More

    ಮುಷ್ಕರಕ್ಕೆ ಜಿಲ್ಲೆಯಲ್ಲಿ ಸಿಗದ ಬೆಂಬಲ

    ಕಾರವಾರ: ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ ದೇಶಾದ್ಯಂತ ಕರೆ ನೀಡಿದ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಬುಧವಾರ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ಆದರೆ, ರಾಷ್ಟ್ರೀಕೃತ ಬ್ಯಾಂಕ್​ಗಳು, ಬಿಎಸ್​ಎನ್​ಎಲ್, ಎಲ್​ಐಸಿ ಕಚೇರಿಗಳಲ್ಲಿ ವ್ಯವಹಾರ ಸ್ಥಗಿತವಾಗಿತ್ತು. ಕೆಲವೆಡೆ ಅಂಗನವಾಡಿಗಳು ಮುಚ್ಚಿದ್ದವು. ಆದರೆ, ಬಸ್, ಆಟೋ, ಟೆಂಪೊಗಳ ಸಂಚಾರ ಎಂದಿನಂತೆ ಇದ್ದವು. ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಚೇರಿ, ಶಾಲೆ, ಕಾಲೇಜ್​ಗಳ ಕಾರ್ಯನಿರ್ವಹಣೆಗೆ ಯಾವುದೇ ಧಕ್ಕೆ ಉಂಟಾಗಲಿಲ್ಲ. ಸಿಐಟಿಯು ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ಪ್ರತಿಭಟನಾ ರ್ಯಾಲಿಗಳನ್ನು ನಡೆಸಲಾಯಿತು. ಕಾರವಾರದ ಮಾಲಾದೇವಿ ಮೈದಾನದಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಮ್ಮ ಬೇಡಿಕೆಗಳ ಪತ್ರವನ್ನು ಕಾರ್ವಿುಕರು ಅಪರ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು. ಅದಕ್ಕೂ ಪೂರ್ವದಲ್ಲಿ ಕಾರ್ಪೆರೇಶನ್ ಬ್ಯಾಂಕ್ ಎದುರು ನೌಕರರು ಮತ ಪ್ರದರ್ಶನ ನಡೆಸಿದರು.

    21 ಸಾವಿರ ರೂ. ಕನಿಷ್ಠ ವೇತನ ನಿಗದಿಪಡಿಸಿ
    ಕುಮಟಾ:
    ಜೆಸಿಟಿಯು ಹಾಗೂ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ವಿುಕ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ಮಣಕಿ ಮೈದಾನದಿಂದ ತಹಸೀಲ್ದಾರ್ ಕಚೇರಿವರೆಗೆ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

    ಕಾರ್ವಿುಕರಿಗೆ 21 ಸಾವಿರ ರೂ. ಕನಿಷ್ಠ ವೇತನ, ಕನಿಷ್ಟ 10 ಸಾವಿರ ರೂ. ಪಿಂಚಣಿ, ಉದ್ಯೋಗ ಸೃಷ್ಟಿ, ಅಸಂಘಟಿತ ಕಾರ್ವಿುಕರಿಗೆ ಶಾಸನಬದ್ಧ ಭವಿಷ್ಯನಿಧಿ ಮತ್ತು ಪಿಂಚಣಿ, ಗುತ್ತಿಗೆ ಪದ್ಧತಿ ನಿಯಂತ್ರಣ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಲವರ್ಧನೆ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಸಿಐಟಿಯು ತಾಲೂಕು ಅಧ್ಯಕ್ಷೆ ಸವಿತಾ ತನ್ಮಡಗಿ, ಸಿ.ಆರ್. ನಾಯ್ಕ, ಗೀತಾ ಉಪ್ಪಾರ, ಭಾರತಿ ನಾಯ್ಕ, ಗಂಗಾ ನಾಯ್ಕ, ಪಾರ್ವತಿ, ಶೋಭಾ, ಸಂಗೀತಾ, ಭಾಗೀರಥಿ ಇತರರು ಇದ್ದರು.

    ವಿವಿಧ ಬೇಡಿಕೆ ಈಡೇರಿಸಲು ಮನವಿ
    ಮುಂಡಗೋಡ:
    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿ ಉಪ ತಹಸೀಲ್ದಾರ್ ವಿಜಯ ಶೆಟ್ಟೆಪ್ಪನವರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಬುಧವಾರ ಮನವಿ ಸಲ್ಲಿಸಿದರು.

    ನಿತ್ಯಾನಂದ ಸ್ವಾಮಿ, ಚಿದಾನಂದ ಹರಿಜನ, ಭೀಮಣ್ಣ ಭೋವಿ, ಧರ್ವವತಿ ಗೌಡರ, ಗೋಪಾಲ ನಾಯ್ಕ, ಮಮತಾ ಹಳೇಬಂಕಾಪುರ, ವಾಣಿ ತೆವರ, ಬಸವರಾಜ ಧಾರವಾಡ, ಮಾರ್ಟಿನ್ ಬಳ್ಳಾರಿ, ಮಂಜುನಾಥ ಕುರ್ತಕೋಟಿ, ಜೈತುನ್ನಬಿ ಜಿಗಳೂರ, ಖೇಮಣ್ಣ ಲಮಾಣಿ, ಈರಪ್ಪ ಕಲಬಾರ, ಶಂಕ್ರಪ್ಪ ಭೋವಿವಡ್ಡರ, ಗದಿಗಯ್ಯಾ ಹಿರೇಮಠ, ಸುಂಕಪ್ಪ ಜೇಕಿನಕಟ್ಟಿ ಇತರರಿದ್ದರು.

    ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ: ಮುಂಡಗೋಡ ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು. ಸಾರಿಗೆ ಸಂಚಾರ, ಬ್ಯಾಂಕ್​ಗಳು, ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಿದವು.

    ರಾಜ್ಯಪಾಲರಿಗೆ ಮನವಿ ಪತ್ರ ರವಾನೆ
    ಭಟ್ಕಳ:
    ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಭಟ್ಕಳ ಸಮಿತಿ, ತಾಲೂಕಿನ ಸಿಐಟಿಯು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪತಹಸೀಲ್ದಾರ್ ಭಾಸ್ಕರ ಭಟ್ ಮೂಲಕ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಿದರು. ಸಿಐಟಿಯು ಸಂಚಾಲಕ ಪುಂಡಲೀಕ ನಾಯ್ಕ, ಜಯಲಕ್ಷ್ಮೀ ನಾಯ್ಕ, ಗೀತಾ ನಾಯ್ಕ, ಗಜೇಂದ್ರ ಶಿರಾಲಿ, ಕೋಮಲ ದೇವಾಡಿಗ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹ ನೌಕರರ ಸಂಘಗಳ ಪ್ರಮುಖರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts