More

    ಮೌಲ್ಯಾಂಕನ ಪರೀಕ್ಷೆಗೆ ಸಿದ್ಧತೆ ಅಗತ್ಯ

    ಬೆಳಗಾವಿ: ಐದು ಮತ್ತು ಎಂಟನೆಯ ತರಗತಿಯ ಮೌಲ್ಯಾಂಕನ ಪರೀಕ್ಷೆಗೆ ಎಲ್ಲರೂ ಅಗತ್ಯ ಸಿದ್ಧತೆ ಮಾಡಿಕೊಂಡು ಯಾವುದೇ ಗೊಂದಲ ಉಂಟಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ.ದಾಸಪ್ಪನವರ ಹೇಳಿದ್ದಾರೆ.

    ಬುಧವಾರ ಮಚ್ಚೆ ಗ್ರಾಮದ ಡಿವೈನ್ ಮರ್ಸಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ‘2022-23ನೇ ಸಾಲಿನ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸುವ ಕುರಿತು ಬೆಳಗಾವಿ ಗ್ರಾಮೀಣ ವಲಯದ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಾತನಾಡಿದರು. ಇಡೀ ತಾಲೂಕಿನಲ್ಲಿ ಒಟ್ಟು 5ನೇ ತರಗತಿಗೆ 93 ಪರೀಕ್ಷಾ ಕೇಂದ್ರಗಳು ಹಾಗೂ ಎಂಟನೇ ತರಗತಿಗೆ 51 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಈ ಪರೀಕ್ಷಾ ಕೇಂದ್ರಕ್ಕೆ ಗುರುಗಳನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುವುದು. ಜತೆಗೆ ಈ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರನ್ನಾಗಿ ಪರೀಕ್ಷಾ ಕೇಂದ್ರವಿರುವ ಶಾಲೆಯ ಕ್ಲಸ್ಟರ್ ಶಿಕ್ಷಕರನ್ನು ಹೊರತುಪಡಿಸಿ ಪಕ್ಕದ ಕ್ಲಸ್ಟರ್ ಶಿಕ್ಷಕರನ್ನು ನಿಯೋಜನೆ ಮಾಡಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುವುದು ಎಂದರು.

    ಮೌಲ್ಯಾಂಕನ ಪರೀಕ್ಷೆಯು ಮಾ.9 ರಿಂದ 17ರ ವರೆಗೆ ನಡೆಯಲಿದ್ದು, ಮಾ.21 ರಿಂದ 28 ರವರೆಗೆ ಮೌಲ್ಯಮಾಪನಕಾರ್ಯ ನಡೆಯುತ್ತದೆ. ಮಾ.31 ರಿಂದ ಏಪ್ರಿಲ್ 5ರವರೆಗೆ ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತದೆ. ಏಪ್ರಿಲ್ 4 ರಿಂದ 10ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದರು. ತಾಲೂಕು ಬಿಸಿಯೂಟದ ಅಧಿಕಾರಿ ರಾಮನಗೌಡ ಮುದುಕನಗೌಡರ, ಮುಖ್ಯೋಪಾಧ್ಯಾಯ ಸುನಿತಾ ರೋಡ್ರೀಕ್ಸ್, ರಾಮು ಗೂಗವಾಡ, ಎಂ.ಬಿ. ಹುಲಮನಿ, ಎಸ್.ಎಸ್. ಮಠದ, ಎಂ.ಎಸ್. ತಲ್ಲೂರ, ಸುರೇಶ ರಾಯ್ಕರ, ಎಸ್.ಬಿ.ಹಂಚಿನಾಳ, ಮೊಹಮ್ಮದ್ ಮುಲ್ಲಾ, ಶಂಕರ ತಾರಾಪೂರ, ಸುನೀಲ ಕುಟ್ರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts