More

    ಮಾನಸಿಕ ಧೈರ್ಯ ತುಂಬುವ ಕಿರುಚಿತ್ರ

    ಸಾಗರ: ಪ್ರಪಂಚವನ್ನು ಕರೊನಾ ವೈರಸ್ ಆವರಿಸಿರುವ ಸಂದರ್ಭದಲ್ಲಿ ಜನರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿವೆ. ಸ್ಥಳೀಯವಾಗಿ ಕೆಲ ಯುವಕರು ಸೇರಿ ಮಾನಸಿಕ ಧೈರ್ಯ ತುಂಬುವ ಕಿರುಚಿತ್ರ ತಯಾರಿಸಿರುವುದು ಉತ್ತಮ ಬೆಳವಣಿಗೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

    ತಾಲೂಕಿನ ಮುಂಗರವಳ್ಳಿಯ ಚೈತನ್ಯ ವಿಶೇಷ ಶಿಕ್ಷಣ ಶಾಲೆಯಲ್ಲಿ ಮೈಲಿಗಲ್ಲು ಯುಟ್ಯೂಬ್ ಪ್ರೊಡಕ್ಷನ್ ನಿರ್ವಿುಸಿರುವ ‘ಪರಿತ್ಯಕ್ತೆ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ಭಾರತೀಯ ಹೆಣ್ಣುಮಗಳೊಬ್ಬಳ ಮನಸ್ಥಿತಿ ಬಿಂಬಿಸುವ ಪರಿತ್ಯಕ್ತೆ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿದ್ದು ಮಾನಸಿಕ ನೆಮ್ಮದಿ ಕಾಯ್ದುಕೊಳ್ಳುವತ್ತ ಮಾರ್ಗದರ್ಶನ ಮಾಡುತ್ತದೆ ಎಂದು ಹೇಳಿದರು.

    ಕಿರುಚಿತ್ರದ ನಿರ್ದೇಶಕ ಸುಶಾಂತ್ ಮುಂಗರವಳ್ಳಿ ಮಾತನಾಡಿ, ಲಾಕ್​ಡೌನ್ ಸಂದರ್ಭದಲ್ಲಿ ಒಂದಷ್ಟು ಕ್ರಿಯಾಶೀಲ ಮನಸ್ಸುಗಳು ಸೇರಿಕೊಂಡು ಪರಿತ್ಯಕ್ತೆ ಕಿರುಚಿತ್ರ ನಿರ್ವಿುಸಲಾಗಿದೆ. ಚಿತ್ರದಲ್ಲಿ ನೀನಾಸಂ ಅಧ್ಯಾಪಕ ಮಂಜು ಕೊಡಗು, ಶ್ವೇತಾ ರಾಣಿ, ವಿನಿತ್​ಕುಮಾರ್, ಪ್ರಸನ್ನ ಹುಣಸೆಕೊಪ್ಪ, ಪದ್ಮಶ್ರೀ ಅಭಿನಯಿಸಿದ್ದಾರೆ. ಸಂಪದಾ ಎಸ್. ಭಾಗವತ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದು, ಮಯೂರ ಅಂಬೆಕಲ್ಲು ಸಂಗೀತ, ಚೇತನ್ ದೇವರಾಜ್, ಕೆ.ಆರ್.ಅಶ್ವತ್ಥ ಸಹ ನಿರ್ದೇಶನ ಮಾಡಿದ್ದಾರೆ. ಕಿರುಚಿತ್ರ ಶೀಘ್ರದಲ್ಲೇ ಮೈಲಿಗಲ್ಲು ಯುಟ್ಯೂಬ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

    ಡಿಎಫ್​ಒ ಮೋಹನ್​ಕುಮಾರ್, ತಹಸೀಲ್ದಾರ್ ಕೆ.ಚಂದ್ರಶೇಖರ ನಾಯ್ಕ, ತಾಪಂ ಇಒ ಪುಷ್ಪಾ ಕಮ್ಮಾರ್, ಚೈತನ್ಯ ಶಿಕ್ಷಣ ಸಂಸ್ಥೆಯ ಎಂ.ಡಿ.ನಾಗರಾಜ್, ವಿದ್ಯಾಶಾಲೆ ಮುಖ್ಯಸ್ಥೆ ಶಾಂತಲಾ ಸುರೇಶ್, ಪ್ರಮುಖರಾದ ಬಿ.ಎಚ್.ರಾಘವೇಂದ್ರ, ಕವಲಕೋಡು ವೆಂಕಟೇಶ್, ಆನೆಗುಳಿ ಸುಬ್ರಾವ್, ಎಂ.ನಾಗರಾಜ್, ಗ್ರಾಪಂ ಅಧ್ಯಕ್ಷೆ ರೂಪಾ ರವಿ, ಉಪಾಧ್ಯಕ್ಷ ಮಂಜುನಾಥ್, ಪಿಡಿಒ ಕೃಷ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts