More

    ಮೌನೇಶ್ವರರ ವಚನಗಳಲ್ಲಿ ಮೌಲ್ಯಗಳಿವೆ

    ಬಾಗಲಕೋಟೆ: ತಿಂತಿಣಿ ಜಗದ್ಗುರು ಮೌನೇಶ್ವರರ ವಚನಗಳಲ್ಲಿ ಮನುಕುಲದ ಮೌಲ್ಯಗಳಿವೆ. ವಚನಗಳಲ್ಲಿ ವ್ಯಕ್ತಿ ಹಾಗೂ ಸಮುದಾಯವನ್ನು ತಿದ್ದುವಂತದ ಹರಿತವಾದ ಚಿಂತನೆಗಳಿದ್ದು, ಅವುಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
    ನವನಗರದ ಕಸಾಪ ಸಭಾಭವನದಲ್ಲಿ ಮಯ ಪ್ರಕಾಶನ ಕಮಾಲಾಪುರ, ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲೂಕ ಘಟಕ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ತಿಂತಿಣಿ ಮೌನೇಶ್ವರರ ವಚನಗಳ ಪ್ರಕಟನೆಯ ಶತಮಾನೋತ್ಸವ ಹಾಗೂ ಜೀವಣ್ಣ ಮಸಳಿಯವರ ಸ್ಮರಣಾರ್ಥವಾಗಿ ಮೌನೇಶ್ವರರ ವಿಚಾರ ಸಂಕಿರಣ ಭಾಗ-೪ ಉದ್ಘಾಟಿಸಿ ಅವರು ಮಾತನಾಡಿದರು.
    ಮೌನೇಶ್ವರರ ವಚನಗಳನ್ನು ಸಮುದಾಯದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ತಮ್ಮ ಕಾಯಕ ಸಂಸ್ಕೃತಿಯನ್ನು ಬೆಳಿಸಿ ಉಳಿಸಬೇಕಾಗಿದೆ ಎಂದು ಹೇಳಿದರು.
    ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಮಾತನಾಡಿ, ನಾಡಿನ ಸಂಶೋಧಕ, ಸಾಹಿತಿ ಜೀವಣ್ಣ ಮಸಳಿಯವರು ರಾಮಾಯಣ ಮತ್ತು ಮಹಾಭಾರತವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ವೈಚಾರಿಕವಾಗಿ ವ್ಯಾಖ್ಯಾನಿಸಿದ್ದಾರೆ. ಅದೆ ರೀತಿ ಮೌನೇಶ್ವರರ ವಚನಗಳನ್ನು ಹುಡುಕಿ ಸಂಶೋಧನೆ ಸಂಪಾಧನೆ ಪ್ರಕಟಣೆ ಮಾಡುವ ಮೂಲಕ ಅಳಿಸಿ ಹೋಗಬಹುದಾದ ಮೌನೇಶ್ವರರ ವಚನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಕೀರ್ತಿ ಜೀವಣ್ಣ ಮಸಳಿಯವರದಾಗಿದೆ ಎಂದು ಹೇಳಿದರು.
    ಕಸಾಪ ಜಿಲ್ಲಾ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ತಿಂತಿಣಿ ಮೌನೇಶ್ವರರ ವಚನಗಳ ಸಾರ ಇಂದಿನ ಯುವಕರ ಬದುಕಿಗೆ ಅವಶ್ಯವಿದ್ದು, ಅದರಂತೆ ಜೀವಣ್ಣ ಮಸಳಿಯವರ ಆದರ್ಶವು ಯುವ ಪೀಳಿಗೆಗೆ ಬಳುವಳಿಯಾಗಿದೆ ಎಂದು ತಿಳಿಸಿದರು.
    ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಗನ್ನಾಥ ಸ್ವಾಮೀಜಿ, ಮಹಾಮಾನವತಾವಾದಿ ಜಗದ್ಗುರು ತಿಂತಣಿ ಮೌನೇಶ್ವರರು ಕಾಯಕ ಸಂಸ್ಕೃತಿಯ ಮೂಲವನ್ನು ತಿಳಿಸಿದವರು. ತಮ್ಮ ಹರಿತವಾದ ವಚನಗಳ ಮೂಲಕ ಹೆಸರಾದವರು. ಅವರ ವಚನಗಳು ಇಂದಿನ ಸಂಶೋಧಕರಿಗೆ ವಿಮರ್ಶೆ ಮಾಡಲು ಕಷ್ಟವಾಗುವಂತ ವಚನಗಳು ಮೌನೇಶ್ವರರದ್ದಾಗಿವೆ ಎಂದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಕ್ಕೆ ಜೀವಣ್ಣ ಮಸಳಿ ಅವರ ಹೆಸರು ನಾಮಕರಣ ಮಾಡಿ ಎಂದು ಹೇಳಿದರು.
    ಪ್ರೊ.ಪಿ.ಬಿ.ಬಡಿಗೇರ, ಅಶೋಕ ಲೋಗಾವಿ, ದೇವೇಂದ್ರ ಅಗಳತಕಟ್ಟಿ, ಡಾ.ಅಶೋಕ ನರೋಡೆ, ಡಾ.ರಾಜಶೇಖರ ಬಿರಾದರ, ಡಾ.ರಾಜೇಶ್ವರಿ ಶೀಲವಂತ, ಪ್ರೊ.ಚಂದ್ರಶೇಖರ ಹೆಗಡೆ, ಕಲ್ಮೇಶ ಬಡಿಗೇರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸಿದ್ಧರಾಮ ಶಿರೋಳ, ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಸಾಹಿತಿ ಎಚ್.ಎನ್.ಯಾದವಾಡ, ಸಂಚಾಲಕರಾದ ಸಂಗಮೇಶ ಬಡಿಗೇರ ಉಪಸ್ಥಿತರಿದ್ದರು. ಶಂಕರ ಮಂಡಿ ಪ್ರಾರ್ಥಿಸಿದರು. ಮೌನೇಶ ಕಮ್ಮಾರ ಸ್ವಾಗತಿಸಿದರು. ದಾಕ್ಷಾಯಣಿ ಮಂಡಿ ವಂದಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts