More

    ಮೋಜು ಮಸ್ತಿಗೆ ಹೊರಟಿದ್ದ ಒಂಬತ್ತು ಜನರ ಬಂಧನ

    ಧಾರವಾಡ: ಲಾಕ್​ಡೌನ್ ಆದೇಶ ಉಲ್ಲಂಘಿಸಿ ಮೋಜು ಮಸ್ತಿಗಾಗಿ ತೆರಳುತ್ತಿದ್ದ ಯುವಕ, ಯವತಿಯರನ್ನು ವಶಕ್ಕೆ ಪಡೆದ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು, ಠಾಣೆಗೆ ಕರೆತಂದು ಎಫ್​ಐಆರ್ ದಾಖಲಿಸಿಕೊಂಡು, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

    ಮದಿಹಾಳದ ಮಹ್ಮದ್ ಯೂನುಷ್ ಹಳಿಯಾಳ (25), ಹೊಸಯಲ್ಲಾಪುರದ ಸುಹೇಲ ಹುಬ್ಬಳ್ಳಿ (30), ಕಾಮನಕಟ್ಟಿಯ ಸಲೀಂ ಸಂಗೊಳ್ಳಿ (33), ಮಣಕಿಲ್ಲಾದ ಮಹ್ಮದ್ ಇಸ್ಮಾಯಿಲ್ ಧಾರವಾ ಡ್ಕರ್ (28), ಟೋಲ್​ನಾಕಾ ಪ್ರದೇಶದ ನಿವಾಸಿಗಳಾದ ಉತ್ತರ ಪ್ರದೇಶ ಮೂಲದ ದೇವ್ ಕಪಾಲವಾಡ (23), ಅಮೃತಸರ ಮೂಲದ ಸಹಾಜೀದಮಹ್ಮದ್ ಖಾನ್ (22), ಮುಂಬೈ ಮೂಲದ ನೀಲಂ ಮೌರ್ಯ (25), ಹುಬ್ಬಳ್ಳಿ ತಾಲೂಕು ನವನಗರದ ದೀಪಾಲಿ ಗಾಯಕವಾಡ (25) ಹಾಗೂ ಟೋಲ್​ನಾಕಾದ ಮಕ್ತುಂಸಾಬ ಸೊಗಲದ (45) ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಬಂಧಿತರಿಂದ ಸ್ಕೋಡಾ ಹಾಗೂ ವೋಕ್ಸ್​ವೇಗನ್ ಕಂಪನಿಯ 2 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೆಲಗೇರಿ ರಸ್ತೆಯಲ್ಲಿನ ಗ್ರೀನ್ ಹೆವನ್ ಫಾಮ್ರ್ ಹೌಸ್​ಗೆ ಮೋಜು ಮಸ್ತಿಗೆ ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಳ್ನಾವರ ಟೋಲ್ ಬಳಿ ಗ್ರಾಮೀಣ ಠಾಣೆ ಪೊಲೀಸರು ತಪಾಸಣೆ ನಡೆಸಿದ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ 8 ಜನರು ಹಾಗೂ ಫಾಮರ್್​ಹೌಸ್ ಮಾಲೀಕ ಮಕ್ತುಂಸಾಬ ಸೊಗಲದ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ. ನಂತರ ಸ್ಟೇಷನ್ ಬೇಲ್ ಮೇಲೆ ಅವರನ್ನು ಬಿಡುಗಡೆ ಮಾಡಿ ಆರೋಗ್ಯ ತಪಾಸಣೆ ಮಾಡಿಸಿದ್ದಾರಲ್ಲದೆ, ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಾಳಿ ನಡೆಸಿದ ಸಂದರ್ಭದಲ್ಲಿ ಕಾರಿನಲ್ಲಿ ಮದ್ಯ, ಗಾಂಜಾ ಇದ್ದವು ಎನ್ನಲಾಗಿದೆ. ಆದರೆ, ಪೊಲೀಸರು ಮಾತ್ರ ಕೇವಲ ಕಾರುಗಳನ್ನು ವಶಕ್ಕೆ ಪಡೆದಿದ್ದೇವೆ ಎನ್ನುವುದರ ಹಿಂದೆ ಸಾಕಷ್ಟು ಅನುಮಾನ ಮೂಡಿದೆ. ಎಫ್​ಐಆರ್​ನಲ್ಲೇ ಮೋಜು ಮಸ್ತಿಗೆ ತೆರಳುತ್ತಿದ್ದಾರೆ ಎಂದು ನಮೂದಿಸಿರುವ ಪೊಲೀಸರು ಮಾದಕ ವಸ್ತುಗಳು ಸಿಕ್ಕಿಲ್ಲ ಎಂದು

    ಹೇಳಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅದೇನೆ ಇದ್ದರೂ, ಲಾಕ್​ಡೌನ್ ಆದೇಶ ಉಲ್ಲಂಘಿಸಿ ಮೋಜು ಮಸ್ತಿಗೆ ಹೊರಟವರ ದುರುದ್ದೇಶ ಪೊಲೀಸ್ ದಾಳಿಯಿಂದ ಠುಸ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts