More

    ಮಾಸಾಂತ್ಯದಲ್ಲಿ ತುಂಗಾ ಜಲಾಶಯಕ್ಕೆ ಬಾಗಿನ ನಿರ್ಧಾರ

    ಚಿತ್ರದುರ್ಗ: ಭರ್ತಿಯಾಗಿರುವ ಶಿವಮೊಗ್ಗ ಗಾಜನೂರಿನ ತುಂಗಾ ಜಲಾಶಯಕ್ಕೆ ಜುಲೈ ಅಂತ್ಯಕ್ಕೆ ಬಯಲು ಸೀಮೆ ಬಾಗಿನ ಸಮರ್ಪಿಸಲು ಚಿತ್ರ ದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಹೇಳಿ ದರು.

    ಚಿತ್ರದುರ್ಗ ತಾಲೂಕು ಕಾತ್ರಾಳು ಕೆರೆಗೆ ತುಂಗಾ ನದಿ ನೀರು ಪೂರೈಕೆಯಾದ ಹಿನ್ನೆಲೆಯಲ್ಲಿ ಸಮಿತಿಯಿಂದ ಶನಿವಾರ ಕೆರೆಯ ಅಂಗ ಳದಲ್ಲಿ ಏರ್ಪಡಿಸಿದ್ದ ತರಳಬಾಳು ಶ್ರೀ ಡಾ.ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಅವರಿಗೆ ಕೃತಜ್ಞತೆ ಸಮರ್ಪಿಸುವ ಕಾರ‌್ಯಕ್ರಮದಲ್ಲಿ ಮಾತ ನಾಡಿದ ಅವರು,ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ತುಂಗಾ ನದಿಯಿಂದ ಹೆಚ್ಚು ನೀರು ದೊರಕಿದೆ. ಈ ಹಿನ್ನೆಲೆಯಲ್ಲಿ ಜಲಾಶ ಯಕ್ಕೆ ತೆರಳಿ ಬಾಗಿನ ಸಮರ್ಪಿಸಲಾಗುವುದು. ಈ ಕಾರ‌್ಯಕ್ರಮದಲ್ಲಿ ಸಾವಿರಾರು ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

    ತರಳಬಾಳು ಶ್ರೀಗಳ ದೂರದೃಷ್ಟಿಯಿಂದಾಗಿ ಜಿಲ್ಲೆಯ 42 ಕೆರೆಗಳಿಗೆ ತುಂಗಾ-ಭದ್ರಾ ನದಿಗಳಿಂದ ನೀರು ದೊರೆಯಲಿದ್ದು,ಈ ಎಲ್ಲ ಕೆರೆಗಳ ಅಚ್ಚಕಟ್ಟುದಾರರ ಸಭೆ ನಡೆಸಿ,ಶ್ರೀಗಳಿಗೆ ಗೌರವ ಸಮರ್ಪಿಸಲಾಗುವುದು. ಇದಕ್ಕಾಗಿ ಶ್ರೀಗಳನ್ನು ಭೇಟಿಯಾಗಿ ಅವರ ಅಪ್ಪಣೆ ಪಡೆ ಯಲಾಗುವುದು ಎಂದರು.

    ಸಮಿತಿ ಪ್ರಧಾನ ಕಾರ‌್ಯದರ್ಶಿ ಕೆ.ಆರ್.ದಯಾನಂದ್ ಮಾತನಾಡಿ,ಕೆರೆಗಳ ದುರಸ್ತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಣ್ಣ ನೀರಾ ವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ,ತರಳಬಾಳು ಶ್ರೀಗಳ ಇಚ್ಚಾಶಕ್ತಿ ಫಲವಾಗಿ ಕಾತ್ರಾಳು ಕೆರೆಗೆ ನೀರು ಹರಿದಿದೆ.

    ಹರಿಹರದ ರಾಜನಹಳ್ಳಿ ಸಮೀಪದ ತುಂಗಾಭದ್ರಾ ನದಿಯಿಂದ 565 ಕೋಟಿ ರೂ. ವೆಚ್ಚದಲ್ಲಿ 42 ಕೆರೆಗಳಿಗೆ ತೀರು ತುಂಬಿಸಲಾಗುತ್ತಿದೆ. ಕಾತ್ರಾಳು ಕೆರೆಗೆ ನೀರು ಬಂದಿ ದ್ದು,ಮುದ್ದಾಪುರ ಹಾಗೂ ಸುಲ್ತಾನಿಪುರ ಕೆರೆಗಳಿಗೆ ನೀರು ಪೂರೈಕೆ ಕಾಮಗಾರಿ ನಡೆಯುತ್ತಿದೆ ಎಂದರು.

    ಚಿಕ್ಕಪ್ಪನಹಳ್ಳಿರುದ್ರಸ್ವಾಮಿ,ಮುದ್ದಾಪುರನಾಗರಾಜ್,ಕಬ್ಬಿಗೆರೆ ನಾಗರಾಜ್,ಸುರೇಶ್‌ಬಾಬು,ರಾಜಪ್ಪ,ಮುದ್ದಾಪುರ ಮಂಜುನಾಥ್, ಹಿರೇಕಬ್ಬಿಗೆರೆ ರಾಜಪ್ಪ,ಜಯಣ್ಣ,ರಾಯಣ್ಣನಹಳ್ಳಿ ಅನಿಲ್‌ಕುಮಾರ್,ಪ್ರೇಮ್‌ರಾಜ್,ಸಿದ್ದವ್ವನದುರ್ಗ ಶಿವಕುಮಾರ್,ಪರಮೇಶ್ವರಪ್ಪ, ಶಿವಣ್ಣಮೇಸ್ಟ್ರು,ವಿಜಾಪುರದ ಎಸ್‌ಎಂ ತಿಪ್ಪೇಸ್ವಾಮಿ,ನಾಗರಾಜಪ್ಪ,ರೇವಣಸಿದ್ದಪ್ಪ ಮತ್ತಿತರ ರೈತ ಮತ್ತಿತರ ಸಂಘಟನೆಗಳ ಪ್ರಮುಖರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts