More

    ಮೋದಿ ಕೈಯಲ್ಲಿ ಭಾರತ ಸುರಕ್ಷಿತ

    ಕಮಲಾಪುರ: ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಭಾರತ ದೇಶ ಸುರಕ್ಷಿತವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಹೇಳಿದರು.
    ಕಲಬುರಗಿ ತಾಲೂಕಿನ ಅವರಾದ(ಬಿ) ಗ್ರಾಮದ ಸಮೀಪದಲ್ಲಿರುವ ಶ್ರೀ ಸ್ವಾಮಿ ಸಮರ್ಥ ದೇವಸ್ಥಾನದಲ್ಲಿ ಬಿಜೆಪಿ ಗ್ರಾಮೀಣ ಮಂಡಲದಿಂದ ಮಂಗಳವಾರ ಆಯೋಜಿಸಿದ್ದ ಆತ್ಮ ನಿರ್ಭರ ಕಾರ್ಯಾಗಾರದಲ್ಲಿ ಮಾತನಾಡಿ, ಆತ್ಮನಿರ್ಭರ, ಮೇಕ್ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಉಚಿತ ರೇಷನ್ ಹಲವಾರು ಜನಪರ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
    370 ವಿಧಿ ರದ್ದತಿ, ನೋಟ್ಬ್ಯಾನ್, ಪುಲ್ವಾಮ ಪ್ರತಿಕಾರದಂತ ಐತಿಹಾಸಿಕ ಕ್ರಮಗಳು, ರಕ್ಷಣಾ ಇಲಾಖೆಗೆ ಬಲ, ಭಯೋತ್ಪಾದನೆ ನಿಯಂತ್ರಣ ಮೂಲಕ ದೇಶವನ್ನು ಸುರಕ್ಷಿತವಾಗಿಟ್ಟಿದ್ದಾರೆ. ಕರೊನಾ ಸಂದರ್ಭದಲ್ಲಿ ದೇಶದ ಜನರಿಗೆ ಆರಂಭದಲ್ಲಿ 17 ಕೋಟಿ ಹಾಗೂ ಮಧ್ಯಂತರ ಅವಧಿಯಲ್ಲಿ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸ್ಪಂದಿಸಿದ್ದಾರೆ. ಈ ಮೂಲಕ ಕಷ್ಟದಲ್ಲಿರುವ ಜನತೆಯ ಕಣ್ಣಿರು ಒರೆಸುವ ಕೆಲಸ ಮಾಡಿದ್ದಾರೆ
    ಶಾಸಕ ಬಸವರಾಜ ಮತ್ತೀಮೂಡ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ಸಂಜಯ ಮಿಸ್ಕಿನ್ ಮಾತನಾಡಿದರು. ರಾಜ್ಯ ಎ ಸ್ಸಿ ಮೋರ್ಚಾ ಕಾರ್ಯದರ್ಶಿ ನಾಮದೇವ ರಾಠೋಡ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸಂಗಮೇಶ ವಾಲಿ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟೆ, ಶಿವಕುಮಾರ್ ಪಸಾರ, ಅರವಿಂದ ಚವ್ಹಾಣ, ವಿಜಯಲಕ್ಷ್ಮಿ ರಾಗಿ, ಶೋಭಾ ಬಾಣಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಮಾಲಿ ಪಾಟೀಲ್, ಹರ್ಷವರ್ಧನ ಗುಗಳೆ, ಗೋರಕನಾಥ ಶಾಖಾಪುರ , ಪ್ರವೀಣ ಮುಚ್ಚಟ್ಟಿ, ಸೂರ್ಯಕಾಂತ ಡೋಣಿ, ಶಿವಕುಮಾರ ಪಾಟೀಲ್, ಸತಿಶ ಪಾಟೀಲ್, ಶಶಿಧರ ಮಾಕಾ, ರಾಜು ಚವ್ಹಾಣ ಇದ್ದರು.
    ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಯೋಜನೆ ಸ್ವಾವಲಂಬಿ ಬದುಕಿಗೆ ಮುನ್ನುಡಿಯಾಗಿದೆ, ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂಥ ಯೋಜನೆಗಳನ್ನು ನೀಡುವ ಮೂಲಕ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಅಭಯ ಹಸ್ತವನ್ನು ನೀಡಿದ್ದಾರೆ, ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸಕರ್ಾರದ ಸಾಧನೆಗಳು ಸ್ಮರಣೀಯವಾಗಿವೆ.
    | ಬಸವರಾಜ ಮತ್ತಿಮೂಡ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts