More

    ಮೊಳಕೆ ಒಡೆಯದ ಬೀಜ ವಾಪಸ್

    ಬೀದರ್: ಜಿಲ್ಲೆಯಲ್ಲಿ ಉತ್ತಮವಾಗಿ ಮಳೆ ಬೀಳುತ್ತಿರುವುದರಿಂದ ಉದ್ದು, ಹೆಸರು ಬಿತ್ತನೆಗೆ ಇದು ಸಕಾಲವಿದೆ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು. ನಗರದ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷ ಈ ಸಮಯದಲ್ಲಿ ಮಳೆ ಪ್ರಮಾಣ ಕಮ್ಮಿ ಇರುತ್ತಿತ್ತು. ಈಗ ಸರಿಯಾದ ಸಮಯಕ್ಕೆ ಮಳೆ ಬೀಳುತ್ತಿದೆ. ಹೀಗಾಗಿ ಉದ್ದು, ಹೆಸರು, ಹೈಬ್ರಿಡ್ ಜೋಳ, ಸಜ್ಜೆ ಮತ್ತು ನವಣೆಯಂಥ ಸಿರಿ ಧಾನ್ಯಗಳ ಬಿತ್ತನೆಗೆ ಹೆಚ್ಚಿನ ಒತ್ತು ಕೊಡಬೇಕು. ಇಂಥ ಬಹು ಹಾಗೂ ಮಿಶ್ರ ಬೆಳೆಗಳನ್ನು ಬೆಳೆದಲ್ಲಿ ಮುಂದೆ ಉತ್ತಮೆ ಬೆಲೆ ಸಿಕ್ಕು ರೈತರಿಗೆ ಆರ್ಥಿಕ ಲಾಭವಾಗಲಿದೆ ಎಂದರು. ಕೆಲವೆಡೆ ಸೋಯಾಬೀನ್ ಬೀಜ ಸರಿಯಾಗಿ ಮೊಳಕೆಯಾಗುತ್ತಿಲ್ಲ ಎಂಬ ಮಾಹಿತಿ ಇದೆ. ಅಂಥ ಬೀಜಗಳನ್ನು ರೈತರಿಂದ ಹಿಂದಕ್ಕೆ ಪಡೆಯಲಾಗುತ್ತಿದೆ. ಈಗಾಗಲೇ ರೈತರಿಗೆ ವಿತರಿಸದ ಕೆಲವು ಲಾಟ್ಗಳ ನಂಬರಿನ ಸೋಯಾ ಬೀಜ ಬಿತ್ತನೆಗೆ ಯೋಗ್ಯವಲ್ಲ ಎಂದು ತಿಳಿದು ಬಂದಿದೆ. ರೈತರು ನಿಗಾ ವಹಿಸಿ ಬಿತ್ತನೆ ಬೀಜ ಖರೀದಿಸಬೇಕೆಂದು ಕೋರಿದರು. ಕೃಷಿ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಮಾತನಾಡಿ, ಜಿಲ್ಲೆಗೆ ಈಗಾಗಲೇ 65,000 ಕ್ವಿಂಟಾಲ್ ಸೋಯಾಬೀನ್ ಬೀಜ ಬಂದಿದೆ. ಈ ಪೈಕಿ ಈಗಾಗಲೇ 60,000 ಕ್ವಿಂಟಾಲ್ನಷ್ಟು ರೈತರಿಗೆ ವಿತರಿಸಲಾಗಿದೆ. ಈಗ ಮಳೆಯಾಗುತ್ತಿದ್ದರಿಂದ ರೈತರು ತಮ್ಮ ಬಳಿಯಲ್ಲೇ ಇರುವ ಹೆಸರು, ಉದ್ದು ಮತ್ತು ತೊಗರಿ ಬೀಜಗಳನ್ನು ಬಿತ್ತನೆ ಮಾಡಬಹುದಾಗಿದೆ ಎಂದರು. ಕೃಷಿ ಉಪ ಕೃಷಿ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಸಹಾಯಕ ನಿದರ್ೇಶಕ ಎಂ.ಎ. ಅನ್ಸಾರಿ, ಮಾರ್ತಂಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts