನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೂಲದ ಸಂಸ್ಥಾನಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿ.ಜಿ.ಮಠಪತಿ, ವೇದಮೂರ್ತಿ ಮಲ್ಲಯ್ಯ ಜಡೆ, ಅಡವಯ್ಯ ಅರಳಿಕಟ್ಟಿಮಠ, ಶ್ರೀಶೈಲ ಶಾಸ್ತ್ರಿ, ನರಸಗೌಡ ಕಮತೆ, ಮನೋಹರ ಪುಠಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts