More

    ಮೀನುಗಾರಿಕೆ ಕೃಷಿಯಲ್ಲಿ ವೈವಿಧ್ಯತೆ ಕಾಪಾಡಿಕೊಳ್ಳಿ


    ಯಾದಗಿರಿ: ಪ್ರಸಕ್ತ ದಿನಗಳಲ್ಲಿ ರೈತರು ಸಾಂಪ್ರದಾಯಿಕ ಕೃಷಿ ಪದ್ದತಿ ಹಂತ, ಹಂತವಾಗಿ ಕಡಿಮೆ ಮಾಡಿ ಮೀನುಗಾರಿಕೆಯತ್ತ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಯಪ್ರಕಾಶ ನಾರಾಯಣ ತಿಳಿಸಿದರು.
    ನಗರದ ಎನ್ವಿಎಂ ಸಭಾಂಗಣದಲ್ಲಿ ಮಂಗಳವಾರ ಮೀನು ಸಾಕಾಣಿಕೆದಾರರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿ ಹರಿಯುತ್ತಿರುವ ಕಾರಣ ಒಳನಾಡು ಮೀನುಗಾರಿಕೆ ಸಾಕಾಣಿಕೆಯಲ್ಲಿ ಗಿರಿಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ರೈತರು ಸಹ ತಮ್ಮ ಜಮೀನಿನಲ್ಲಿ ಮೀನುಗಾರಿಕೆ ಕೈಗೊಳ್ಳುವ ಜತೆಗೆ ಹೊಸ ತಳಿಗಳಾದ ಸೀಬಾಸ್ ಹಾಗೂ ತಿಲೋಪಿಯಾ ಬೆಳೆಯಬೇಕು. ಇವು ಕಡಿಮೆ ಸಮಯದಲ್ಲಿ ಆರೋಗ್ಯದಿಂದ ಬೆಳೆಯುತ್ತದೆ, ಮಾರುಕಟ್ಟೆಯಲ್ಲಿ 1 ಕೆಜಿಗೆ 350 ರಿಂದ 600 ರೂ. ಬೆಲೆ ಇದೆ ಎಂದರು.
    ರೈತಾಪಿ ವರ್ಗ ತಮ್ಮ ಕೃಷಿ ಚಟುವಟಕೆ ಜೊತೆಗೆ ತೋಟಗಾರಿಕೆ, ಹೈನುಗಾರಿಕೆಯತ್ತ ಹೆಚ್ಚು ಗಮನ ಹರಿಸಬೇಕು. ವಿಜಯಪುರದ ದ್ರಾಕ್ಷಿ ಇಡೀ ವಿಶ್ವದ ಗಮನ ಸೆಳೆದಿದೆ. ಆದರೆ ನಮ್ಮ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಾರೆ. ಅತಿಯಾದ ಕೀಟನಾಶಕ ಹಾಗೂ ರಸಗೊಬ್ಬರ ಬಳಸುವದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ವಿಜ್ಞಾನಿ ಡಾ.ಕೊಟ್ರೇಶ ಪ್ರಸಾದ, ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಕಾರದ ತಾಂತ್ರೀಕ ಅಕಾರಿ ಅರುಲಾ ರಾಜ್, ಬಿ.ಎ ಪುರಾಣಿಕ್, ಶರಣಗೌಡ ಗೋಸ್ವಾಮಿ ನಾಯ್ಕಲ್, ಅಡಿವೆಪ್ಪ ಜಾಕಾ, ಸಿದ್ಲಿಂಗರೆಡ್ಡಿ ಭೀಮನಹಳ್ಳಿ, ಬಸಣ್ಣಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts