More

    ಮೇಲ್ ಮರುವತ್ತೂರು ದೇಗುಲಕ್ಕೆ ಬಸ್ ವ್ಯವಸ್ಥೆ

    ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಸಂಯೋಜಕ ಜನಧ್ವನಿ ಬಿ.ವೆಂಕಟೇಶ್ ಭರವಸೆ

    ಹನೂರು: ಕ್ಷೇತ್ರದಲ್ಲಿ ಕೈಗೊಂಡಿರುವ ಸಮಾಜಮುಖಿ ಸೇವಾ ಕಾರ್ಯಗಳು ತೃಪ್ತಿ ತಂದಿದ್ದು, ಮತ್ತಷ್ಟು ಸೇವೆ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಸಂಯೋಜಕ ಜನಧ್ವನಿ ಬಿ.ವೆಂಕಟೇಶ್ ತಿಳಿಸಿದರು.


    ತಾಲೂಕಿನ ವಡಕೆಹಳ್ಳ ಗ್ರಾಮದ ಓಂ ಶಕ್ತಿ ಕಾಲನಿಯಲ್ಲಿನ ಮೇಲ್ ಮರುವತ್ತೂರು ಆದಿಪರಾಶಕ್ತಿ ದೇಗುಲದಲ್ಲಿ ಭಾನುವಾರ ಆಯೋಜಿಸಿದ್ದ 5ನೇ ವರ್ಷದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.


    5 ವರ್ಷಗಳಿಂದ ದೇಗುಲದ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮೇಲ್ ಮರುವತ್ತೂರು ದೇಗುಲಕ್ಕೆ ತೆರಳುವ ಭಕ್ತರಿಗೆ ಋಣ ಸಂದಾಯ ಬಸ್ ಸೇವೆ ಒದಗಿಸಲಾಗುವುದು ಎಂದರು.


    ಕ್ಷೇತ್ರದ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 30ಕ್ಕೂ ಹೆಚ್ಚು ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ಕೊಳವೆಬಾವಿ ಕೊರೆಸುವಿಕೆ, ಪಡಿತರ ಕೊಂಡೊಯ್ಯಲು ಕಾಡಂಚಿನ ಗ್ರಾಮಗಳಿಗೆ ವಾಹನ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಲಾಗಿದೆ ಎಂದರು.


    ಗ್ರಾಪಂ ಸದಸ್ಯರಾದ ರಾಜಪ್ಪ, ಮಲ್ಲೇಶ್, ಮುಖಂಡರಾದ ತಂಗವೆಲ್, ಗಣೇಶ್, ಸುರೇಶ್, ಶ್ರೀನಿವಾಸ್, ಶ್ರೀನಿವಾಸ್‌ಮೂರ್ತಿ, ವೆಂಕಟೇಶ್, ದೊಡ್ದಮುತು, ಬಸವಣ್ಣ ಇದ್ದರು.

    ಫೋಟೊ

    ವಡಕೆಹಳ್ಳ ಗ್ರಾಮದ ಮೇಲ್ ಮರುವತ್ತೂರು ಆದಿಪರಾಶಕ್ತಿ ದೇಗುಲದ 5ನೇ ವರ್ಷದ ಪೂಜಾ ಕಾರ್ಯಕ್ರಮದಲ್ಲಿ ಬಿ.ವೆಂಕಟೇಶ್ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts