More

    ಮೊಘಲರ ದಾರಿಯಲ್ಲಿ ಕಾಂಗ್ರೆಸ್ಸಿಗರು – ಹೀಮಂತ ಬಿಸ್ವಾಸ ಶರ್ಮಾ

    ಬೆಳಗಾವಿ: ಈ ಹಿಂದೆ ಮೊಘಲರು ದೇಶ ಹಾಳು ಮಾಡಲು ಪ್ರಯತ್ನಿಸಿದ್ದರು. ಪ್ರಸ್ತುತ ಕಾಂಗ್ರೆಸ್ಸಿನವರು ಆ ದಾರಿಯಲ್ಲಿ ಸಾಗುತ್ತಿದ್ದಾರೆ. ರಾಮಮಂದಿರ ಬಗ್ಗೆ ಎಂದೂ ಮಾತನಾಡದ ಕಾಂಗ್ರೆಸ್‌ನವರು ಕೇವಲ ಬಾಬರಿ ಮಸೀದಿ ಬಗ್ಗೆ ಮಾತನಾಡುತ್ತಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾಸ ಶರ್ಮಾ ಕುಟುಕಿದರು.

    ಇಲ್ಲಿನ ಶಹಾಪುರ ಶಿವಾಜಿ ಉದ್ಯಾನ ಬಳಿ ನಿರ್ಮಿಸಿರುವ ‘ಶಿವಚರಿತ್ರೆ ವಸ್ತು ಪ್ರದರ್ಶನ ತಾಣ’ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ಸಿಗರು ಹಿಂದಿನ ಮೊಘಲರಿಗೆ ಸಮಾನ. ಅವರನ್ನು ದೇಶದಿಂದ ಬೇರು ಸಮೇತ ಕಿತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲ ತುಂಬಬೇಕು ಎಂದರು.
    ಇತಿಹಾಸಕಾರರು ಇಡೀ ದೇಶ ಔರಂಗಜೇಬನ ಕೈಯಲ್ಲಿದೆ ಎಂದು ಬರೆದಿದ್ದಾರೆ. ಆದರೆ, ಶಿವಾಜಿ ಮಹಾರಾಜರು ಔರಂಗಜೇಬನಿಗಿಂತ ನೂರು ಪಟ್ಟು ಪರಾಕ್ರಮಿಯಾಗಿದ್ದರು. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಈ ದೇಶದ ಇತಿಹಾಸ ಬಾಬರ್, ಔರಂಗಜೇಬನದು ಎಂದರು. ಆದರೆ, ವಾಸ್ತವವಾಗಿ ಭಾರತದ ಇತಿಹಾಸ ಶಿವಾಜಿಯದಾಗಿದೆ ಎಂದರು.

    ನಮಗೆ ಮದರಸಾಗಳ ಅಗತ್ಯವಿಲ್ಲ. ವಿಶ್ವವಿದ್ಯಾಲಯ ಹಾಗೂ ಶಾಲಾ-ಕಾಲೇಜುಗಳ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅಸ್ಸಾಂನಲ್ಲಿರುವ ಎಲ್ಲ ಮದರಸಾಗಳನ್ನು ಮುಚ್ಚುತ್ತೇನೆ ಎಂದರು.
    ಶಾಸಕ ಅಭಯ ಪಾಟೀಲ ಮಾತನಾಡಿ, ಧ್ವನಿ ಮತ್ತು ಬೆಳಕು ಪ್ರದರ್ಶನದ ಮೂಲಕ ನೀರಿನ ಮೇಲೆ ಶಿವಚರಿತ್ರೆ ಪ್ರದರ್ಶನಗೊಳ್ಳುತ್ತಿರುವುದು ದೇಶದಲ್ಲೇ ಮೊದಲು. ಶಿವಾಜಿ ಮಹಾರಾಜರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ಯುವಪೀಳಿಗೆಗೆ ಪರಿಚಯಿಸಲು ಶಿವಚರಿತ್ರೆ ನಿರ್ಮಿಸಲಾಗಿದೆ ಎಂದರು.
    ಸಾಹಿತಿ ಡಾ. ಸರಜೂ ಕಾಟ್ಕರ್, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮುಳೆ, ಮಹಾನಗರ ಪಾಲಿಕೆ ಸದಸ್ಯ ಜಯಂತ ಜಾಧವ, ಎಂ.ಬಿ.ಝಿರಲಿ, ರಾಜು ಭಾತಕಾಂಡೆ, ವಿನೋದ ಗಾಯಕವಾಡ ಇತರರಿದ್ದರು. ಶಾಸಕ ಅನಿಲ ಬೆನಕೆ ಸ್ವಾಗತಿಸಿದರು. ಶಿವಚರಿತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಎಲ್ಲರೂ ಮೊಬೈಲ್ ಟಾರ್ಚ್‌ಗಳನ್ನು ಶುರು ಮಾಡಿ ಘೋಷಣೆ ಕೂಗಿದರು.
    ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾಗಳು ಬಂದ್
    ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾಗಳನ್ನು ಸಂಪೂರ್ಣವಾಗಿ ಬಂದ್ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಹಿಂದುಗಳು ಉಳಿಯಲು ಶಿವಾಜಿ ಮಹಾರಾಜರೂ ಕಾರಣವಾಗಿದ್ದಾರೆ. ಅಸ್ಸಾಂ ರಾಜ್ಯದಲ್ಲಿ ಹಿಂದುಸ್ತಾನ ಬಿಟ್ಟು ಹೋಗುವ ವಾತಾವರಣವಿತ್ತು. ಅಸ್ಸಾಂ ರಾಜ್ಯದಲ್ಲಿ ಹಿಂದುಗಳು ಹಿಂದುಗಳು ಉಳಿಯಲು ಮುಖ್ಯಮಂತ್ರಿ ಹೀಮಂತ ಬಿಸ್ವಾಸ ಶರ್ಮಾ ಕಾರಣ. ಪಾಕಿಸ್ತಾನ ಪರ ಮಾತನಾಡುವವರು ದೇಶದಲ್ಲಿದ್ದಾರೆ. ಹಿಂದುಗಳಿಗೆ ಇದೊಂದೇ ದೇಶವಿದೆ. ಭಾಯಿ ಭಾಯಿ ಎಂದು ದೇಶವನ್ನು ಒಡೆಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಾಕಿಸ್ತಾನ ಪರ ಮಾತನಾಡುವರು ಇಲ್ಲಿಂದ ಹೋಗಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts