More

    ಮುದ್ದೇಬಿಹಾಳ ತಾಲೂಕಿನಾದ್ಯಂತ 14 ರಿಂದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಸಂಚಾರ

    ಮುದ್ದೇಬಿಹಾಳ: ಫೆ.14 ರಿಂದ 19 ರವರೆಗೆ ತಾಲೂಕಿನಾದ್ಯಂತ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಸಂಚರಿಸಲಿದೆ. ಯುವಜನತೆಗೆ ಸಂವಿಧಾನದ ಆಶಯದ ತಿಳಿವಳಿಕೆ ಮೂಡಿಸುವ ಈ ಜಾಥಾ ಅರ್ಥಪೂರ್ಣವಾಗಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಬಸವರಾಜ ನಾಗರಾಳ ಹೇಳಿದರು.

    ಜಾಥಾ ಹಿನ್ನೆಲೆ ತಾಲೂಕು ಆಡಳಿತ ಸೌಧದಲ್ಲಿರುವ ತಹಸೀಲ್ದಾರ್ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಾಥಾ ಯಶಸ್ವಿಗೊಳಿಸುವ ಕುರಿತು ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಲಾಗಿದೆ. ಜಾಥಾದಲ್ಲಿ ಪ್ರತಿಯೊಬ್ಬ ಅಧಿಕಾರಿ ಭಾಗವಹಿಸುವಿಕೆ ಕಡ್ಡಾಯವಾಗಿದೆ. ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಾರಸು ಮಾಡಲಾಗುತ್ತದೆ. ಜಾಥಾಕ್ಕೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲು ತೀರ್ಮಾನಿಸಲಾಗಿದೆ. ಜಾಥಾ ಸಂಚರಿಸುವ ಗ್ರಾಮಗಳಲ್ಲಿ ಮುಂಚಿತವಾಗಿಯೇ ಪ್ರಚಾರ ಮಾಡಿ ಜನರನ್ನು ಜಾಗೃತರನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮದೇ ಕಾರ್ಯಕ್ರಮವೆಂದು ತಾವೇ ಜವಾಬ್ದಾರಿ ವಹಿಸಿಕೊಂಡು ರಂಗೋಲಿ ಹಾಕಿ, ತಳಿರು ತೋರಣಗಳಿಂದ ಅಲಂಕರಿಸಲು ಮುಂದೆ ಬರಬೇಕು ಎಂದರು.

    ದಲಿತ ಸಂಘಟನೆಗಳ ಮುಖಂಡರಾದ ಬಸವರಾಜ ಪೂಜಾರಿ, ಹರೀಶ ನಾಟೀಕಾರ, ಪುಂಡಲೀಕ ಮುರಾಳ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಚ್.ಹಾಲಣ್ಣವರ, ಕೆ.ಬಿ.ದೊಡಮನಿ, ತಿಪ್ಪಣ್ಣ ದೊಡಮನಿ, ದೇವರಾಜ ಹಂಗರಗಿ ಇತರರು ಮಾತನಾಡಿದರು.

    ಜಾಥಾದಲ್ಲಿ ಎಲ್ಲಾ ಶಾಲೆ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು. ಸಂವಿಧಾನದ ಕುರಿತು ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಬೇಕು. ಮುದ್ದೇಬಿಹಾಳ, ನಾಲತವಾಡ ಪಟ್ಟಣಗಳಲ್ಲಿ ಜಾಥಾ ಸಂಚರಿಸುವಾಗ ಖುದ್ದು ಸಿಪಿಐ ಮುಂದಾಳತ್ವ ವಹಿಸಿ ಬಂದೋಬಸ್ತ್ತ್ ಒದಗಿಸಬೇಕು. ಪೂರ್ವಭಾವಿ ಸಭೆಗೆ ಹಿಂದುಳಿದ, ಮೇಲ್ವರ್ಗಗಳ ಸಮಾಜ ಮುಖಂಡರು ಸೇರಿ ಇತರ ಸಮಾಜ- ಸಂಘಟನೆಗಳ ಅಧ್ಯಕ್ಷರಿಗೆ ಆಹ್ವಾನಿಸಬೇಕಿತ್ತು. ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದ್ದು ದಲಿತರಿಗೆ ಸಂವಿಧಾನ ಎನ್ನುವ ಸೀಮಿತ ವಿಚಾರ ಹರಿಬಿಡಬಾರದು. ಅಧಿಕಾರಿಗಳು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರೆ ಚೆನ್ನಾಗಿತ್ತು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹೇಳಿದರು.

    ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಮಾತನಾಡಿದರು. ಡಿ.ಬಿ.ಮುದೂರ, ಎಸ್.ಬಿ.ಚಲವಾದಿ, ಗುರು ತಾರನಾಳ, ಸಿ.ಜಿ.ವಿಜಯಕರ, ಶ್ರೀಕಾಂತ ಚಲವಾದಿ, ಸಿದ್ದಣ್ಣ ಕಟ್ಟಿಮನಿ, ಮಲ್ಲು ತಳವಾರ, ಪ್ರಕಾಶ ಚಲವಾದಿ, ಶಿವು ಶಿವಪುರ, ಈರಣ್ಣ ತಾರನಾಳ, ಸಂಗಣ್ಣ ಮೇಲಿನಮನಿ, ಪರಶುರಾಮ ನಾಲತವಾಡ, ರಾಮು ದಳವಾಯಿ, ಸಿದ್ದು ತಳ್ಳೊಳ್ಳಿ, ಗದ್ದೆಪ್ಪ ಹುಲ್ಲಳ್ಳಿ ಇತರರಿದ್ದರು.

    ಜಾಥಾ ಸಂಚರಿಸುವ ಮಾರ್ಗ
    ಫೆ.14 ರಂದು ರೂಢಗಿ ಪ್ರವೇಶಿಸಿ ಬಸರಕೋಡ ಮಾರ್ಗವಾಗಿ ಢವಳಗಿಗೆ ಬಂದು ವಾಸ್ತವ್ಯ. ಫೆ.15 ರಂದು ಮಡಿಕೇಶ್ವರ, ಇಂಗಳಗೇರಿ, ಕುಂಟೋಜಿ ಮಾರ್ಗವಾಗಿ ಮುದ್ದೇಬಿಹಾಳಕ್ಕೆ ಆಗಮಿಸಿ ವಾಸ್ತವ್ಯ. ಫೆ.16 ರಂದು ಬಿದರಕುಂದಿ, ಕವಡಿಮಟ್ಟಿ, ಹಿರೇಮುರಾಳ, ಅಡವಿಸೋಮನಾಳ, ನಾಗರಬೆಟ್ಟ ಮಾರ್ಗವಾಗಿ ನಾಲತವಾಡಕ್ಕೆ ಬಂದು ವಾಸ್ತವ್ಯ. ಫೆ.17 ರಂದು ನಾಗಬೇನಾಳ, ಬಿಜ್ಜೂರ, ರಕ್ಕಸಗಿ, ಆಲೂರ ಮಾರ್ಗವಾಗಿ ತಂಗಡಗಿಗೆ ಬಂದು ವಾಸ್ತವ್ಯ. ಫೆ.18 ರಂದು ಕೋಳೂರ, ಹಡಲಗೇರಿ ಮಾರ್ಗವಾಗಿ ಯರಝರಿಗೆ ಬಂದು ವಾಸ್ತವ್ಯ. ಫೆ.19 ರಂದು ಕಾಳಗಿ ಮಾರ್ಗವಾಗಿ ಹುಲ್ಲೂರಗೆ ಬಂದು ವಾಸ್ತವ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts