More

    ಮುರ್ಡೆಶ್ವರಕ್ಕೆ ಪಾದಯಾತ್ರೆ 21ರಂದು

    ಭಟ್ಕಳ: ಶಿವರಾತ್ರಿ ನಿಮಿತ್ತ ಫೆ. 21ರಂದು ಲೋಕಕಲ್ಯಾಣಾರ್ಥವಾಗಿ ಪಟ್ಟಣದಿಂದ ಮುರ್ಡೆಶ್ವರದ ಶಿವನ ಸನ್ನಿಧಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಸಮಸ್ತ ಹಿಂದು ಸಮಾಜದವರು ಪಾಲ್ಗೊಳ್ಳಬೇಕು ಎಂದು ಮುಂಡಳ್ಳಿ ಗ್ರಾಪಂ ಸದಸ್ಯೆ ಶಿವಾನಿ ಶಾಂತಾರಾಮ ಹೇಳಿದರು.

    ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಂಜನ್ ಇಂಡೇನ್ ಏಜೆನ್ಸಿ ಹಾಗೂ ಸಾಲಗದ್ದೆ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಈ ಬಾರಿ 10ನೇ ವರ್ಷದ ಶಿವರಾತ್ರಿ ಪಾದಯಾತ್ರೆ ನಡೆಯಲಿದೆ. ಅಂದು ನಸುಕಿನ ಜಾವ 4 ಗಂಟೆಗೆ ಇಲ್ಲಿನ ಚೋಳೇಶ್ವರ ದೇವಸ್ಥಾನದಿಂದ ಹೊರಟು ಮಾರಿಕಟ್ಟೆ, ಹಳೇ ಬಸ್ ನಿಲ್ದಾಣ, ರಂಗೀಕಟ್ಟೆ ಮೂಲಕ ಮುಖ್ಯರಸ್ತೆಯಲ್ಲಿ ಸಂಚರಿಸಿ ಶಿರಾಲಿ ಮೂಲಕ ಮುರ್ಡೆಶ್ವರ ದೇವಸ್ಥಾನಕ್ಕೆ ತೆರಳುವುದು. 10 ಜನರಿಂದ ಆರಂಭವಾದ ಪಾದಯಾತ್ರೆಯಲ್ಲಿ ಕಳೆದ ಬಾರಿ ಸಾವಿರ ಯಾತ್ರಾರ್ಥಿಗಳು ಸೇರಿದ್ದರು. ಈ ವರ್ಷ ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇನ್ನು ಸಾಲಗದ್ದೆ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಆನಂದ ಬಾಳಗಿ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯಕ್ಕಾಗಿ ಈ ವರ್ಷ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಪಾದಯಾತ್ರೆಗೆ ಬರುವ ಭಕ್ತಾದಿಗಳಿಗೆ ದಾರಿ ಮಧ್ಯೆ ಹಣ್ಣು, ಲಘು ಉಪಾಹಾರ, ಮುರ್ಡೆಶ್ವರ ದೇವಸ್ಥಾನದ ವತಿಯಿಂದ ಬೆಳಗ್ಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು. ಶಾಂತಾರಾಮ ಭಟ್ಕಳ, ಕುಮಾರ ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts