More

    ಮೋಡಿ ಮಾಡಿದ ಮಕ್ಕಳ ಬ್ಯಾಂಡ್ ವಾದನ!

    ದಾವಣಗೆರೆ: ಆಕರ್ಷಕ ದಿರಿಸಿನಲ್ಲಿದ್ದ, ತೋಳಹುಣಸೆಯ ಪಿಎಸ್‌ಎಸ್‌ಇಎಂಆರ್ ಶಾಲೆಯ ಮಕ್ಕಳು ನುಡಿಸಿದ ಬ್ಯಾಂಡ್ ವಾದನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಮೃತ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.
    ಬ್ಯಾಂಡ್ ಮಾಸ್ಟರ್ ಮಿಥುನ್ ಕೈಯಲ್ಲಿಡಿದ ದಂಡವನ್ನು ಮೇಲೆಕ್ಕೆಸೆದು ಚಾಕಚಕ್ಯತೆಯಿಂದ ಹಿಡಿಯುವ ಜತೆಗೆ ತಂಡಕ್ಕೆ ಸೂಚನೆ ನೀಡಿದ. ಇತರೆ ಮಕ್ಕಳು ವಾದ್ಯಗಳ ವಾದನ ವೈವಿಧ್ಯ ಸಹಿತ ವಿವಿಧ ಕೋನಗಳಲ್ಲಿ ವಿಶೇಷ ನಡಿಗೆ ಮೂಲಕ ನೋಡುಗರ ಕಣ್ಸೆಳೆದರು.
    ಎಜು ಏಷಿಯಾ ಶಾಲೆಯ ಮಕ್ಕಳು ಭಾರತದ ಸಾಂಸ್ಕೃತಿಕ ವೈಭವವನ್ನೇ ಅನಾವರಣಗೊಳಿಸಿದರು. ವಂದೇಮಾತರಂ ಸೇರಿ ಇತರೆ ಹಾಡುಗಳಿಗೆ ಯಕ್ಷಗಾನ, ಭರತನಾಟ್ಯ, ಕೂಚುಪುಡಿ, ರಾಜಸ್ತಾನ, ಮಣಿಪುರಿ ಮೊದಲಾದ ರಾಜ್ಯಗಳ ನೃತ್ಯಗಳನ್ನು ಪ್ರದರ್ಶಿಸಿ ಭಾರತದ ಅನನ್ಯತೆಯನ್ನು ತೆರೆದಿಟ್ಟರು.
    ಕರೊನಾ ಕಾಲದ ಆತಂಕ, ಲಾಕ್‌ಡೌನ್ ಸಂಕಷ್ಟ, ವೈದ್ಯರು-ದಾದಿಯರ ಸೇವೆ ಸ್ಮರಿಸುವ ವಿಶೇಷ ನೃತ್ಯರೂಪಕವನ್ನು ಅಮೃತ ವಿದ್ಯಾಲಯಂ ಶಾಲೆಯ ಮಕ್ಕಳು ಪ್ರದರ್ಶಿಸಿದರು. ಜತೆಗೆ ಚಂದ್ರಯಾನ-3, ಪುಲ್ವಾಮಾ ದಾಳಿ, ಯೋಗಕ್ಕೆ ಸಿಕ್ಕ ಮಾನ್ಯತೆ ಜತೆಗೆ ಮಾನವ ರೋಬಾಟ್‌ನ ಸಾಂಕೇತಿಕ ಪ್ರದರ್ಶನ ಮಾಡಿದರು.
    ಪೋದಾರ್ ಶಾಲೆಯ ವಿದ್ಯಾರ್ಥಿಗಳು ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್ ಬ್ಯಾಟ್ ಸಹಿತ ಮೈದಾನಕ್ಕಿಳಿದಿದ್ದರು! ದಿಲ್ ದಿಯಾ ಹೈ ಜಾನ್ ಬಿ ದೇಂಗೆ ಹೇ ವತನ್ ಇನ್ನಿತರೆ ಹಾಡುಗಳಿಗೆ ಹೆಜ್ಜೆ ಹಾಕಿದ ಚಿಣ್ಣರು ಭಾರತದ ಕ್ರೀಡಾ ಸಾಧನೆಗೆ ಷರಾ ಬರೆದರು.
    ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳಿಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೃಹತ್ ಕ್ಯಾನ್‌ವಾಸ್ ಮೇಲೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಚಿತ್ರ ರಚಿಸಿ ಪ್ರೇಕ್ಷಕರ ಮನ ಕದ್ದರು. ಸಶಸ್ತ್ರ ಮೀಸಲು ಪಡೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಒಳಗೊಂಡಂತೆ 28 ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts