More

    ಮಾ. 4ಕ್ಕೆ ಹುಬ್ಬಳ್ಳಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನ, ಉಣಕಲ್ಲನಲ್ಲಿ ನಡೆಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

    ಹುಬ್ಬಳ್ಳಿ: ನಗರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮೆ್ಮೕಳನವನ್ನು ಕವಿ, ನಿವೃತ್ತ ಶಿಕ್ಷಕ, ಶರಣ ಸಿ.ಬಿ. ಮರಿಗೌಡ್ರ ಸರ್ವಾಧ್ಯಕ್ಷತೆಯಲ್ಲಿ ಮಾರ್ಚ್ 4ರಂದು ಉಣಕಲ್ಲ ಸಿದ್ದಪ್ಪಜ್ಜನ ಹೊಸಮಠದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ.

    ಇಲ್ಲಿಯ ಉಣಕಲ್ಲನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಸರ್ವಾಧ್ಯಕ್ಷರು ಹಾಗೂ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯನ್ನು ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನದಿಂದ ಪ್ರಾರಂಭಿಸಿ ಉಣಕಲ್ಲ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಸದ್ಗುರು ಶ್ರೀ ಸಿದ್ದಪ್ಪಜ್ಜನ ದೇವಸ್ಥಾನದ ಕಲ್ಯಾಣ ಮಂಟಪದ ಪ್ರಧಾನ ವೇದಿಕೆಗೆ ತಲುಪಿಸಲು ನಿರ್ಣಯಿಸಲಾಯಿತು.

    ಸಮ್ಮೇಳನಕ್ಕೆ ಸಂಬಂಧಿಸಿದ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲು ಸಹಕಾರಿಯಾಗುವಂತೆ ಫೆ. 19ರಂದು ಬೆಳಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನದ ಕಚೇರಿ ಪ್ರಾರಂಭಿಸಲು ನಿರ್ಧರಿಸಲಾಯಿತು.

    ಅಧ್ಯಕ್ಷತೆ ವಹಿಸಿದ್ದ ಡಾ. ಸಿದ್ದಯ್ಯ ಹಿರೇಮಠ ಮಾತನಾಡಿ, ಸಮ್ಮೇಳನದಲ್ಲಿ ಉತ್ತಮ ಸಾಹಿತ್ಯ ಸಂಸ್ಕೃತಿ, ನಾಡು ನುಡಿಯ ಬಗ್ಗೆ ಚಿಂತನೆ ನಡೆಯಲಿ, ಕನ್ನಡ ಭಾಷಾಭಿಮಾನ ಇನ್ನೂ ಹೆಚ್ಚು ಮೂಡಲಿ ಎಂದು ಆಶಯ ವ್ಯಕ್ತಪಡಿಸಿದರು.

    ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, 25 ವರ್ಷಗಳ ನಂತರ ದೊಡ್ಡ ಸಾಹಿತ್ಯಕ ಕಾರ್ಯಕ್ರಮವನ್ನು ಸಂಘಟಿಸುವ ಅವಕಾಶ ಉಣಕಲ್ಲಗೆ ಲಭಿಸಿದೆ. ಗ್ರಾಮದ ಜನತೆಯು ಸಾಹಿತ್ಯ ಕಾರ್ಯಕ್ಕೆ ಕೈಜೋಡಿಸಲಿದ್ದಾರೆ ಎಂದರು.

    ಪ್ರೊ. ಕೆ.ಎಸ್. ಕೌಜಲಗಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಿರಿಯ ಕವಿ ಎಸ್.ಐ. ನೇಕಾರ, ಚೆನಬಸಪ್ಪ ಧಾರವಾಡಶೆಟ್ರ, ಡಾ. ಎಂ.ಎಸ್. ಹುಲ್ಲೊಳ್ಳಿ, ರಾಚಪ್ಪ ಹೆಬ್ಬಳ್ಳಿ, ಮೂಗಬಸ್ತ, ಕವಿ ಎಸ್.ಎಸ್. ಕರಡಿ, ಡಾ. ಬಿ.ಎಸ್. ಮಾಳವಾಡ, ಡಾ. ಕೆ.ಎ. ದೊಡ್ಡಮನಿ, ಈರಣ್ಣ ಎಮ್ಮಿ, ಸಂಧ್ಯಾ ದಿಕ್ಷೀತ, ಡಾ. ಲಿಂಗರಾಜ ಮುಳ್ಳಳ್ಳಿ, ರಮೇಶ ಅಂಗಡಿ, ಸುಶೀಲೇಂದ್ರ ಕುಂದರಗಿ, ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಮಾತನಾಡಿ ಸಲಹೆ ಸೂಚನೆ ನೀಡಿದರು.

    ಗಿರೀಜಾ ಚಿಕ್ಕಮಠ, ರಾಜಶೇಖರ ಇಂಡಿ, ಉದಯಚಂದ್ರ ದಿಂಡವಾರ, ಜಯಶ್ರೀ ಬೇವೂರ, ಸುನೀತಾ ಹುಬಳಿಕರ, ಮೃತ್ಯುಂಜಯ ಮಟ್ಟಿ, ಡಾ. ಸುರೇಶ ಹೊರಕೇರಿ, ಜಯಶ್ರೀ ಹಿರೇಮಠ, ಅಶೋಕ ಸನ್ನಿ, ಎಂ.ಎಸ್. ಮುದಕನಗೌಡ್ರ ಇತರರು ಇದ್ದರು.

    ಎಸ್.ಎಸ್. ಕರಡಿ ಪ್ರಾರ್ಥಿಸಿದರು. ನಗರ ತಾಲೂಕು ಕಸಾಪ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಸ್ವಾಗತಿಸಿದರು. ಎಸ್.ಐ. ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಹೂಗಾರ ವಂದಿಸಿದರು. ವಿರೂಪಾಕ್ಷ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts