More

    ಮೂರೇ ತಿಂಗಳಲ್ಲಿ ಕಿತ್ತು ಬಂದ ಡಾಂಬರ್: ಮಾವಿನಸರದಲ್ಲಿ ಕಾಂಗ್ರೆಸ್ ಪ್ರತಿಭಟನೆ

    ರಿಪ್ಪನ್‌ಪೇಟೆ: ಗವಟೂರು-ಪೂಜಾರದಿಂಬ ಸಂಪರ್ಕದ ಪಿಎಂಜಿಎಸ್‌ವೈ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಮೂರೇ ತಿಂಗಳಲ್ಲಿ ಕಿತ್ತು ಹೋಗಿದೆ ಎಂದು ಶನಿವಾರ ಮಾವಿನಸರದ ರಸ್ತೆಯಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಬೇಳೂರು ಗೋಪಾಲಕೃಷ್ಣ ಮಾತನಾಡಿ, 5 ಕಿಲೋಮೀಟರ್ ಉದ್ದ ರಸ್ತೆಗೆ ಇಲ್ಲಿನ ಗ್ರಾಮಸ್ಥರ ಹೋರಾಟದ ಫಲವಾಗಿ ಪಿಎಂಜಿಎಸ್‌ವೈ ಯೋಜನೆಯಡಿ 4.41 ಕೋಟಿ ಹಣ ಮಂಜೂರಾಗಿತ್ತು. ಕಾಮಗಾರಿಯೂ ಮುಗಿದಿದೆ, ಆದರೆ ಕಾಮಗಾರಿ ಮುಗಿದ ಮೂರೇ ತಿಂಗಳಲ್ಲಿ ರಸ್ತೆ ಶಿಥಿಲಗೊಂಡಿದ್ದು ಕಿತ್ತು ಬರುತ್ತಿದೆ. ಸಂಪೂರ್ಣ ಕಾಮಗಾರಿ ಕಳಪೆಯಾಗಿರುವುದರಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಯೋಜನೆಯಲ್ಲಿ 4 ಕೋಟಿ ರೂ. ಗುಳುಂ ಮಾಡಿರುವ ಸರ್ಕಾರ ಶೇ.80 ಭ್ರಷ್ಟಾಚಾರ ಎಸಗಿದೆ. ಬಾಳೆಹಣ್ಣನ್ನು ಎಂಎಲ್‌ಎ ಮತ್ತು ಎಂಪಿಗಳು ತಿಂದು ಸಿಪ್ಪೆ ಮಾತ್ರ ಗುತ್ತಿಗೆದಾರನಿಗೆ ನೀಡಿದ್ದಾರೆಂದು ವ್ಯಂಗ್ಯವಾಡಿದರು.
    ಕಿತ್ತುಹೋದ ಡಾಂಬರ್ ರಸ್ತೆಗೆ ಸಿಮೆಂಟ್‌ನಿಂದ ಪ್ಯಾಚ್ ಮಾಡುತ್ತಿದ್ದು ನಾಗೀಕರ ಕಣ್ಣುಕಟ್ಟುವ ಕೆಲಸ ನಿರ್ವಹಿಸುತ್ತಿದ್ದಾರೆ. ಯೋಜನೆಗೆ ವ್ಯಯಿಸಿರುವುದು ಯಾರಪ್ಪನಮನೆಯ ದುಡ್ಡೂ ಅಲ್ಲ. ಜನರ ತೆರಿಗೆಯ ಹಣ. ಇದನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಡುವುದಿಲ್ಲ. ಪೂರ್ಣ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ಗುಣಮಟ್ಟ ನಿಯಂತ್ರಣ ಇಲಾಖೆ ಪರೀಕ್ಷಕರಿಂದ ಹಿಡಿದು ಗುತ್ತಿಗೆದಾರನವರೆಗೆ ಅಮಾನತುಗೊಳಿಸಿ ರಸ್ತೆಯನ್ನು ಸಂಪೂರ್ಣ ಮರು ನಿರ್ಮಾಣಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಸಾರ್ವಜನಿಕರೊಂದಿಗೆ ರಸ್ತೆತಡೆ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts