More

    ಮೇ ಸಾಹಿತ್ಯ ಮೇಳ 25ರಿಂದ

    ಕೊಪ್ಪಳ: ಮೇ ಸಾಹಿತ್ಯ ಮೇಳ ದಶಮಾನೋತ್ಸವ ಕಾರ್ಯಕ್ರಮ ಕೊಪ್ಪಳದಲ್ಲಿ ಮೇ 25ರಿಂದ ಎರಡು ದಿನ ನಡೆಯಲಿದೆ ಎಂದು ಸಂಟಕ ಬಸವರಾಜ ಸೂಳಿಭಾವಿ ತಿಳಿಸಿದರು.

    ಜನಮುಖಿ, ಆಳುವ ವರ್ಗದ ಧ್ವನಿಯಾಗಿ ಕನ್ನಡ ಸಾಹಿತ್ಯ ಪರಂಪರೆ ಹಿಂದಿನಿಂದ ನಡೆದು ಬಂದಿದೆ. ಬದಲಾದ ಕಾಲಟ್ಟದಲ್ಲಿ ಬಂಡವಾಳಶಾಹಿ ವರ್ಗ ಸಾಹಿತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹಲವು ಹೆಸರುಗಳಲ್ಲಿ ಸಾಹಿತ್ಯ ಕೆಲಸಗಳು ನಡೆಯುತ್ತಿವೆ. ಆದರೆ, ಜನರ ಭಾವನೆಗೆ ಇಂಬು ನೀಡುವ, ನೋವು ನಲಿವಿಗೆ ಸ್ಪಂದಿಸಬೇಕು. ಅದನ್ನು ಮುಂದುವರಿಸಬೇಕೆಂಬ ಸದಾಶಯದೊಂದಿಗೆ ಮೇ ಸಾಹಿತ್ಯ ಮೇಳ ಆಯೋಜಿಸಿಕೊಂಡು ಬರುತ್ತಿದ್ದೇವೆ. ಮೇ ತಿಂಗಳಲ್ಲಿ ಪ್ರಕೃತಿ ಹೊಸಚಿಗುರು ಕಾಣುತ್ತದೆ. ಬೇಸಿಗೆ ಜತೆಗೆ ವಸಂತ ಕಾಲ ಪ್ರವೇಶಿಸಲಿದೆ. ಹೀಗಾಗಿ ಇದೇ ತಿಂಗಳಲ್ಲಿ ಮೇಳ ನಡೆಸುತ್ತಿದ್ದೇವೆ. ಹತ್ತು ವರ್ಷದಿಂದ ನಡೆದುಕೊಂಡು ಬಂದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಪ್ರಗತಿ ಪಂಥ, ಬಂಡಾಯ ಸಾಹಿತ್ಯದ ಮುಂದುವರಿದ ಭಾಗವೇ ಮೇ ಸಾಹಿತ್ಯ ಮೇಳ. ಜನರಿಂದ, ಜನರಿಗೋಸ್ಕರ ನಡೆಯಲಿದೆ. ಜನರಿಂದಲೇ ಹಣ ಸಂಗ್ರಹಿಸಿ ಕಾರ್ಯಕ್ರಮ ಮಾಡುತ್ತೇವೆ. ಪ್ರತಿ ವರ್ಷವೂ ಮೇಳ ಮುಗಿದ ಮೇಲೆ ಹಣದ ಮೂಲ, ಅವರ ಹೆಸರು, ಖರ್ಚು, ವೆಚ್ಚದ ವಿವರವನ್ನು ಪ್ರಕಟಿಸುತ್ತೇವೆ. ಪ್ರತಿ ಮೇಳಕ್ಕೆ 8-10 ಲಕ್ಷರೂ. ರ್ಖಚಾಗುತ್ತದೆ. ಅದನ್ನು ಜನರೇ ಕೊಡುತ್ತಿದ್ದಾರೆ. ಎಲ್ಲರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ನೋಂದಣಿ ಮಾಡಿಕೊಂಡವರಿಗೆ 200 ರೂ. ನೋಂದಣಿ ಶುಲ್ಕ ಇರಲಿದೆ. ಆದಾಗ್ಯೂ ಇತರರು ಭಾಗವಹಿಸಬಹುದು. ಸಂವಾದಮುಖಿಯಾದ ಕಾರ್ಯಕ್ರಮ ಇದಾಗಿರಲಿದೆ. ಒಂದು ಸಾವಿರ ಜನರು ಭಾಗಿಯಾಗುವರು ನಾಡುನುಡಿಗಾಗಿ ಶ್ರಮಿಸಿದವರಿಗೆ ಸನ್ಮಾನ ಇರಲಿದೆ ಎಂದರು.

    ಪ್ರಮುಖರಾದ ಅಲ್ಲಮ ಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಟಿ.ರತ್ನಾಕರ, ಅಲ್ಲಮ ಪ್ರಭು ಬೆಟ್ಟದೂರು, ಡಾ.ಮಹಾಂತೇಶ ಮಲ್ಲನಗೌಡರ, ಡಿ.ಎಂ.ಬಡಿಗೇರ, ಶರಣು ಶೆಟ್ಟರ್​, ಕಾಶಪ್ಪ ಚಲವಾದಿ, ಎಂ.ಕೆ.ಸಾಹೇಬ, ಮುತ್ತು ಬಿಳಿಎಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts