More

    ಮೂಲ ಸೇವೆ ಖಾಸಗೀಕರಣ ಬೇಡ

    ಮುಂಡರಗಿ: ಆರೋಗ್ಯ, ಶಿಕ್ಷಣ, ಬಿಸಿಯೂಟ ತಯಾರಿಕೆ ಮತ್ತು ವಿತರಣೆ ಮೊದಲಾದ ಮೂಲ ಸೇವೆಗಳನ್ನು ಖಾಸಗೀಕರಣ ಮಾಡಬಾರದು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಆರೋಗ್ಯ ಮಿಷನ್ ಮೊದಲಾದವುಗಳಿಗೆ ಸಾಕಷ್ಟು ಅನುದಾನ ನೀಡಬೇಕು. ಯೋಜನಾ ಕಾರ್ವಿುಕರನ್ನು ಕಾಯಂ ಮಾಡಿ ಮಾಸಿಕ 21,000 ರೂಪಾಯಿ ವೇತನ ನೀಡಬೇಕು ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ತಹಸೀಲ್ದಾರ್ ಆಶಪ್ಪ ಪೂಜಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಕರೊನಾ ನೆಪ ಒಡ್ಡಿ ಕೆಲಸದ ಅವಧಿಯನ್ನು ಹೆಚ್ಚಿಸುವ ಮತ್ತು ಕಾರ್ವಿುಕ ಪರವಾಗಿರುವ ಕಾಯ್ದೆಗಳನ್ನು ಸ್ಥಗಿತಗೊಳಿಸುವ ಕ್ರಮಗಳನ್ನು ಕೈಬಿಡಬೇಕು. ಕರೊನಾ ನಿಯಂತ್ರಣದಲ್ಲಿ ತೊಡಗಿಕೊಂಡಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್ ಒದಗಿಸಬೇಕು. 10,000 ರೂಪಾಯಿ ಭತ್ಯೆ ನೀಡಬೇಕು. ಕರೊನಾ ಸೋಂಕಿತ ಕಾರ್ಯಕರ್ತೆಯರಿಗೆ ಕನಿಷ್ಠ 10ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದರು.

    ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸಿ.ಬಿ. ಸೆಳಕೆ, ಶಂಕರ ದೇವರಮನಿ, ಆರ್.ಎ. ನವಲಗುಂದ, ಕೆ.ಜಿ. ಬಿಳಗಿ, ಎಸ್.ಡಿ. ಚಲವಾದಿ, ನಿಂಗಮ್ಮ ಲಿಂಗಶೆಟ್ಟರ, ಆರ್.ಎಂ. ದೊಡ್ಡಮನಿ, ಎಚ್.ಎಚ್. ವಾಲಿಕಾರ, ಎ.ಎನ್. ಕರಕಣ್ಣವರ, ಮೀರಾಬಾಯಿ ಲಮಾಣಿ, ಸರೋಜಾ ಲಮಾಣಿ, ನೂರಜಾನ್ ಮುಲ್ಲಾ, ಸರೋಜಾ ಅಂಗಡಿ ಮತ್ತಿತರರು ಇದ್ದರು.

    ಸಮರ್ಪಕ ಗೊಬ್ಬರ ವಿತರಣೆಗೆ ಒತ್ತಾಯ

    ಮುಂಡರಗಿ: ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತ ಸಂಘ ತಾಲೂಕು ಘಟಕದ ಸದಸ್ಯರು ತಹಸೀಲ್ದಾರ್ ಆಶಪ್ಪ ಪೂಜಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಬರಗಾಲ ಹಾಗೂ ಮತ್ತಿತರ ಕಾರಣಗಳಿಂದಾಗಿ ರೈತರು ಪ್ರತಿ ವರ್ಷ ಬೆಳೆ ನಷ್ಟ ಎದುರಿಸುತ್ತಿದ್ದಾರೆ. ಎಲ್ಲ ವರ್ಗದ ರೈತರಿಗೆ ಸರ್ಕಾರ ಸಕಾಲದಲ್ಲಿ ರಸಗೊಬ್ಬರ ಹಾಗೂ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ಪೂರೈಸಬೇಕು. ನೂತನವಾಗಿ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯು ರೈತರಿಗೆ ಮಾರಕವಾಗಿದೆ. ಅದೇ ರೀತಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಅದನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಬಿತ್ತನೆ ಬೀಜದ ಹಕ್ಕನ್ನು ಕೇಂದ್ರ ಸರ್ಕಾರ ರೈತರಿಂದ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರ ನಡೆಸಿದೆ. ಬೀಜದ ಹಕ್ಕು ರೈತರ ಬಳಿ ಉಳಿಯುವಂತಾಗಬೇಕು. ತಾಲೂಕಿನ ಎಲ್ಲ ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಉಳಿಬಸಯ್ಯ ಮಳಿಮಠ, ಯಂಕಪ್ಪ ಬಂಡಿವಡ್ಡರ, ಮಂಜಪ್ಪ ಜೋಳದ, ಷಣ್ಮುಖಪ್ಪ ಮುರುಡಿ, ಶರಣಪ್ಪ ಕಂಬಳಿ, ಮಹಾದೇವಪ್ಪ ಬಳ್ಳಾರಿ, ಬಿ.ವೈ. ಕೊಡತಿ, ಬಸನಗೌಡ ಮರಿಗೌಡರ, ಕಸ್ತೂರೆಮ್ಮ ಅರಕೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts