More

    ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣ ಯಾವಾಗ?

    ಕುಮಟಾ: ಪಟ್ಟಣದ ಮೀನು ಮಾರುಕಟ್ಟೆ ಪ್ರಾಂಗಣದಲ್ಲಿ ಕಳೆದ ಎರಡು ವರ್ಷದಿಂದ ನಿರ್ವಿುಸಲಾಗುತ್ತಿರುವ ನೂತನ ಮೀನು ಮಾರುಕಟ್ಟೆ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ. ಅಲ್ಲದೆ, ಉದ್ಘಾಟನೆಗೂ ಮುನ್ನವೇ ಮೇಲ್ಛಾವಣಿಗೆ ಹಾಕಿರುವ ಶೀಟ್​ಗಳ ಮೂಲಕ ಮಳೆ ನೀರು ಸೋರುತ್ತಿದೆ ಎಂದು ಸದಸ್ಯ ಎಂ.ಟಿ. ನಾಯ್ಕ ಆರೋಪಿಸಿದರು.

    ಪಟ್ಟಣದ ಪುರಸಭೆಯ ರಾರಾ ಅಣ್ಣಾ ಪೈ ಸಭಾಭವನದಲ್ಲಿ ಸೋಮವಾರ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

    ಉತ್ತರಿಸಿದ ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಎರಡು ವರ್ಷಗಳ ಹಿಂದೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಮೀನು ಮಾರುಕಟ್ಟೆಗೆ 90 ಲಕ್ಷ ರೂಪಾಯಿ ಮಂಜೂರು ಮಾಡಿ ಪುರಸಭೆಯ ಅನುಮತಿ ಇಲ್ಲದೇ ಕಾಮಗಾರಿ ಆರಂಭಿಸಿದ್ದರು. ಹೀಗಾಗಿ ಪ್ರಾಧಿಕಾರದವರಿಗೆ ಕೆಲಸ ನಿಲ್ಲಿಸುವುದಾಗಿ ಎಚ್ಚರಿಸಿದ್ದೆ, ಬಳಿಕ ಅವರು ಪರವಾನಗಿ ಪಡೆದು ಕಾಮಗಾರಿ ಆರಂಭಿಸಿದರು. ಕಟ್ಟಡ ಕಾಮಗಾರಿ ಮುಗಿಯದ ಹೊರತು ಉಳಿದ ಪೂರಕ ಅಭಿವೃದ್ಧಿ ಕೆಲಸ ಮಾಡಲಾಗದೇ ಗೊಂದಲವಾಗಿದೆ. ಹಾಲಿ ಶಾಸಕರ ನಿರ್ದೇಶನದ ಮೇರೆಗೆ ಉತ್ತಮ ಮೀನು ಮಾರುಕಟ್ಟೆ ನಿರ್ವಿುಸುತ್ತಿದ್ದು, ಕೆಲಸ ಶೀಘ್ರ ಮುಗಿಯಲಿದೆ ಎಂದರು. ಉಪಾಧ್ಯಕ್ಷ ರಾಜೇಶ ಪೈ ಹಾಗೂ ಸಭಾನಾಯಕ ಅನಿಲ ಹರ್ಮಲಕರ ಮಾತನಾಡಿ, ಇತ್ತೀಚೆಗಷ್ಟೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಹೊಸ ಕಟ್ಟಡಕ್ಕೆ ತಾಗಿ ಹಾಗೂ ಮೇಲಂತಸ್ತಿನಲ್ಲಿ ಶೌಚಗೃಹ, ಜತೆಗೆ ನೀರಿನ ಘಟಕ ನಿರ್ವಿುಸಲಾಗುತ್ತದೆ. ಒಮ್ಮೆ ಕಟ್ಟಡ ಕಾಮಗಾರಿ ಪೂರ್ಣವಾದರೆ ಗಟಾರ ನಿರ್ವಣ, ದೀಪ ಅಳವಡಿಸಲಾಗುವುದು ಎಂದರು. ಪಲ್ಲವಿ ಮಡಿವಾಳ ಮಾತನಾಡಿ, ಪಟ್ಟಣದಲ್ಲಿ ಈಜುಗೊಳವಿಲ್ಲ. ಪುರಸಭೆ ಜಾಗದಲ್ಲಿ ಈಜುಗೊಳ ನಿರ್ವಿುಸಬೇಕು. ಶುಲ್ಕ ವಿಧಿಸಿ ಸಾರ್ವಜನಿಕರ ಬಳಕೆಗೆ ನೀಡಿದರೆ ಆದಾಯವೂ ಬರುತ್ತದೆ ಎಂದರು. ಎಂ.ಟಿ. ನಾಯ್ಕ ಮಾತನಾಡಿ, ಪುರಸಭೆಯ ಕಾರ್ಯಾಲಯವನ್ನು ಬೇರೆಡೆ ಸುಸಜ್ಜಿತವಾಗಿ ಕಟ್ಟುವ ಪ್ರಯತ್ನ ಮಾಡಬೇಕು ಎಂದರು.

    ರಾಜೇಶ ಪೈ ಪ್ರತಿಕ್ರಿಯಿಸಿ, 7 ವರ್ಷದ ಹಿಂದೆ ಪುರಸಭೆಯ ತರಕಾರಿ ಹಣ್ಣುಗಳ ಮಾರುಕಟ್ಟೆ ಜಾಗದಲ್ಲಿ ಪುರಸಭೆ ಕಾರ್ಯಾಲಯ ನಿರ್ವಿುಸುವ ಪ್ರಸ್ತಾವನೆ ರೂಪಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಪರ್ಯಾಯ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಮುಂದಡಿಯಿಡುತ್ತಿದ್ದೇವೆ ಎಂದರು. ಉಳಿದಂತೆ ಸರ್ಕಾರದ ಹೊಸ ಸುತ್ತೋಲೆಯಂತೆ 2021-22ನೇ ಸಾಲಿಗೆ ಆಸ್ತಿ ತೆರಿಗೆ ವಿಧಿಸಿ ಜಾರಿಗೊಳಿಸುವ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts