More

    ಮೊದಲನೇ ಸ್ಥಾನ ಗಳಿಸಿಕೊಡಿ

    ತರೀಕೆರೆ: ಪೌರಕಾರ್ವಿುಕರ ಶ್ರಮದಿಂದ ಪುರಸಭೆ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ. ಮುಂದಿನ ದಿನದಲ್ಲಿ ಮೊದಲ ಸ್ಥಾನಗಳಿಸುವಂತಾಗಬೇಕು ಎಂದು ಸದಸ್ಯೆ ಸಿ.ಆಶಾ ಹೇಳಿದರು. ಪುರಸಭೆಯಿಂದ ಶುಕ್ರವಾರ ಏರ್ಪಡಿಸಿದ್ದ ಪೌರಕಾರ್ವಿುಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಕೆಲಸ ನಿರ್ವಹಿಸಲು ಬೇಕಾದ ಉತ್ತಮ ವಾತಾವರಣ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದರು.

    ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ಪೌರಕಾರ್ವಿುಕರು ಪಟ್ಟಣದ ಜನರ ನಿಜವಾದ ಶುಶ್ರೂಷಕರು. ಅವರ ಅಪರಿಮಿತ ಸೇವೆ ಪರಿಗಣಿಸಿರುವ ಸರ್ಕಾರ ಸರ್ಕಾರಿ ನೌಕರರೆಂದು ಘೊಷಿಸಿದೆ. ಇವರೊಂದಿಗೆ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರು, ವಾಹನಗಳ ಚಾಲಕರು ಮತ್ತು ಹೊರಗುತ್ತಿಗೆ ಆಧಾರದ ಕೆಲಸಗಾರರನ್ನು ಸರ್ಕಾರ ಕಾಯಂ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

    ಮುಖ್ಯಾಧಿಕಾರಿ ಎಚ್.ಮಹಾಂತೇಶ್ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪೌರಕಾರ್ವಿುಕರು ಬಳಸಿಕೊಳ್ಳಬೇಕು ಎಂದು ಹೇಳಿದರು.  ಮೃತ ವಿದ್ಯಾರ್ಥಿನಿ ರಕ್ಷಿತಾಬಾಯಿ ಅವರಿಗೆ ಮೌನಾಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts