More

    ಮೂಲಸೌಕರ್ಯ ಕಲ್ಪಿಸಲು ಆದ್ಯತೆ

    ಗದಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ರಸ್ತೆ, ಸ್ವಚ್ಛತೆ ಸೇರಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಹೊಂಬಳದಲ್ಲಿ ಮೈಲಾರಪ್ಪ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ 1.11 ಕೋಟಿ ರೂ. ವೆಚ್ಚದಲ್ಲಿ ಐದು ಹೆಚ್ಚುವರಿ ಕೊಠಡಿಗಳ ಕಾಮಗಾರಿ, ಬಸ್ ಪ್ರಯಾಣಿಕರ ತಂಗುದಾಣ, ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಹುಲಿಗೆಮ್ಮ, ಗಣೇಶ ಸಮುದಾಯ ಭವನಗಳ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಜಗತ್ತು ಹೆಚ್ಚು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ. ಯಾವುದೇ ರಂಗದಲ್ಲಿ ಉದ್ಯೋಗ ಪಡೆಯಲು ಅಥವಾ ನೀಡಲು ಶಿಕ್ಷಣವೇ ಮಾನದಂಡವಾಗಿದೆ ಎಂದರು.

    ಜಿಪಂ ಸದಸ್ಯೆ ಲಲಿತಾ ಹುಣಸಿಕಟ್ಟಿ, ತಾಪಂ ಸದಸ್ಯೆ ಮುಮ್ತಾಜ್ ಬೇಗಂ ಬಾಪುನವರ, ಗ್ರಾಪಂ ಅಧ್ಯಕ್ಷ ಬಸವರಾಜ ಹುಣಸೀಮರದ, ಮೋಹನ ಮಾಳಶೆಟ್ಟಿ, ಸಿಕಂದರ ಬಾಪೂನವರ ಮತ್ತಿತರರು ಇದ್ದರು.

    ನಂತರ ಸಚಿವ ಸಿ.ಸಿ ಪಾಟೀಲ ಅವರು ಸಂಸದ ಪಿ.ಸಿ.ಗದ್ದಿಗೌಡರು ತಮ್ಮ ಸಂಸದರ ಅಭಿವೃದ್ಧಿ ಅನುದಾನದಲ್ಲಿ ಹೊಂಬಳದ ಶಂಕರಲಿಂಗ ದೇವಸ್ಥಾನದ ನಿರ್ವಣಕ್ಕೆ ನೀಡಿದ 5 ಲಕ್ಷ ರೂ. ವೆಚ್ಚದ ಕಾಮಗಾರಿ ಮತ್ತು ಎಚ್.ಎಸ್. ವೆಂಕಟಾಪುರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೀಡಿದ 5 ಲಕ್ಷ ರೂ. ವೆಚ್ಚದ ದುರ್ಗಾದೇವಿ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts