More

    ಮೀನು ಸಾಕಾಣಿಕೆ ಕುರಿತು ತಿಳಿವಳಿಕೆ ನೀಡಿ

    ಯಾದಗಿರಿ: ಮೀನು ಸಾಕಾಣಿಕೆ ಕುರಿತು ಜಿಲ್ಲೆಯ ಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಮಿನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕರಿಗೆ ಸೂಚಿಸಿದರು.

    ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆಯಡಿ, ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಸ್ವೀಕೃತವಾದ ಅರ್ಜಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೀನುಗಾರಿಕೆ ವಿವಿಧ ಮಜಲುಗಳ ಅಭಿವೃದ್ಧಿಗೆ ಗ್ರಾಮ, ಹೋಬಳಿ ಹಾಗೂ ತಾಲೂಕ ಮಟ್ಟದಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಮೀನು ಕೃಷಿಯಲ್ಲಿ ತೊಡಗಲು ಅರಿವು ಮೂಡಿಸಬೇಕು. ಇದರಿಂದ ಸ್ಥಳೀಯವಾಗಿ ಜನರಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯವಾಗುತ್ತದೆ ಎಂದರು.

    ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಮತ್ತು ನಿರ್ವಹಣೆ ಎಂಬ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದು ಮೀನುಗಾರಿಕೆ ವಲಯದ ಮತ್ತು ಮೀನುಗಾರರ ಸಾಮಾಜಿಕ ಮತ್ತು ಆರ್ಥಿಕ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಯು ಪೂರಕವಾಗಿದೆ ಎಂದು ಅವರು ಹೇಳಿದರು.

    ಜಿಲ್ಲೆಯಲ್ಲಿ 76 ಕೆರೆಗಳ 2821 ಹೆಕ್ಟರ್ ಪ್ರದೇಶದ, 2 ನದಿಗಳ 245 ಹೆಕ್ಟರ್ ಪ್ರದೇಶ ಹಾಗೂ ಗ್ರಾಪಂಗಳ 263 ಕೆರೆಗಳ 3,753 ಹೆಕ್ಟರ್ ಪ್ರದೇಶದಲ್ಲಿಮೀನುಗಾರಿಕೆ ಮಾಡಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಕುಲಕರ್ಣಿನೀಡಿದರು.

    ಪ್ರಸಕ್ತ ಸಾಲಿನಲ್ಲಿ 117 ರೈತರು ಮೀನುಗಾರಿಕೆ ಯೋಜನೆಯಡಿ ಆಯ್ಕೆಗೆ ಪರಿಗಣಿಸಿದ್ದು, ಇದಲ್ಲಿ ಯಾದಗಿರಿ 10, ಸುರಪುರ 11 ಹಾಗೂ ಶಹಾಪುರ 96 ಜನರು ಆಯ್ಕೆಗೆ ಪರಿಗಣಿಸಲಾಗಿದೆ ಎಂದು ಮಿನುಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

    ಮಿನು ಕೃಷಿ ತಜ್ಞ ಚಂದ್ರಭಟ್ಟ, ತಾಲೂಕ ಮಿನುಗಾರಿಕೆ ಇಲಾಖೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಉಮೇಶ ಭಾರಿಕರ, ಜಿಲ್ಲಾ , ಮಾರ್ಗದರ್ಶಿ ಬ್ಯಾಂಕ್ ವ್ಯವಸ್ತಾಪಕ ಭೀಮರಾವ ಪಾಂಚಾಳ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಗತಿ ಪರ ಮೀನು ಕೃಷಿಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts