More

    ಮೇ ತಿಂಗಳಲ್ಲಿ ಮದುವೆಗೆ ಅನುಮತಿ ಕಡ್ಡಾಯ

    ಭದ್ರಾವತಿ: ಕರೊನಾ ಕಾಲದಲ್ಲಿ ಮದುವೆ ಮಾಡಲು ಅ„ಕಾರಿಗಳ ಅನುಮತಿ ಪಡೆಯುವ ಪರಿಸ್ಥಿತಿ ಬಂದಿತ್ತು. ಏಪ್ರಿಲ್ ಮತ್ತು ಮೇ ಹೇಳಿಕೇಳಿ ಮದುವೆ ಸುಗ್ಗಿಯ ದಿನಗಳು. ಇದೇ ಸಮಯದಲ್ಲಿ ಚುನಾವಣೆ ಬಂದಿದೆ. ಹೀಗಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಅವ„ಯಲ್ಲಿ ಮದುವೆ ಮಾಡಬೇಕೆಂದರೆ, ಯಾವುದೇ ಧಾರ್ಮಿಕ ಕಾರ್ಯಕ್ರಮ, ಜಾತ್ರೆ ಆಯೋಜನೆಗೆ ಅ„ಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ.
    ನಗರಸಭೆ ಸಭಾಂಗಣದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ„ಗಳ ಸಭೆಯಲ್ಲಿ ಚುನಾವಣೆ ನೀತಿ ನಿಯಮಗಳ ಮಾಹಿತಿಯನ್ನು ನೀಡಿದ ಚುನಾವಣಾ„ಕಾರಿ ರವಿಚಂದ್ರನಾಯಕ್, ಚುನಾವಣಾ ಪ್ರಚಾರವನ್ನು ಅನುಮತಿ ಪಡೆದು ಆಯೋಗದ ನಿಯಮದ ಪ್ರಕಾರ ಮಾಡಬಹುದು. ಇದಕ್ಕಾಗಿ ಚುನಾವಣೆಯ ಕಾರ್ಯ ನಿಮಿತ್ತ ತಾಲೂಕು ಕಚೇರಿಯಲ್ಲಿ ಚುನಾವಣಾ ಶಾಖೆಯನ್ನು ತೆರೆಯಲಾಗಿದ್ದು ಈ ಮೂಲಕ ಚುನಾವಣೆ ಸಂಬಂಧಪಟ್ಟ ಅ„ಕೃತ ಮಾಹಿತಿಯನ್ನು ಪಡೆಯಬಹುದು. ಚುನಾವಣೆ ಸಂಬಂಧ ಅನುಮತಿಗಳನ್ನು ಪಡೆಯಲು ಅನುಕೂಲವಾಗಲೆಂದು ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.
    ಮತದಾರರ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಹೊಸದಾಗಿ ಸೇರಿಸುವ ಕಾರ್ಯ ನಡೆಯುತ್ತಿದ್ದು ಮತದಾರರ ಕರಾರುವಕ್ಕಾದ ಅಂಕಿಅಂಶ ನೀಡುವಲ್ಲಿ ವಿಳಂಬ ಆಗುತ್ತದೆ. ಈಗಾಗಲೆ ತಾಲೂಕಿನಲ್ಲಿ ವಿವಿಧ ರಾಜಕೀಯ ಪಕ್ಷಗಳ, ನಾಯಕರ -É್ಲಕ್ಸ್‍ಗಳನ್ನು ತೆರವುಗೊಳಿಸಲಾಗಿದೆ. ಯಾರಾದರೂ ಅನುಮತಿ ಪಡೆಯದೆ ಅನ„ಕೃವಾಗಿ -É್ಲಕ್ಸ್, ಬ್ಯಾನರ್, ಪೆÇೀಸ್ಟರ್‍ಗಳನ್ನು ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
    ತಹಸೀಲ್ದಾರ್ ಸುರೇಶ್ ಆಚಾರ್, ನಗರಸಭೆ ಆಯುಕ್ತ ಮನುಕುಮಾರ್, ತಾಪಂ ಇಒ ರಮೇಶ್, ಬಿಇಒ ಎ.ಕೆ.ನಾಗೇಂದ್ರಪ್ಪ ಇದ್ದರು.
    ಚುನಾವಣೆಗೆ ಸಕಲ ಕ್ರಮ: ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕಿನಲ್ಲಿ ಸಕಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರವಿಚಂದ್ರ ನಾಯಕ್ ಹೇಳಿದರು. ಏಪ್ರಿಲ್ 13ರಂದು ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಲಿದ್ದು ಅಂದೇ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. 20ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು 21ರಂದು ನಾಮಪತ್ರ ಪರಿಶೀಲನೆ, 24ರಂದು ನಾಮಪತ್ರವನ್ನು ಹಿಂಪಡೆಯಲು ಕಡೆ ದಿನವಾಗಿದೆ. ನಂತರ ಅ„ಕೃತವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮೇ 10 ರಂದು ಮತದಾನ, ಮೇ 13 ರಂದು -Àಲಿತಾಂಶವನ್ನು ಪ್ರಕಟಿಸಲಾಗುವುದು. ಮತ ಎಣಿಕೆಯು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts