More

    ದಂಡಾವತಿ ನದಿಗೆ ಬಾಗಿನ ಸಮರ್ಪಣೆ

    ಸೊರಬ: ಕಳೆದ ತಿಂಗಳು ಮುಂಗಾರು ಮಳೆಯಾಗದೆ ರೈತರಲ್ಲಿ ಆತಂಕ ಮೂಡಿಸಿತ್ತು. ಆದರೆ ಜುಲೈ ಆರಂಭದಿAದಲೂ ಸತತ ಮಳೆಯಾಗುತ್ತಿದ್ದು ದಂಡಾವರಿ ನದಿ ಮೈದುಂಬಿ ಹರಿದು ರೈತರ ಆತಂಕ ದೂರ ಮಾಡಿದೆ ಎಂದು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಹೇಳಿದರು.

    ಮಂಗಳವಾರ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಎದುರು ತುಂಬಿ ಹರಿಯುತ್ತಿರುವ ದಂಡಾವತಿ ನದಿಗೆ ಗಂಗೆ ಪೂಜೆ ಸಲ್ಲಿಸಿ, ನದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು.
    ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ದಂಡಾವತಿ ನದಿ ತುಂಬಿ ಹರಿಯುತ್ತಿದ್ದು ರೈತರಲ್ಲಿ ಸಂತಸ ತಂದಿದೆ. ಯಾವುದೆ ಅನಾಹುತ ಆಗದಿರಲಿ ಎಂದು ಹಾಗೂ ರೈತರಿಗೆ ಉತ್ತಮ ಬೆಳೆ ಕೈ ಸೇರಲಿ, ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಲಭಿಸಲಿ ಎಂದು ಪ್ರಾರ್ಥಿಸಿ ಸಮಿತಿಯಿಂದ ಬಾಗಿನ ಅರ್ಪಿಸಲಾಗಿದೆ ಎಂದರು.
    ಗೋ ಸಂರಕ್ಷಣಾ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಸಹ ಕಾರ್ಯದರ್ಶಿ ಶರತ್ ಸ್ವಾಮಿ, ಪ್ರಮುಖರಾದ ಬಂಗಾರಪ್ಪ ಶೇಟ್, ಗುರುಶಾಂತಪ್ಪ ಗೌಡ, ಸುಮನಾ ಚಿದಾನಂದ ಗೌಡ, ಪುಷ್ಪಾ ಸಿದ್ದಲಿಂಗೇಶ್ವರ ಗುತ್ತಿ, ಪ್ರವೀಣ್ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts