More

    ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ

    ಭಟ್ಕಳ: ಹಳೇ ಬಸ್ ನಿಲ್ದಾಣದಲ್ಲಿರುವ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡದಂತೆ ಮೀನುಗಾರ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ಸಲ್ಲಿಸಿದರು.

    ಹೊಸ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಸ್ಥಳವಾಕಾಶ ಕಡಿಮೆ ಇದೆ. ಅಲ್ಲದೆ, ಈಗ ಸ್ಥಳಾಂತರ ಮಾಡಬೇಕೆಂದಿರುವ ಮಾರುಕಟ್ಟೆ ಜನನಿಬಿಡ ಪ್ರದೇಶದಿಂದ ದೂರವಿದೆ. ಅಲ್ಲಿಗೆ ತಲುಪಲು ಪ್ರತ್ಯೇಕ ರಿಕ್ಷಾದ ಅವಶ್ಯಕತೆ ಇದೆ. ಹೆದ್ದಾರಿ ವಿಸ್ತರಣೆಯಿಂದ ಹೊಸ ಮೀನು ಮಾರುಕಟ್ಟೆಗೆ ಹೋಗಲು ರಸ್ತೆ ದಾಟುವುದು ಸಾರ್ವಜನಿಕರಿಗೆ ಸುಲಭವಲ್ಲ. ಮಹಿಳೆಯರು ಮೀನಿನ ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ಸಾಗಬೇಕಾದರೆ ಅಪಘಾತವಾಗುವ ಸಂಭವ ಹೆಚ್ಚಿದೆ. ಹೊಸ ಮೀನು ಮಾರುಕಟ್ಟೆ ಪಕ್ಕದಲ್ಲಿ ವಾರದ ಸಂತೆ, ಮಿನಿವಿಧಾನ ಸೌಧ, ಇಂದಿರಾ ಕ್ಯಾಂಟೀನ್ ಇರುವುದರಿಂದ ಕಿರಿದಾದ ರಸ್ತೆಯಿಂದ ದಿನಂಪ್ರತಿ ಇಲ್ಲಿ ಟ್ರಾಫಿಕ್ ಸಮಸ್ಯೆ ಆಗಲಿದೆ. ಈಗಿರುವ ಹಳೇ ಮೀನು ಮಾರುಕಟ್ಟೆ ಪ್ರದೇಶ ಎಲ್ಲ ಸೌಕರ್ಯಗಳನ್ನು ಹೊಂದಿದ್ದು, ಮೀನು ಮಾರಾಟ ಮಾಡಲು ಅನುಕೂಲ ಸ್ಥಳವಾಗಿದೆ ಎಂದಿದ್ದಾರೆ.

    ಈಗಿರುವ ಕಟ್ಟಡ ಶಿಥಿಲಾವಸ್ಥೆಗೆ ತಲುಪಿಲ್ಲ. ಅಲ್ಪ, ಸ್ವಲ್ಪ ರಿಪೇರಿ ಮಾಡಿದರೆ ಮೀನು ಮಾರಾಟಕ್ಕೆ ಯೋಗ್ಯ ಸ್ಥಳವಾಗಿದೆ. ರಂಗಿನಕಟ್ಟೆ, ಸಾಗರ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುವವರನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಹಳೇ ಮೀನು ಮಾರುಕಟ್ಟೆ ಸ್ಥಳಾಂತರ ಮಾಡಲು ನಾವು ಅವಕಾಶ ನೀಡುವುದಿಲ್ಲ. ನಮಗೆ ಅಲ್ಲಿಯೇ ಮೀನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಮಹಿಳೆಯರು ಮನವಿಯಲ್ಲಿ ಆಗ್ರಹಿಸಿದರು.

    ಶಾಸಕ ಸುನೀಲ ನಾಯ್ಕಗೆ ಮನವಿ: ಶಿರಾಲಿಯಲ್ಲಿರುವ ಶಾಸಕ ಸುನೀಲ ನಾಯ್ಕ ಅವರ ಮನೆಗೆ ಭೇಟಿ ನೀಡಿದ ಮೀನುಗಾರ ಮಹಿಳೆಯರು ಮೀನು ಮಾರುಕಟ್ಟೆ ಸ್ಥಳಾಂತರ ಮಾಡದಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಪುರಸಭೆ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗೆ ಕರೆ ಮಾಡಿ ತಕ್ಷಣಕ್ಕೆ ಮೀನು ಮಾರುಕಟ್ಟೆ ಸ್ಥಳಾಂತರ ಮಾಡದಂತೆ ತಿಳಿಸಿದ್ದಾರೆ. ಮೀನುಗಾರ ಮಹಿಳೆಯರಾದ ಸಣ್ಣಿ ಮೊಗೇರ, ಗಿರಿಜಾ ಮೊಗೇರ, ದೇವಿ ಮೊಗೇರ, ಭವಾನಿ ಮೊಗೇರ, ಧನವತ್ತಿ ಮೊಗೇರ, ಕೃಷ್ಣ ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts