More

    ಮೂರೇ ದಿನದಲ್ಲಿ 5000 ತಿರಂಗಾ ರೆಡಿ !

    ರಾಜಕುಮಾರ ಹೊನ್ನಾಡೆ ಹುಲಸೂರು
    ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ 5000 ಧ್ವಜ ತಯಾರಿಸುವ ಕೆಲಸವನ್ನು ಗೋಟರ್ಾ(ಬಿ) ಗ್ರಾಮದ ವೈಭವಿ ಸಂಜೀವಿನಿ ಒಕ್ಕೂಟ ಸದಸ್ಯರು ಕೇವಲ ಮೂರು ದಿನಗಳಲ್ಲಿ ಪೂರ್ಣಗೊಳಿಸಿ ಸಾಧನೆ ಮೆರೆದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೃ ಅಮೃತೋತ್ಸವ ನಿಮಿತ್ತ ದೇಶದ ಪ್ರತಿ ಮನೆ ಮೇಲೆ 13ರಿಂದ 15ರವರೆಗೆ ತ್ರಿವರ್ಣ ಧ್ವಜ ಹಾರಿಸಿ ಗೌರವ ಸಲ್ಲಿಸಬೇಕು ಎಂಬ ಸಂದೇಶ ನೀಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ಧ್ವಜ ವಿತರಿಸಲು ಜಿಪಂ ವತಿಯಿಂದ ಸಂಜೀವಿನಿ ಎನ್ಆರ್ಎಲ್ಎಂ ಅಡಿ ತಿರಂಗಾ ಸಿದ್ಧಪಡಿಸುವ ಕಾರ್ಯವನ್ನು ವೈಭವಿ ಸಂಜೀವಿನಿ ಒಕ್ಕೂಟಕ್ಕೆ ವಹಿಸಿದೆ. ಇದನ್ನು ಸವಾಲಾಗಿ ಸ್ವೀಕರಿಸಿದ ಒಕ್ಕೂಟದ ಸದಸ್ಯರು ಮೂರೇ ದಿನಗಳಲ್ಲಿ ಧ್ವಜಗಳನ್ನು ತಯಾರಿಸಿದ್ದಾರೆ.

    ತ್ರಿವರ್ಣ ಧ್ವಜ ಹೊಲಿಯುವುದರ ಬಗ್ಗೆ ಬೀದರ್ನ ಸಹಾರ್ದ ಕೇಂದ್ರದಲ್ಲಿ ಒಂದು ದಿನ ತರಬೇತಿ ಪಡೆದಿದ್ದಾರೆ. ಜಿಪಂನಿಂದ 2ರಂದು ರಾತ್ರಿ ಧ್ವಜದ ಬಟ್ಟೆ ಗ್ರಾಮಕ್ಕೆ ತಲುಪಿದ್ದು, ಮರುದಿನ ಧ್ವಜ ಸಿದ್ಧಪಡಿಸಲು ಕುಳಿತ 20 ಜನರ ತಂಡ 5ರವರೆಗೆ 5,000 ಧ್ವಜಗಳನ್ನು ಸಿದ್ಧಪಡಿಸಿ ತಾಲೂಕು ಪಂಚಾಯಿತಿಗೆ ನೀಡಿದ್ದಾರೆ. ಅದರಂತೆ ವಿವಿಧ ಗ್ರಾಪಂಗಳಿಗೆ ಈಗಾಗಲೇ ಧ್ವಜಗಳನ್ನು ವಿತರಿಸಲಾಗಿದೆ.

    ರಾಷ್ಟ್ರ ಧ್ವಜ ಸಿದ್ಧಪಡಿಸುವ ಕೆಲಸ ನೀಡಿರುವುದು ಖುಷಿ ತಂದುಕೊಟ್ಟಿದೆ ಎಂದ ಒಕ್ಕೂಟದ ಸದಸ್ಯರು, ಸಕರ್ಾರ ನಮಗೆ ಇಂಥ ಕೆಲಸ ನೀಡುವ ಜತೆಗೆ ಸಂಘಗಳ ಏಳಿಗೆಗೆ ಪ್ರೋತ್ಸಾಹಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

    ದುಡಿಯುವ ಕೈಗಳಿಗೆ ಕೆಲಸ ಕೊಡಿ: ಜಿಲ್ಲಾದ್ಯಂತ ಸಾವಿರಾರು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸಕರ್ಾರ ಅಂಥವರನ್ನು ಗುರುತಿಸಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗುಡಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಒತ್ತು ನೀಡಿ ಮಹಿಳೆಯರಿಗೆ ಕೆಲಸ ದೊರಕಿಸಿಕೊಡಬೇಕು. ಮಹಿಳೆಯರಿಗೆ ಮೀಸಲಾತಿ ನೀಡಿದರೆ ಸಾಲದು. ದುಡಿಯುವ ಕೈಗಳಿಗೆ ಯೋಗ್ಯ ಕೆಲಸ ನೀಡಿ ಆಥರ್ಿಕವಾಗಿ ಸಬಲರಾಗಲು ಅವಕಾಶ ನೀಡುವಂತೆ ಸಂಘದ ಸದಸ್ಯರಾದ ರೇಖಾ ಕುಲಕಣರ್ಿ, ಪ್ರತಿಭಾ ಜೋಶಿ, ಸವಿತಾ ಮಮ್ಮಾ, ಅಕ್ಕಮಹಾದೇವಿ ಬಿರಾದಾರ, ಪಾರ್ವತಿ ನುರಂದೆ, ಈಶ್ವರಿ ಕಣಜೆ, ಗೀತಾ ಜೋಶಿ, ಅನಿತಾ ಪಟ್ನೆ, ಶ್ರೀದೇವಿ ಕರಕಲ್ಲೆ, ಕವಿತಾ ಮೈನಳೆ, ಲಲಿತಾ, ಗೋದಾವರಿ ಮೇತ್ರೆ, ಸಾವಿತ್ರಿ ಕಣಜೆ, ಗಂಗಮ್ಮ, ರೇಣುಕಾ ಬಿರಾದಾರ ಮನವಿ ಮಾಡಿದ್ದಾರೆ.

    ತಾಲೂಕು ಆಡಳಿತ ನಮ್ಮನ್ನು ಗುರುತಿಸಿ ತ್ರಿವರ್ಣ ಧ್ವಜ ಸಿದ್ಧಪಡಿಸುವ ಕೆಲಸ ನೀಡಿದೆ. ಕೊಟ್ಟ ಅವಧಿಗಿಂತ ಮೊದಲೇ ಸಾವಿರಾರು ಧ್ವಜಗಳನ್ನು ತಯಾರಿಸಿ ಕೊಟ್ಟಿದ್ದೇವೆ. ಗ್ರಾಮೀಣ ಮಹಿಳೆಯರಿಗೆ ಇಂಥ ವಿಶೇಷ ಕೆಲಸ ನೀಡಿದರೆ ಆಥರ್ಿಕ ಮಟ್ಟವೂ ಸುಧಾರಿಸುತ್ತದೆ.
    | ಪ್ರತಿಭಾ ಜೋಶಿ, ವೈಭವಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೋಟರ್ಾ (ಬಿ)

    ಗೋಟರ್ಾ(ಬಿ)ದ ವೈಭವಿ ಸಂಜೀವಿನಿ ಒಕ್ಕೂಟದ ಸದಸ್ಯರು ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಮುಂದೆಯೂ ಸಕರ್ಾರದಿಂದ ಎಲ್ಲ ಸೌಲಭ್ಯ ಒದಗಿಸಲಾಗುವುದು. ಸ್ವಸಹಾಯ ಸಂಘಗಳಿಗಾಗಿ ನರೇಗಾದಡಿ 18 ಲಕ್ಷ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ಮಾದರಿಯಲ್ಲಿ ಶೆಡ್ ನಿಮರ್ಿಸಿಕೊಡಲಾಗುವುದು.
    | ಮಹಾದೇವ ಬಾಬಳಗಿ, ಹುಲಸೂರು ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts