More

    ಮಾಸಾಂತ್ಯಕ್ಕೆ ಜೆಡಿಯು ಅಭ್ಯರ್ಥಿಗಳ ಪಟ್ಟಿ-ರಾಜ್ಯಾಧ್ಯಕ್ಷ ಮಹಿಮ ಜೆ. ಪಟೇಲ್ ಹೇಳಿಕೆ 

    ದಾವಣಗೆರೆ: ರಾಜ್ಯದ ವಿಧಾನಸಭಾ ಚುನಾವಣೆಗೆ ಸ್ಫರ್ಧಿಸಲಿರುವ ಸಂಯುಕ್ತ ಜನತಾದಳದ ಅಭ್ಯರ್ಥಿಗಳ ಪಟ್ಟಿಯನ್ನು ಮಾಸಾಂತ್ಯದೊಳಗೆ ಬಿಡುಗಡೆಗೊಳಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜೆ. ಪಟೇಲ್ ಹೇಳಿದರು.
    ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಸಾಮಾಜಿಕ ಕಳಕಳಿ ಹಾಗೂ ವ್ಯವಸ್ಥೆಯ ಬದಲಾವಣೆ ಬಯಸುವವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದರು.
    ಚುನಾವಣೆ ವೇಳೆ ಹಣ-ಹೆಂಡ ಇತ್ಯಾದಿ ಆಮಿಷ ಒಡ್ಡುವವರನ್ನು ಮತದಾರರು ‘ಕಳ್ಳರಂತೆ’ ನೋಡುವ ವ್ಯವಸ್ಥೆ ಬರಬೇಕಿದೆ. ಈ ನಿಟ್ಟಿನಲ್ಲಿ ಮತದಾರರು ಬದಲಾವಣೆ ಆಗಬೇಕಿದೆ ಎಂದರು.
    ಸ್ವಚ್ಛ ರಾಜಕಾರಣ ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸುವ ವಿಚಾರವಾಗಿ ಅನೇಕ ಸ್ವಾಮೀಜಿಗಳೊಂದಿಗೆ ಸಂಪರ್ಕಿಸಿದ್ದೇನೆ. ಚುನಾವಣೆಯಲ್ಲಿ ರೈತರು. ವಕೀಲರು, ಇಂಜಿನಿಯರ್, ವೈದ್ಯರು, ಮಹಿಳೆಯರು ಒಳಗೊಂಡ ವೇದಿಕೆ ಸಿದ್ದಪಡಿಸಬೇಕಿದೆ. ವಿಕೇಂದ್ರಿಕೃತ ವ್ಯವಸ್ಥೆಗಾಗಿ ಉತ್ತಮ ಆಲೋಚನೆ ಉಳ್ಳವರನ್ನು ಜೆಡಿಯು ಹುಡುಕುತ್ತಿದೆ ಎಂದು ಹೇಳಿದರು.
    ಚನ್ನಗಿರಿ ಕ್ಷೇತ್ರ ರಾಜ್ಯದಲ್ಲೇ ಹೆಸರಾಗಿದೆ. ಭ್ರಷ್ಟಾಚಾರ ಎಂಬುದು ದೇಶವ್ಯಾಪಿ ಹರಡಿದ ಸಮಸ್ಯೆ. ದುಡ್ಡಿನ ಜತೆ ಸಿಕ್ಕಿ ಹಾಕಿಕೊಂಡವರಷ್ಟೇ ತಪ್ಪಿತಸ್ಥರಲ್ಲ. ಕೆಲವರು ಸಿಕ್ಕಿ ಹಾಕಿಕೊಳ್ಳದೆ ಮಠಾಧೀಶರೊಂದ ಸನ್ಮಾನ ಮಾಡಿಸಿಕೊಂಡವರೂ ದೊಡ್ಡವರಾಗಿದ್ದಾರೆ. ಈಗಿನ ಸರ್ಕಾರ ತೊಲಗಿ ಮತ್ತೊಂದು ಸರ್ಕಾರ ಬಂದರೆ ಭ್ರಷ್ಟಾಚಾರ ನಿಂತುಹೋಗುತ್ತದೆ ಎಂಬ ಭ್ರಮೆಯಲ್ಲೂ ನಾವಿಲ್ಲ ಎಂದರು.
    ಚನ್ನಗಿರಿ ಕ್ಷೇತ್ರದಲ್ಲಾದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಎಲ್ಲ ಪಕ್ಷಗಳಿಂದ ಬುಲಾವ್ ಬಂದಿದೆ. ಬಿಜೆಪಿಯಿಂದ ಹೆಚ್ಚಿನ ಅವಕಾಶ ಬರುತ್ತಿದೆ. ಯಾವುದೇ ನಿರ್ಧಾರ ಮಾಡಿಲ್ಲ. ನಾನು ಸ್ಪರ್ಧಿಸಬೇಕಾದರೆ ಕ್ಷೇತ್ರದಲ್ಲಿನ 1 ಲಕ್ಷ ಮತದಾರರು ಬೆಂಬಲಿಸಬೇಕು ಎಂದರು.
    ಸುದ್ದಿಗೋಷ್ಠಿಯಲ್ಲಿ ಸಿದ್ದಯ್ಯ, ಮುದ್ದಾಪುರ ರೆಹಮಾನ್‌ಸಾಬ್, ಮುದೇನೂರು ಶಂಕರಗೌಡ, ಸುನೀತಾ, ಬಸವರಾಜ ತಿಳುವಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts