More

    ಮುಟ್ಟಿನ ಬಗ್ಗೆ ಸಂಕುಚಿತ ಭಾವನೆ ಬೇಡ


    ಯಾದಗಿರಿ: ಮುಟ್ಟು ಮಹಿಳೆಯರ ನೈಸಗರ್ಿಕ ಪ್ರಕ್ರಿಯೆ, ಇದು ನಮಗೆ ದೇವರು ಕೊಟ್ಟ ವರ ಹೊರತು, ಶಾಪವಲ್ಲ ಎಂದು ಜಿಪಂ ಸಿಇಒ ಗರೀಮಾ ಪನ್ವಾರ ಅಭಿಪ್ರಾಯಪಟ್ಟರು.

    ಸೋಮವಾರ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾ ಪಂಚಾಯಿತಿ, ಸಹಾಸ್ ಸಂಸ್ಥೆ ಹಾಗೂ ರೈನ್ ಮ್ಯಾಟರ್ ಪೌಂಡೇಷನ್ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗ್ರಾಪಂನ ಸ್ವಚ್ಛ ವಾಹಿನಿಯ ಸಿಬ್ಬಂದಿಗೆ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಇನ್ನು ಕೂಡಾ ಮುಟ್ಟಿನ ನಿರ್ವಹಣೆಯ ವಿಷಯದಲ್ಲಿ ಸಂಕುಚಿತ ಭಾವನೆ ಇದೆ. ಅಲ್ಲದೆ, ಮೂಡನಂಬಿಕೆಯ ಆಚರಣೆಗಳಿದ್ದು, ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರನ್ನು ಪೂಜೆ-ಪುನಸ್ಕಾರದಿಂದ ದೂರು ಇರಬೇಕು, ಅಡುಗೆ ಮನೆ ಪ್ರೇಶವಿಲ್ಲ, ಉಪ್ಪಿನಕಾಯಿ ಮುಟ್ಟಬಾರದು ಎಂಬ ಇತ್ಯಾದಿ ನಂಬಿಕೆಗಳಿಂದ ಮಹಿಳೆಯರನ್ನು ಖಿನ್ನತೆಗೆ ತಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮುಟ್ಟನ್ನು ಶಾಪ ಎನ್ನುವ ಭಾವನೆ ಗ್ರಾಮೀಣ ಪ್ರದೇಶದ ಕೆಲವು ಮಹಿಳೆಯರಲ್ಲಿದೆ. ಈ ಬಗ್ಗೆ ವಿಷಯ ತಜ್ಞರು ನೀಡುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದಕೊಂಡು ನೀವು ಜಾಗೃತರಾಗಿ ಮತ್ತು ನಿಮ್ಮ ಅಕ್ಕ,ಪಕ್ಕದವರಿಗೂ ಈ ಬಗ್ಗೆ ಮಾಹಿತಿ ನೀಡಬೇಕು. ಶುಚಿತ್ವದ ವಿಧನಾಗಳನ್ನು ಋತುಚಕ್ರ ನಿರ್ವಹಣೆಯಲ್ಲಿ ಅಳವಡಿಸಿಕೊಳ್ಳಲು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts