More

    ಮುಳುಗಡೆ ಸಂತ್ರಸ್ತ ಗ್ರಾಮಗಳಿಗೆ ಉನ್ನತ ಸಂಪರ್ಕ

    ಹೊಸನಗರ: ಹಿನ್ನೀರಿನಿಂದ ಸಂಪರ್ಕ ವಂಚಿತಗೊಂಡ ಸಾಗರ- ಹೊಸನಗರ ತಾಲೂಕಿನಲ್ಲಿ ಉನ್ನತ ಸಂಪರ್ಕ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಗೃಹ ಸಚಿವ ಆರಗ e್ಞÁನೇಂದ್ರ ಹೇಳಿದರು.
    ತಾಲೂಕಿನ ಅರಮನೆಕೊಪ್ಪ ಮತ್ತು ರಾಮಚಂದ್ರಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಿಲ್ಸಾಗರ ಸಮೀಪದ ಶರಾವತಿ ಹಿನ್ನೀರಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆಗೆ ಗುದ್ದಲಿಪೂಜೆ ನೆರವೇರಿಸಿದರು.
    ಈಗಾಗಲೇ ಸಿಗಂದೂರು ಸಮೀಪದ ಹೊಳೆಬಾಗಿಲು ಶರಾವತಿ ಹಿನ್ನೀರಿನಲ್ಲಿ 700 ಕೋಟಿ ರೂ. ವೆಚ್ಚದ ಸೇತುವೆ ಹಾಗೂ ಹಸಿರುಮಕ್ಕಿಯಲ್ಲಿ 112 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದೀಗ ಬಹಳ ವರ್ಷದ ಬೇಡಿಕೆಯಾದ ಬಿಲ್ಸಾಗರ ಸೇತುವೆ ಕಾಮಗಾರಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಹಿನ್ನೀರು ಇಳಿದಿರುವ ಕಾರಣ ಕಾಮಗಾರಿಗೆ ಕೂಡಲೆ ಚುರುಕು ಮುಟ್ಟಿಸಲು ಸೂಚಿಸಲಾಗಿದೆ ಎಂದರು.
    ಕಾಲುಸಂಕ ನಿರ್ಮಾಣಕ್ಕಾಗಿ 100 ಕೋಟಿ ರೂ. ವ್ಯಯಿಸಲಾಗಿದೆ. ಶರಾವತಿ ಸೇರಿದಂತೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೇನೆ ಎಂದರು.
    ಗೃಹ ಸಚಿವರ ವಿಶೇಷ ಒತ್ತು: ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಬಿಲ್ಸಾಗರ ಸೇತುವೆ ನಿರ್ಮಾಣಕ್ಕೆ ಆರಗ e್ಞÁನೇಂದ್ರ ವಿಶೇಷ ಒತ್ತು ನೀಡಿದ ಕಾರಣ ಸರ್ಕಾರ ಹಣ ಬಿಡುಗಡೆ ಮಾಡಿದೆ. ಇದು ತಾಲೂಕು ಕೇಂದ್ರ ಹೊಸನಗರಕ್ಕೆ ಅರಮನೆಕೊಪ್ಪ, ಹೊಸೂರು ಗ್ರಾಪಂ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿದೆ. ಮಲೆನಾಡು ಮತ್ತು ಸಂತ್ರಸ್ತ ಗ್ರಾಮಗಳ ಅಭಿವೃದ್ಧಿಗೆ ಅರಣ್ಯ ಕಾನೂನು ತೊಡಕಾಗಿದೆ. ಪರಿಸರ ಸಂರಕ್ಷಣೆ ಜತೆ ಅಭಿವೃದ್ಧಿ ನಡೆಸುವ ಸವಾಲು ಇದೆ ಎಂದರು. ಅರಮನೆ ಕೊಪ್ಪ ಗ್ರಾಪಂ ಅಧ್ಯಕ್ಷೆ ಭಾನುಮತಿ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಕುಂದಗಲï ರಾಜಶೇಖರ್, ರಾಮಚಂದ್ರಾಪುರ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಕಣಿವೆಬಾಗಿಲು ಸುಬ್ರಹ್ಮಣ್ಯ, ಜಿಪಂ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಮ್ಯಾಮ್ಕೋಸ್ ಸದಸ್ಯ ಕೆ.ವಿ.ಕೃಷ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts