More

    ಮೆಗಾ ಲೋಕ ಅದಾಲತ್ 19ರಂದು

    ಕಾರವಾರ: ಡಿ. 19ರಂದು ಜಿಲ್ಲೆಯ 26 ನ್ಯಾಯ ಪೀಠಗಗಳಲ್ಲಿ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಿಯಾಗಬಹುದಾದ ಸಿವಿಲ್, ಕ್ರಿಮಿನಲ್ ಕಂಪೌಂಡೇಬಲ್ ಪ್ರಕರಣಗಳನ್ನು ಇಲ್ಲಿ ರಾಜಿ ಸಂಧಾನಕ್ಕೆ ತೆಗೆದುಕೊಳ್ಳಲಾಗುವುದು. ಜಿಲ್ಲೆಯಲ್ಲಿ 35,458 ರಾಜಿಗೆ ಅರ್ಹವಾದ ಪ್ರಕರಣಗಳಿವೆ. ಅದರಲ್ಲಿ 6,371 ಪ್ರಕರಣಗಳನ್ನು ಗುರುತಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ಪೊಲೀಸ್ ಠಾಣೆಗಳಿಗೂ ಸೂಚಿಸಲಾಗಿದೆ. ಇನ್ನು ಯಾರಾದರೂ ರಾಜಿ ಸಂಧಾನ ಬಯಸಿ ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಹಾಗಿದ್ದರೆ ಅಂಥ ಪ್ರಕರಣಗಳನ್ನೂ ಸಂಧಾನಕ್ಕೆ ಬಳಸಿಕೊಳ್ಳಲಾಗುವುದು ಎಂದರು.

    ಪ್ರಮುಖವಾಗಿ ಭೂ ಸ್ವಾಧೀನ ಹೆಚ್ಚುವರಿ ಪರಿಹಾರಕ್ಕೆ ಸಂಬಂಧಿಸಿದ 31 ಪ್ರಕರಣಗಳು ಇತ್ಯರ್ಥವಾಗಿದ್ದು, ಅದಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು. ಮರಳು ಮುಂತಾದ ಖನಿಜಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನಗಳ ಮೇಲೆ 61 ಪ್ರಕರಣ ದಾಖಲಾಗಿವೆ. ಈಗ ದಂಡ ಕಟ್ಟಿಸಿ ವಾಹನಗಳನ್ನು ಬಿಡುಗಡೆ ಮಾಡಬಹುದು ಎಂದು ಕಾಯ್ದೆಯಲ್ಲಿ ತಿದ್ದುಪಡಿಯಾಗಿದೆ. ಆ ಎಲ್ಲ ಪ್ರಕರಣಗಳನ್ನು ಸಂಧಾನಕ್ಕೆ ತೆಗೆದುಕೊಳ್ಳಲಾಗುವುದು. ಮೋಟಾರು ವಾಹನ ಅಪಘಾತ ಕುರಿತಾದ ಪ್ರಕರಣಗಳು, ಜೀವನಾಂಶ ಮುಂತಾದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗುವುದು ಎಂದು ತಿಳಿಸಿದರು.

    ಲೋಕ ಅದಾಲತ್​ನಲ್ಲಿ ಕಕ್ಷೀದಾರರು ರಾಜಿಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಲ್ಲಿ ಅವರ ಹಣ ಹಾಗೂ ಸಮಯದ ಉಳಿತಾಯ ವಾಗುತ್ತದೆ. ನ್ಯಾಯಾಲಯದ ಶುಲ್ಕ ಕೂಡ ಕಟ್ಟುವ ಅವಶ್ಯಕತೆ ಇಲ್ಲ.
    | ಟಿ. ಗೋವಿಂದಯ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

    ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ
    ಜಿಲ್ಲೆಯ ಸೆಶನ್ಸ್ ಕೋರ್ಟ್​ನಲ್ಲಿ ಸಾಕಷ್ಟು ಪ್ರಕರಣ ಇರುವುದರಿಂದ 2ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಪ್ರಾರಂಭಿಸಲು ಹೈಕೋರ್ಟ್ ಒಪ್ಪಿಗೆ ನೀಡಿದೆ. ಜಿಲ್ಲಾ ನ್ಯಾಯಾಲಯದ ಆವರಣದ ವಕೀಲರ ಸಂಘದ ಕಟ್ಟಡದಲ್ಲಿ ನ್ಯಾಯಾಲಯ ಸಿದ್ಧಪಡಿಸಲಾಗುತ್ತಿದ್ದು, 2 ತಿಂಗಳ ನಂತರ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಟಿ. ಗೋವಿಂದಯ್ಯ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts