More

    ಮೂಢನಂಬಿಕೆಗಳಿಗೆ ಬಲಿಯಾಗಬೇಡಿ



    ರಟ್ಟಿಹಳ್ಳಿ: ಇಂದಿನ ದಿನಮಾನಗಳಲ್ಲಿ ಬಹುತೇಕ ಜನರು ಮೂಢನಂಬಿಕೆಗಳಿಗೆ ಒಳಗಾಗಿ ಅಪಾರ ಹಣ ವ್ಯಯಿಸುತ್ತ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಮೂಢ ನಂಬಿಕೆ, ಮೌಢ್ಯಗಳನ್ನು ನಂಬದೇ ವೈಜ್ಞಾನಿಕ ಸತ್ಯ ಅರಿಯಬೇಕು ಎಂದು ಪವಾಡ ಬಂಜಕ ಮಹೇಶ ಕೆರೂರು ಹೇಳಿದರು.

    ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪವಾಡ ಬಯಲು ಕಾರ್ಯಕ್ರಮದಲ್ಲಿ ವಿವಿಧ ಪವಾಡಗಳ ಸತ್ಯಾಸತ್ಯತೆಯನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಅವರು ಮಾತನಾಡಿದರು. ಪವಾಡ ಬಯಲಿನ ಕುರಿತು ರಾಜ್ಯದಲ್ಲಿ ಜಾಗೃತಿ ಮೂಡಿಸುತ್ತಿರುವ ಹುಲಿಕಲ್ ನಟರಾಜ ಮತ್ತು ನರೇಂದ್ರ ನಾಯ್ಕ ಅವರ ಕಾರ್ಯ ಶ್ಲಾಘನೀಯ. ಅವರ ಮಾರ್ಗದರ್ಶನದಲ್ಲಿ ಶಾಲಾ-ಕಾಲೇಜು, ಎನ್ನೆಸ್ಸೆಸ್ ಶಿಬಿರ, ವಿವಿಧ ಸಂಘಟನೆಗಳು ಏರ್ಪಡಿಸುವ ಸಭಾ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಈ ಕುರಿತ ಮಾಹಿತಿಗಾಗಿ 97317 07800 ಸಂಪರ್ಕಿಸಬಹುದು ಎಂದರು.

    ಪ್ರಾಚಾರ್ಯ ಗುಡ್ಡಚಾರಿ ಕಮ್ಮಾರ ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆಗಳಿಂದ ದೂರವಿದ್ದು, ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

    ಉಪನ್ಯಾಸಕರಾದ ಜಿ.ರಾಮಚಂದ್ರಪ್ಪ, ಎಂ.ಎಚ್. ಬಣಕಾರ, ಬಿ.ಕೆ. ವಿಜಯಲಕ್ಷ್ಮೀ, ಕೆ.ಎ. ಕಬೀರ, ಎಸ್.ಐ. ಈದರಮನಿ, ಕವಿತಾ ಪಾಟೀಲ, ಇತರರಿದ್ದರು.

    ವಿವಿಧ ಪವಾಡ ಬಯಲು

    ನೀರಿನಿಂದ ದೀಪ ಉರಿಸುವುದು, ಉರಿಯುವ ಕರ್ಪರ ನುಂಗುವುದು, ಅಗ್ನಿಕುಂಡ ಹಾಯುವುದು, ದಾರ ಕತ್ತರಿಸಿ ಜೋಡಿಸುವುದು, ಲಿಂಗು ಉದ್ಭವ, ಅಕ್ಕಿ ತುಂಬಿದ ಚಂಬು ಎತ್ತುವುದು, ಭಾನುಮತಿಯ ಒಳಗಾಗುವಿಕೆಯ ಸಂಚು, ತೆಂಗಿನ ಕಾಯಿಯಿಂದ ಜಲ ನೋಡುವುದು, ಖಾಲಿ ಗಾಜಿನ ಬಾಟಲಿನಲ್ಲಿ ದೆವ್ವವನ್ನು ಬಂಧಿಸುವುದು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts