More

    ಮಾದರಿ ಜಿಲ್ಲೆಯಾಗಿಸಲು ಪಣ

    ಯರಗಟ್ಟಿ: ಜನರ ನಿರೀಕ್ಷೆಯಂತೆ ಅಭಿವೃದ್ಧಿ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯನ್ನು ಮಾದರಿಯಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
    ತಾಲೂಕಿನ ತಲ್ಲೂರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಬಹಳಷ್ಟು ವರ್ಷಗಳ ನಂತರ ಲೋಕೋಪಯೋಗಿ ಖಾತೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಇಲಾಖೆಯಿಂದ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಶೃತಿ ಯರಗಟ್ಟಿ ಅವರು ಐಎಎಸ್‌ನಲ್ಲಿ ತೇರ್ಗಡೆಯಾಗಿ ತಲ್ಲೂರ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಉನ್ನತ ಹುದ್ದೆ ಅಲಂಕರಿಸುವ ಅವರಿಂದ ಬಡವರ ದೀನ ದಲಿತ, ನಿರ್ಗತಿಕ ಸೇವೆ ದೊರೆಯಲಿ ಎಂದರು.
    ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಐಎಎಸ್‌ನಲ್ಲಿ ತೇರ್ಗಡೆಯಾಗಿದ ತಲ್ಲೂರ ಗ್ರಾಮದ ಕುಮಾರಿ ಶೃತಿ ಯರಗಟ್ಟಿ ಅವರನ್ನು ಗ್ರಾಮಸ್ಥರಿಂದ ಸನ್ಮಾನಿಸಲಾಯಿತು. ಮುಖಂಡರಾದ ರವೀಂದ್ರ ಯಲಿಗಾರ, ಮಹಾಂತೇಶ ಉಪ್ಪಿನ, ಪ್ರಕಾಶ ವಾಲಿ, ಫಕೀರಪ್ಪ ಹದ್ದನ್ನವರ, ಶಶಿಧರ
    ತಳವಾರ, ಬಸವರಾಜ ಪೂಜೇರ, ಶಿವಾನಂದ ಮಲಕನ್ನವರ, ಮಲ್ಲಿಕಾರ್ಜುನ ಕುಲಮಗೇರಿ, ನೀಲಕಂಠ ಶಿವಪೂಜೆ, ಜಗದೀಶ ಹೊಸಮಠ, ಬಸಪ್ಪ ರೊಕ್ಕದಕಟ್ಟಿ, ಮೌಲಾಸಾಬ್ ಆನಿ, ಚಂಬ್ಬನ್ನ ಲಕ್ಕನ್ನವರ, ಉಮಾರೂಢ ತಲ್ಲೂರ, ಮಲ್ಲಿಕಾರ್ಜುನ ಭೋವಿ, ಹನುಮಂತ ಮನ್ನಿಕೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts