More

    ಮಾಸಿಕ ಕಂತು ಕಟ್ಟಲು ಅನುಕೂಲವಾಗುವ ರೀತಿ ಸಹಕರಿಸಿ

    ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿನ ಮಹಾತ್ಮ ಗಾಂಧಿ ತಂಗು ದಾಣದಲ್ಲಿರುವ ಸಾರಿಗೆ ಸದನ ಕಚೇರಿಯಲ್ಲಿ ಗುಲ್ಬರ್ಗ ಲಾರಿ ಮಾಲೀಕರ ಸಂಘದ ಸಭೆ ಗುರುವಾರ ಜರುಗಿತು.
    ಸಂಘದ ಅಧ್ಯಕ್ಷ ಹಣಮಂತ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್ 19 ನಿಂದ ಆದ ಭಾರಿ ನಷ್ಟದ ಬಗೆ ಲಾರಿ ಮಾಲಿಕರು ಅನುಭವಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
    ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಾಗುತ್ತಿರುವುದರಿಂದ ಲಾರಿ ಮಾಲಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಿಸುತ್ತಿರುವುದರಿಂದ ತುಂಬಾ ನಷ್ಟವಾಗುತ್ತಿದೆ. ನಗರದ ಎಲ್ಲ ಫೈನಾನ್ಸ್ ಹಾಗೂ ಬ್ಯಾಂಕ್ ವ್ಯವಸ್ಥಾಪಕರಿಗೆ ಸಭೆಗೆ ಆಹ್ವಾನಿಸಿ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಮುಂದಿನ ಮಾಸಿಕ ಕಂತುಗಳನ್ನು ಕಟ್ಟಲು ಸ್ವಲ್ಪ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡುವ ಮೂಲಕ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಯಿತು.
    ಉಪಾಧ್ಯಕ್ಷ ಪ್ರಕಾಶ ಖೇಮಜಿ, ಯುನುಸ್ ಖಾನ್, ಮಹ್ಮದ ಅಷ್ಪಕ್ ಲಾಲ್, ಶಿವಕುಮಾರ ಡೊಂಗರಗಾಂವ, ಅಸದುಲ್ಲಾ ಬೇಗ, ಬಸವರಾಜ, ಖಾಜಾ ಪಟೇಲ್, ಶೇರ್ಅಲಿ, ಗುಂಡಪ್ಪ ಜನೂರ, ಪೃಥ್ವಿರಾಜ ಗದಲೆಗಾಂವ್, ಬಾಬು ನಾಡತ್, ವಿಜಯಕುಮಾರ ಗುತ್ತೇದಾರ, ನಾಗರಾಜ ಕುಂಬಾರ, ಬಶೀರ್ ಪಟವಾಡಿ, ಮೊಹ್ಮದ್ ಮಂಜೂರ್ ಇಲೈಲಿ, ಶಬ್ಬೀರ ಪಟೇಲ್, ಸೈಯದ ಲಿಯಾಕತ್ ಅಲಿ, ಪ್ರಲ್ಹಾದ ಘನಾತೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts