More

    ಮೇ.26ರಂದು ಶ್ರೀಶಾ ಸೌಹಾರ್ದ ಸಹಕಾರಿ ಕಂಕನಾಡಿ ಶಾಖೆ ಉದ್ಘಾಟನೆ

    ಮಂಗಳೂರು: ಶ್ರೀಶಾ ಸೊಸೈಟಿಯು ತನ್ನ ಉನ್ನತಿಗೆ ಕಾರಣೀಭೂತರಾದ ಗ್ರಾಹಕರ ಅನುಕೂಲಕ್ಕಾಗಿ ಮೇ.26ರಂದು ಕಂಕನಾಡಿಯ ಫಾಧರ್ ಮುಲ್ಲರ್ ವೃತ್ತದ ಫೆನಾರ್ಂಡಿಸ್ ಕಾಂಪ್ಲೆಕ್ಸ್‌ನಲ್ಲಿ 5ನೇ ಸುಸಜ್ಜಿತ ಶಾಖೆ ಕಾರ್ಯರಂಭಗೊಳ್ಳಲಿದೆ.

    ಮಂಗಳೂರಿನ ಉರ್ವ ಸ್ಟೋರ್ಸ್‌ನ ರಘು ಕಟ್ಟಡದಲ್ಲಿ 2019ರಲ್ಲಿ ಆರಂಭಗೊಂಡು ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ತಾನು ಸಂಸ್ಥಾಪನೆಗೊಂಡ 5 ನೇ ವರ್ಷದಲ್ಲೇ ಈಗ 5 ನೇ ಸರ್ವಸುಸಜ್ಜಿತ ಶಾಖೆಯನ್ನು ಕಂಕನಾಡಿಯಲ್ಲಿ ತೆರೆಯುತ್ತಿರುವುದು ವಿಶೇಷ.

    ಕಂಕನಾಡಿ ಶಾಖೆಯನ್ನು ಮಂಗಳೂರಿನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಲಿರುವರು, ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕೊಯೆಲ್ಲೋ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕರಾದ ಎಸ್.ಕೆ ಮಂಜುನಾಥ್ ಮತ್ತು ಭಾರತಿ ಭಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ಶ್ರೀಶಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಂಎಸ್ ಗುರುರಾಜ್, ಉಪಾಧ್ಯಕ್ಷ ಉದಯ ವಿ. ಶಾಸ್ತ್ರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿ’ಸೋಜ, ಕಂಕನಾಡಿ ಶಾಖಾ ಪ್ರಬಂಧಕರಾದ ಚೈತ್ರ ಬಿ. ಸಹಿತ ಹಲವರು ಉಪಸ್ಥಿತರಿರುವರು.

    —————–

    ಶ್ರೀಶಾ ಸೌಹಾರ್ದ ಸಹಕಾರಿಗೆ 1.23ಕೋ.ರು ನಿವ್ವಳ ಲಾಭ

    ಶ್ರೀಶಾ ಸೌಹಾರ್ದ ಸಹಕಾರಿ ಆರಂಭದ ಪ್ರಥಮ ವರ್ಷದಿಂದಲೇ ಸೊಸೈಟಿಯು ಲಾಭದ ಗಳಿಕೆಯಲ್ಲಿ ಏರು ಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಸಹಸ್ರಾರು ಸಂತೃಪ್ತ ಗ್ರಾಹಕರಿಗೆ ಉತ್ತಮ ಡಿವಿಡೆಂಡ್‌ನ್ನು ನೀಡುತ್ತಾ ಬರುತ್ತಿರುವುದು ಸಂಸ್ಥೆಯ ಕಾರ್ಯಾದಕ್ಷತೆಗೆ ಹಿಡಿದ ಕೈಗನ್ನಡಿ. ಕಳೆದ ಆರ್ಥಿಕ ವರ್ಷದಲ್ಲಿ ಸೊಸೈಟಿಯು ಶೇ.99ಶೇ. ವಸೂಲಾತಿಯೊಂದಿಗೆ 1.23 ಕೋ.ರು ನಿವ್ವಳ ಲಾಭ ಗಳಿಸಿ ಅತ್ಯುತ್ತಮ ಸಾಧನೆ ಮೆರೆದಿದೆ. ಶ್ರೀಶಾ ಸೊಸೈಟಿಯ ನಿರೀಕ್ಷೆಗೂ ಮೀರಿದ ಈ ಅಪೂರ್ವ ಹಾಗೂ ಅನುಕರಣೀಯ ಸಾಧನೆಗೆ ಸಹಕಾರಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಆಳವಾದ ಅನುಭವ ಹಾಗೂ ದೂರದೃಷ್ಟಿಯುಳ್ಳ ಅಧ್ಯಕ್ಷರ ಜೊತೆಗೆ ನಿಷ್ಕಾಮ ಆಡಳಿತ ಮಂಡಳಿ ಹಾಗೂ ಶಿಸ್ತುಬದ್ಧ ಸಿಬ್ಬಂದಿ ವರ್ಗದ ಶ್ರಮ ಬಹು ಮುಖ್ಯ ಪಾತ್ರ ವಹಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts