More

    ಮ್ಯಾಮ್ಕೋಸ್ ಟ್ರೇಡ್ ಆಪ್ ಶೀಘ್ರ ಬಿಡುಗಡೆ

    ಕೊಪ್ಪ: ಮ್ಯಾಮ್ಕೋಸ್ ಪಾರದರ್ಶಕವಾಗಿ ವಹಿವಾಟು ಮಾಡುತ್ತಿರುವುದರಿಂದ ಅಡಕೆ ಬೆಳೆಗಾರರ ವಿಶ್ವಾಸ ಗಳಿಸಿದೆ. ಶೀಘ್ರದಲ್ಲೇ ಟ್ರೇಡ್ ಆಪ್ ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ತಿಳಿಸಿದರು.

    ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ಮ್ಯಾಮ್ಕೋಸ್ ಕೊಪ್ಪ ಶಾಖೆ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ರೈತರಿಗೆ ನಷ್ಟವಾಗದಂತೆ ಅಡಕೆ ಧಾರಣೆ ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರವಾಗಿ ಸರ್ಕಾರದ ಜತೆಗೆ ಸಂಪರ್ಕ ಇರಿಸಿಕೊಂಡಿದೆ ಎಂದು ಹೇಳಿದರು.

    ಸಂಸ್ಥೆಯಲ್ಲಿ 27,394 ಸದಸ್ಯರಿದ್ದು, 20 ಸಾವಿರ ಸದಸ್ಯರು ಸಂಸ್ಥೆ ಜತೆಗೆ ಸಕ್ರಿಯವಾಗಿದ್ದಾರೆ. ಪ್ರತಿ ವರ್ಷ ಸದಸ್ಯರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಅಡಕೆ ಹೆಚ್ಚಾಗಿ ಬಂದಿದೆ. ನಿವ್ವಳ ಲಾಭ 3 ಕೋಟಿ ರೂ.ನಷ್ಟಿದ್ದು ಕಳೆದ ಬಾರಿಗಿಂತ ಹೆಚ್ಚು ಲಾಭ ಗಳಿಸಿದೆ. ನೇರ ಖರೀದಿಗೆ ಹೆಚ್ಚು ಒತ್ತು ಕೊಡಲಾಗಿದೆ. ಸಂಸ್ಥೆಯಿಂದ ಷೇರುದಾರರ ಕುಟುಂಬಕ್ಕೆ ಅನೇಕ ಸವಲತ್ತು ಒದಗಿಸಿಕೊಡಲಾಗುತ್ತಿದೆ ಎಂದರು.

    ಕೊಪ್ಪ ಶಾಖೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಅಡಕೆ ಸಂಗ್ರಹವಾಗಿದೆ. ಸದಸ್ಯರ ಸಂಖ್ಯೆ ಹೆಚ್ಚಾಗಿದೆ. 4,210 ಸದಸ್ಯರಿದ್ದಾರೆ. ಗುಂಪು ವಿಮೆ ಕಡಿಮೆಯಾಗಿದೆ. ಆರೋಗ್ಯ ವಿಮೆಗಾಗಿ 927 ಮಂದಿ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 30 ಮಂದಿ ಪ್ರಯೋಜನ ಪಡೆದಿದ್ದಾರೆ. ವೈ.ಎಸ್.ಸುಬ್ರಹ್ಮಣ್ಯ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕೊಪ್ಪದಲ್ಲಿ ಉತ್ತಮ ಗೋದಾಮು ನಿರ್ವಣಗೊಂಡಿದೆ ಎಂದು ತಿಳಿಸಿದರು.

    ಫಸಲ್ ಬಿಮಾ ಯೋಜನೆಗೆ ಮ್ಯಾಮ್ಕೋಸ್ ಶಾಖೆಯಿಂದ ವಿಮೆ ಕಟ್ಟಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ದಿನದರ್ಶಿಕೆ, ದಿನವಹಿ ಪುಸ್ತಕವನ್ನು ಎಲ್ಲ ಸದಸ್ಯರಿಗೂ ತಲುಪಿಸಬೇಕು. ಅಡಕೆ ಕೊನೆ ದೋಟಿಗೆ ಸಬ್ಸಿಡಿ ನೀಡಬೇಕು. ಗುಂಪು ವಿಮೆ ಮಾಡಿಸಲು ಹೆಚ್ಚು ಪ್ರಚಾರ ಮಾಡಬೇಕು. ಅಡಕೆ ಹಳದಿ ಎಲೆ ರೋಗ, ಕೊಳೆ ರೋಗ ತಡೆಗೆ ಸಂಶೋಧನಾ ಕೇಂದ್ರ ಅಥವಾ ಪ್ರಯೋಗಶಾಲೆ ತೆರೆಯಬೇಕು. ಹೆಚ್ಚು ಅಂಕ ಗಳಿಸುವ ಷೇರುದಾರರ ಮಕ್ಕಳಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಷೇರುದಾರರು ಬೇಡಿಕೆಯಿಟ್ಟರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts