More

    ಮಾಸುತ್ತಿದೆ ಕಲಾವಿದರ ಬಣ್ಣದ ಬದುಕು

    ರೋಣ: ಮುಖಕ್ಕೆ ಬಣ್ಣ ಹಚ್ಚಿಕೊಂಡು ಸರ್ವರ ಮನರಂಜಿಸುತ್ತ ಐತಿಹಾಸಿಕ ರಂಗಭೂಮಿ ಪರಂಪರೆ ಉಳಿಸುತ್ತಿರುವ ಕಲಾವಿದರ ಬದುಕು ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿದೆ.
    ಕೋವಿಡ್-19 ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ನಾಟಕಗಳ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ನಾಟಕ ಕಂಪನಿಗಳ ಕಲಾವಿದರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಹೆಸರಾಂತ ಡ್ರಾಮಾ ಕಂಪನಿಗಳಲ್ಲಿ ಒಂದಾದ ಮಂಡಲಗೇರಿ ಗುರು ತೋಂಟದಾರ್ಯ ನಾಟ್ಯ ಸಂಘದಲ್ಲಿ ಕೆಲಸ ಮಾಡುವ 30ಕ್ಕೂ ಹೆಚ್ಚು ಕಲಾವಿದರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
    ಈಗಾಗಲೇ ಎಲ್ಲ ವಾಣಿಜ್ಯ ವಲಯಗಳು ಪ್ರಾರಂಭವಾಗಿವೆ. ಸರ್ಕಾರವು ನಾಟಕ ಕಂಪನಿಗಳಿಗೆ ಕಲೆ ಪ್ರದರ್ಶಕ್ಕೆ ಅವಕಾಶ ನೀಡಿ ಕಲಾವಿದರ ಜೀವನಕ್ಕೆ ದಾರಿ ಮಾಡಿಕೊಡಬೇಕು ಎಂದು ರೋಣದಲ್ಲಿ ಟೆಂಟ್ ಹಾಕಿರುವ ಮಂಡಲಗೇರಿ ಗುರು ತೋಂಟದಾರ್ಯ ನಾಟ್ಯ ಸಂಘದ ಕಲಾವಿದರಾದ ನಟರಾಜ ದಾವಣಗೇರಿ, ಗೀತಾ ಬೆಂಗಳೂರ, ನೇತ್ರಾ ಅರಳಿಕಟ್ಟಿ, ಪಿಂಟು ವಿಜಯಪೂರ, ಇರ್ಫಾನ್ ಮುಂಡರಗಿ ಅವರು ‘ವಿಜಯವಾಣಿ’ ಮುಂದೆ ಕಣ್ಣೀರು ಹಾಕಿದರು.
    ಮೂಕ ಪ್ರಾಣಿಗಳಿಗಿಲ್ಲ ಆಹಾರ: ನಾವು ಎಲ್ಲಿಯೇ ಕಂಪನಿಯನ್ನು ಹಾಕಲಿ ಎರಡು ಶ್ವಾನಗಳು, ಒಂದು ಬೆಕ್ಕು ಸದಾ ನಮ್ಮ ಜೊತೆಯಲ್ಲಿಯೇ ಬರುತ್ತವೆ. ಅವುಗಳ ಆಹಾರಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ. ಬಹುತೇಕ ಕಲಾವಿದರ ಬದುಕು ಕಷ್ಟದಿಂದಲೇ ಆರಂಭವಾಗಿ ಕಷ್ಟದಲ್ಲಿಯೇ ಕೊನೆಗಳಿಯುವಂತಾಗಿದೆ. ಕೂಡಲೆ ಸರ್ಕಾರ ಸೂಕ್ತ ನಿರ್ದೇಶನ ಕೈಗೊಂಡು ಕಲಾವಿದರ ಬದಕನ್ನು ಹಸನಾಗಿಬೇಕು. ದಾನಿಗಳು ನಾಟಕ ಕಂಪನಿ ಆರಂಭವಾಗುವವರೆಗೆ ಕಲಾವಿದರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

    58 ವರ್ಷ ಮೇಲ್ಪಟ್ಟ ರಂಗಭೂಮಿ ಕಲಾವಿದರು ನಮ್ಮ ಇಲಾಖೆಗೆ ಅರ್ಜಿ ಸಲ್ಲಿಸಿದರೆ 2 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ. ಇದನ್ನು ಹೊರತುಪಡಿಸಿ ಯಾವುದೇ ರೀತಿ ಸೌಲಭ್ಯಗಳಿಲ್ಲ. ಇನ್ನು ನಾಟಕ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದರೆ ಮಾತ್ರ ನಾಟಕ ಪ್ರದರ್ಶನ ಪ್ರಾರಂಭವಾಗುತ್ತದೆ.
    | ರವೀಂದ್ರಸ್ವಾಮಿ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts